ಚನ್ನಪಟ್ಟಣ: ನಗರವೂ ಸೇರಿದಂತೆ ತಾಲ್ಲೂಕಿನ ಹಲವೆಡೆ ಶನಿವಾರ ರಾತ್ರಿ ಒಂದು ಗಂಟೆಗೂ ಹೆಚ್ಚು ಕಾಲ ಬಿರುಗಾಳಿ ಸಹಿತ ಉತ್ತಮ ಮಳೆ ಸುರಿಯಿತು.
ಬಿರುಗಾಳಿ ಸಹಿತ ಮಳೆಗೆ ತಾಲ್ಲೂಕಿನ ಚಿಕ್ಕೇನಹಳ್ಳಿ ತಾಯಮ್ಮ ಅವರ ಹೆಂಚಿನಮನೆ ಮೇಲ್ಚಾವಣಿ ಕುಸಿದು ಬಿದ್ದಿದೆ. ಈ ಮನೆಗೆ ಹೊಂದಿಕೊಂಡಂತೆ ಇದ್ದ ರೈತ ರಾಜಣ್ಣ ಅವರ ಕೊಟ್ಟಿಗೆ ಮೇಲ್ಚಾವಣಿ ಕುಸಿದು ಬಿದ್ದು ₹60 ಸಾವಿರ ಮೌಲ್ಯದ ಸೀಮೆಹಸುವೊಂದು ಸಾವನ್ನಪ್ಪಿದೆ.
ತಾಲ್ಲೂಕಿನ ಮಳೂರು, ಬೈರಾಪಟ್ಟಣ, ಸುಣ್ಣಘಟ್ಟ, ಹೊಂಗನೂರು, ಕೂಡ್ಲೂರು, ಮಳೂರುಪಟ್ಟಣ, ನಾಗವಾರ, ಅಬ್ಬೂರು, ತಿಟ್ಟಮಾರನಹಳ್ಳಿ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದೆ. ಈ ಭಾಗದ ಹಲವು ಗ್ರಾಮಗಳಲ್ಲಿ ಸಣ್ಣಪುಟ್ಟ ಮರಗಳು ಧರೆಗುರುಳಿವೆ. ಹಲವೆಡೆ ಬಾಳೆ, ತೆಂಗು ಬೆಳೆಗಳಿಗೆ ಹಾನಿಯಾಗಿದೆ.
ನಗರದಲ್ಲಿ ಸುರಿದ ಉತ್ತಮ ಮಳೆಯಿಂದ ರಸ್ತೆ, ಚರಂಡಿ ತುಂಬಿ ಹರಿದವು. ಕೆಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಯಿತು.