ರಾಮನಗರ: ಇಲ್ಲಿನ ನಗರಸಭೆ ಕಚೇರಿಗೆ ಹೊಂದಿಕೊಂಡಂತಿರುವ ಜಲಮಂಡಳಿ ಮತ್ತು ಪ್ರಶಸ್ತಿ ಭವನದ ಜಾಗದಲ್ಲಿ ಸುಸಜ್ಜಿತವಾದ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಸೋಮವಾರ ನಡೆದ ನಗರಸಭೆಯ ವಿಶೇಷ ಸಾಮಾನ್ಯಸಭೆಯು ಒಕ್ಕೊರಲಿನ ಸಮ್ಮಿತಿ ಸೂಚಿಸಿತು.

ವಾಣಿಜ್ಯ ಸಂಕೀರ್ಣದ ಜೊತೆಗೆ ಮಳೆಗಾಲಕ್ಕೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳುವ ಸಲುವಾಗಿ ಕರೆದಿದ್ದ ವಿಶೇಷ ಸಾಮಾನ್ಯಸಭೆಯಲ್ಲಿ, ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಅವರು ಸಂಕೀರ್ಣದ ವಿಷಯ ಪ್ರಸ್ತಾಪಿಸಿದರು.

‘ಯಾವ ಸ್ಥಳೀಯ ಸಂಸ್ಥೆ ತನ್ನದೇ ಆದ ಸ್ವಂತ ಆದಾಯದ ಮೂಲದೊಂದಿಗೆ ಆರ್ಥಿಕವಾಗಿ ಸಬಲವಾಗಿರುತ್ತದೊ, ಆ ಸ್ಥಳೀಯ ಸಂಸ್ಥೆಯು ಮೂಲಸೌಕರ್ಯಕ್ಕಾಗಿ ಸರ್ಕಾರದ ಕಡೆಗೆ ನೋಡುವುದಿಲ್ಲ. ನಮ್ಮ ನಗರಸಭೆ ಆರ್ಥಿಕವಾಗಿ ಸದೃಢವಾಗಬೇಕಾದರೆ ವಾಣಿಜ್ಯ ಸಂಕೀರ್ಣದಂತಹ ಆದಾಯ ಮೂಲಗಳನ್ನು ಹೊಂದಿರಬೇಕು. ಆ ನಿಟ್ಟಿನಲ್ಲಿ ಈ ಯೋಜನೆ ರೂಪಿಸಲಾಗಿದೆ’ ಎಂದು ಶಶಿ ಹೇಳಿದರು.

ಅದಕ್ಕೆ ಎಲ್ಲಾ ಸದಸ್ಯರು ಸಹ ಮೇಜು ತಟ್ಟಿ ಸ್ವಾಗತಿಸಿ ತಮ್ಮ ಒಪ್ಪಿಗೆ ಸೂಚಿಸಿದರು. ಸದಸ್ಯರಾದ ಸದಸ್ಯ ಸೈಯದ್ ಅಕ್ಲಿಂ ಇಬ್ರಾರ್, ರಮೇಶ್, ಬಿ.ಸಿ. ಪಾರ್ವತಮ್ಮ ಸೇರಿದಂತೆ ಕೆಲವರು ಯೋಜನೆ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

‘ನಗರಸಭೆಗೆ ಆರ್ಥಿಕ ಬೆನ್ನೆಲುಬಾಗಬಲ್ಲ ಈ ಯೋಜನೆಗೆ ಇದೇ ಅವಧಿಯಲ್ಲಿ ಯೋಜನೆಗೆ ಭೂಮಿಪೂಜೆ ನೆರವೇರಿಸೋಣ. ಇದು ರಾಮನಗರದ ಇತಿಹಾಸದಲ್ಲಿ ದೊಡ್ಡ ಮೈಲಿಗಲ್ಲಾಗಲಿದ್ದು, ಇಂತಹ ಮಹತ್ಕಾರ್ಯದಲ್ಲಿ ನಾವೆಲ್ಲರೂ ಭಾಗಿಯಾಗಿದ್ದೆವು ಎಂಬ ಹೆಮ್ಮೆ ನಮಗೆ ಇರಲಿದೆ’ ಎಂದು ಶಶಿ ತಿಳಿಸಿದರು.

ಕಾಂಪ್ಲೆಕ್ಸ್ ದುರಸ್ತಿಯಾಗಲಿ: ‘ಹೊಸ ವಾಣಿಜ್ಯ ಸಂಕೀರ್ಣ ನಿರ್ಮಾಣ ನಿಜಕ್ಕೂ ಒಳ್ಳೆಯ ಯೋಜನೆಯ. ಇದರ ಜೊತೆಗೆ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಸಮಗ್ರ ಅಭಿವೃದ್ಧಿ (ಐಡಿಎಸ್ಎಂಟಿ) ಯೋಜನೆಯಡಿ ಅರ್ಕಾವತಿ ಸೇತುವೆಗೆ ಹೊಂದಿಕೊಂಡಂತೆ ಮುಖ್ಯರಸ್ತೆಯಲ್ಲಿ ನಿರ್ಮಿಸಿರುವ ನಗರಸಭೆಯ ರಾಜಕುಮಾರ್ ಕಾಂಪ್ಲೆಕ್ಸ್ ಸಹ ದುರಸ್ತಿಯಾಗಬೇಕು’ ಎಂದು ವಾರ್ಡ್ 13ರ ಸದಸ್ಯ ಸೈಯದ್ ಅಕ್ಲಿಂ ಇಬ್ರಾರ್ ಒತ್ತಾಯಿಸಿದರು.

‘ಕಾಂಪ್ಲೆಕ್ಸ್ನ ತಳಮಹಡಿ ಸೇರಿದಂತೆ ಒಂದೆರಡು ಮೇಲ್ಮಹಡಿಗಳು ಮಾತ್ರ ಸದ್ಯ ಬಾಡಿಗೆಯಲ್ಲಿವೆ. ಉಳಿದಂತೆ ಎರಡು ಮಹಡಿಗಳು ಪಾಳು ಬಿದ್ದಿವೆ. ಕಾಂಪ್ಲೆಕ್ಸ್ ಅನ್ನು ದುರಸ್ತಿ ಮಾಡಿ ಬಾಡಿಗೆಗೆ ಕೊಟ್ಟರೆ ನಗರಸಭೆಗೆ ಆದಾಯ ಹರಿದು ಬರಲಿದೆ’ ಎಂದು ಅಭಿಪ್ರಾಯಪಟ್ಟರು.

ಅದಕ್ಕೆ ಪ್ರತಿಕ್ರಿಯಿಸಿದ ಶಶಿ, ‘ಹಿಂದಿನ ಬಜೆಟ್ನಲ್ಲಿ ಕಾಂಪ್ಲೆಕ್ಸ್ ದುರಸ್ತಿ ಮತ್ತು ಅಭಿವೃದ್ಧಿಪಡಿಸುವ ಕುರಿತು ಘೋಷಣೆ ಮಾಡಲಾಗಿದೆ. ಆದರೆ, ಪಾರ್ಕಿಂಗ್ ಸೇರಿದಂತೆ ಕೆಲ ತಾಂತ್ರಿಕ ಕಾರಣಗಳಿಂದಾಗಿ ದುರಸ್ತಿ ಯೋಜನೆ ವಿಳಂಬವಾಗಿದೆ. ಹೊಸ ಯೋಜನೆ ಜೊತೆಗೆ ಅದನ್ನೂ ಸಹ ಕೈಗೆತ್ತಿಕೊಳ್ಳಲಾಗುವುದು’ ಎಂದರು.

ಎರಡು ಸಲ ಭೂಮಿಪೂಜೆ: ‘ನನ್ನ ವಾರ್ಡ್ನಲ್ಲಿ ಒಂದೇ ಕೆಲಸಕ್ಕೆ ಎರಡ್ಮೂರು ಸಲ ಭೂಮಿಪೂಜೆ ನಡೆಯುತ್ತಿದೆ. ಹೀಗಾದರೆ ಹೇಗೆ? ನಗರಸಭೆಯಿಂದ ಅಥವಾ ಶಾಸಕರಿಂದ ಯಾರಾದರೂ ಒಬ್ಬರು ಮಾತ್ರ ಮಾಡಬೇಕಲ್ಲವೆ?’ ಎಂದು ಅಕ್ಲಿಂ ಪ್ರಶ್ನಿಸಿದರು.

ಅದಕ್ಕೆ ಶಶಿ, ‘ನಗರಸಭೆ ವ್ಯಾಪ್ತಿಗೆ ಒಳಪಟ್ಟ ಸ್ಥಳಗಳಲ್ಲಿ ನಗರಸಭೆ ಅನುದಾನದ ಯೋಜನೆಗಳಿಗೆ ನಾವೇ ಭೂಮಿಪೂಜೆ ನೆರವೇರಿಸುತ್ತೇವೆ. ಅದಕ್ಕೆ ಬೇರೆಯವರು (ಶಾಸಕರು) ಸಹ ಬಂದು ಭೂಮಿಪೂಜೆ ಮಾಡಲು ಮುಂದಾದರೆ ನೀವೇಕೆ ಹೋಗುತ್ತೀರಿ? ನಗರಸಭೆ ಸದಸ್ಯರು ಯಾವುದಕ್ಕೆ ಹೋಗಬೇಕು, ಯಾವುದಕ್ಕೆ ಹೋಗಬಾರದು ಎಂಬುದರ ಸ್ಪಷ್ಟತೆ ಇರಬೇಕು’ ಎಂದು ಕಿವಿಮಾತು ಹೇಳಿದರು.

‘ನಾವು ಹೋಗಬಾರದು ಅಂದುಕೊಂಡೇ ಸುಮ್ಮನಿರುತ್ತೇವೆ. ಆದರೆ, ಈ ಅಧಿಕಾರಿಗಳು ಬಿಡುವುದಿಲ್ಲ. ಸಾಹೇಬ್ರು (ಶಾಸಕರು) ಕರೆಯುತ್ತಿದ್ದಾರೆ ಬನ್ನಿ ಎನ್ನುತ್ತಾರೆ. ವಿಧಿ ಇಲ್ಲದೆ ನಾವೂ ಹೋಗುತ್ತಿದ್ದೇವೆ’ ಎಂದು ಅಕ್ಲಿಂ ಸುಮ್ಮನಾದರು.

ನಗರದ 31 ವಾರ್ಡ್ಗಳಲ್ಲಿ ಮಳೆ ಸೇರಿದಂತೆ ಪ್ರಕೃತಿ ವಿಕೋಪದಿಂದ ಉಂಟಾಗುವ ತೊಂದರೆಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಚರಂಡಿಗಳಲ್ಲಿ ಹೂಳೆತ್ತುವ ಕಾಮಗಾರಿಗಳಿಗೆ ಸಭೆ ಒಪ್ಪಿಗೆ ಸೂಚಿಸಿತು. ಜೊತೆಗೆ ವಿವಿಧ ಯೋಜನೆಗಳಡಿ ಅನುಮೋದನೆಯಾಗಿರುವ ಕಾಮಗಾರಿ ಮತ್ತು ಕಾರ್ಯಕ್ರಮಗಳ ಕ್ರಿಯಾಯೋಜನೆಗಳ ಸಭೆಯ ಘಟನೋತ್ತರ ಮಂಜೂರಾಗಿ ನಿರೀಕ್ಷಿಸಿ ಕೈಗೆತ್ತಿಕೊಂಡಿರುವ ತುರ್ತು ಕಾಮಗಾರಿಗಳು ಹಾಗೂ ಸಾಮಗ್ರಿಗಳ ಖರೀದಿಗೆ ಸಭೆ ಅನುಮೋದನೆ ನೀಡಿತು.

ಉಪಾಧ್ಯಕ್ಷ ಗಿರಿಜಮ್ಮ ಗುರುವೇಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಮಹಮ್ಮದ್ ಆರೀಫ್, ಪೌರಾಯುಕ್ತ ಡಾ. ಜಯಣ್ಣ, ಸದಸ್ಯರು ಹಾಗೂ ಅಧಿಕಾರಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-14-700284854

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.