ರಾಮನಗರ: ಇಲ್ಲಿನ ನಗರಸಭಾ ವ್ಯಾಪ್ತಿಯಲ್ಲಿ 2022-23ನೇ ಸಾಲಿನ ಮುಖ್ಯಮಂತ್ರಿಗಳ ಅಮೃತ್ ನಗರೋತ್ಥಾನ (ಮುನಿಸಿಪಾಲಿಟಿ) (ಹಂತ-4) ಯೋಜನೆಯ ವ್ಯಕ್ತಿಗತ ಕಾರ್ಯಕ್ರಮಗಳಾದ ನಿವೇಶನ ಖರೀದಿಸಲು ಪ್ರೋತ್ಸಾಹಧನಕ್ಕಾಗಿ, ಮನೆ ನಿರ್ಮಾಣ/ರಿಪೇರಿಗೆ ಪ್ರೋತ್ಸಾಹಧನ ಹಾಗೂ ಸ್ವಂತ ಉದ್ಯೋಗಕ್ಕೆ ಸಹಾಯಧನ ಕೋರಿ ಅರ್ಜಿ ಸಲ್ಲಿಸಿದ ಫಲಾನುಭವಿಗಳು ಈ ಪ್ರಕಟಣೆ ಹೊರಡಿಸಿದ ಒಂದು ವಾರದೊಳಗೆ ಕಚೇರಿ ಸಮಯದಲ್ಲಿ ಕಲ್ಯಾಣ ಶಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ಸೂಕ್ತ ದಾಖಲೆ ಸಲ್ಲಿಸಬೇಕು.

ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿರುವವರು ನಿವೇಶನ ಕೊಂಡಿದ್ದರೆ, ನಿವೇಶನ ನೋಂದಣಿ ಪತ್ರದ ಜೆರಾಕ್ಸ್ ಪ್ರತಿ ಸಲ್ಲಿಸಬೇಕು. ಮನೆ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಿರುವವರು ಮನೆ ನಿರ್ಮಾಣದ ಹಂತಗಳ ಚಿತ್ರ (ತಳಪಾಯ, ಲಿಂಟ್ ಲೆವಲ್ ಪೂರ್ಣ), ಪೂರ್ಣಗೊಂಡಿರುವ ಚಿತ್ರಗಳನ್ನು ಸಲ್ಲಿಸಬೇಕು.

ಮನೆ ರಿಪೇರಿಗಾಗಿ ಅರ್ಜಿ ಸಲ್ಲಿಸಿರುವವರು: ಮನೆಯ ಸದ್ಯದ ಸ್ಥಿತಿಯ ಪೋಟೊ ಪ್ರತಿಗಳನ್ನು ಸಲ್ಲಿಸಬೇಕು. ಸ್ವಂತ ಉದ್ಯೋಗಕ್ಕೆ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಿರುವವರು, ಬ್ಯಾಂಕ್ ನೀಡಿರುವ ಸಾಲ ಮಂಜೂರಾತಿ ಪತ್ರ, ಸಾಲ ಬಿಡುಗಡೆಯಾಗಿದ್ದರೆ ಬ್ಯಾಂಕ್ ವ್ಯವಸ್ಥಾಪಕರಿಂದ ಸಾಲ ಬಿಡುಗಡೆಯಾಗಿರುವ ಪತ್ರ ಸಲ್ಲಿಸಬೇಕು ಎಂದು ರಾಮನಗರ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-14-38675932

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.