ರಾಮನಗರ: ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ಸ್ಥಳೀಯವಾಗಿಯೇ ಕೂಲಿ ಒದಗಿಸಿ, ಆರ್ಥಿಕವಾಗಿ ಆಸರೆಯಾಗಿ ವಲಸೆ ತಪ್ಪಿಸುತ್ತಿದ್ದ ಮನರೇಗಾದಡಿ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ) ಹೊಸ ಹಣಕಾಸು ವರ್ಷಾರಂಭದಿಂದ ಯಾವುದೇ ಹೊಸ ಕಾಮಗಾರಿ ಶುರುವಾಗಿಲ್ಲ.

ಕೇಂದ್ರ ಸರ್ಕಾರವು ಕಳೆದ ವರ್ಷ ಮನರೇಗಾ ಯೋಜನೆ ಯನ್ನು ಮಾರ್ಪಾಡು ಮಾಡಿ, ವಿಬಿ ಜಿ ರಾಮ್ ಜಿ ಎಂದು ನಾಮಕರಣ ಮಾಡಿ ಡಿಸೆಂಬರ್ನಲ್ಲಿಯೇ ಜಾರಿಗೆ ತಂದಿದೆ. ಆದರೆ, ಅದಕ್ಕೆ ಪೂರಕವಾಗಿ ಸ್ಪಷ್ಟ ನಿಯಮ ಮತ್ತು ಮಾರ್ಗಸೂಚಿ ರಚಿಸದಿರುವುದರಿಂದ ಯೋಜನೆ ಅನುಷ್ಠಾನಕ್ಕೆ ಗ್ರಹಣ ಹಿಡಿದಿದೆ.

ಸದ್ಯ ಕಳೆದ ಹಣಕಾಸು ವರ್ಷದ ಅಧಿಯಲ್ಲಿ ಆರಂಭಿಸಿ ಅಪೂರ್ಣವಾಗಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಜಿಲ್ಲೆಯ 127 ಗ್ರಾಮ ಪಂಚಾಯಿತಿಗಳಿಗೆ ಸ್ಪಷ್ಟ ನಿರ್ದೇಶನಗಳನ್ನು ಜಿಲ್ಲಾ ಪಂಚಾಯಿತಿ ಸಿಇಒ ನೀಡಿದ್ದಾರೆ. ಅದನ್ನು ಬಿಟ್ಟರೆ, 2026–27ನೇ ಸಾಲಿನಲ್ಲಿ ಯಾವುದೇ ಕಾಮಗಾರಿ ಕುರಿತು ಸೂಚನೆ ಬಂದಿಲ್ಲ.

ಕಾರ್ಯಯೋಜನೆಗಿಲ್ಲ ಅನುಮೋದನೆ: ‘ಏಪ್ರಿಲ್ 1ರಿಂದ ಆರಂಭವಾಗಿರುವ ನೂತನ ಹಣಕಾಸು ವರ್ಷದಲ್ಲಿ ನರೇಗಾ ಯೋಜನೆಗೆ ಸಂಬಂಧಿಸಿದ ಯಾವುದೇ ಕಾರ್ಯಯೋಜನೆಗೆ ಅನುಮೋದನೆ ಸಿಕ್ಕಿಲ್ಲ’ ಎಂದು ಜಿಲ್ಲಾ ಪಂಚಾಯಿತಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನರೇಗಾ ಕಾಮಗಾರಿಗೆ ಸಂಬಂಧಿಸಿದಂತೆ ಈಗಾಗಲೇ ಎಲ್ಲಾ ಗ್ರಾಮ ಪಂಚಾಯಿತಿಗಳಿಂದಲೂ ಕಾರ್ಯಯೋಜನೆ ತಯಾರಾಗಿ ಸಲ್ಲಿಕೆಯಾಗಿದೆ. ಆದರೆ, ಅದಕ್ಕೆ ಯುಕ್ತಧಾರ ಜಿಯೋಸ್ಪೇಷಿಯಲ್ ಪ್ಲಾನಿಂಗ್ ಪೋರ್ಟಲ್ನಲ್ಲಿ (ಎನ್ಆರ್ಎಸ್ಸಿ) ಅನುಮೋದನೆ ಸಿಕ್ಕಿಲ್ಲ. ಹಾಗಾಗಿ, ಹೊಸದಾಗಿ ಯಾವುದೇ ಕಾಮಗಾರಿ ಆರಂಭಕ್ಕೆ ಅವಕಾಶ ಇಲ್ಲದಂತಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.