ರಾಮನಗರ: ಅವ್ವೇರಹಳ್ಳಿ ರೇವಣಸಿದ್ದೇಶ್ವರ ರಥೋತ್ಸವದ ವೇಳೆ ರಥ ಮುನ್ನಡೆಸುತ್ತಿದ್ದ ವ್ಯಕ್ತಿಯ ಕಾಲು ಚಕ್ರಕ್ಕೆ ಸಿಲುಕಿದ್ದು ಸೇರಿದಂತೆ ವಿವಿಧ ಅವಘಡಗಳಿಗೆ ಮುಜರಾಯಿ ಇಲಾಖೆ ಧಾರ್ಮಿಕ ಕಟ್ಟುಪಾಡು ಉಲ್ಲಂಘಿಸಿದ್ದೇ ಕಾರಣ ಎಂದು ಅವ್ವೇರಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಆರೋಪಿಸಿದ್ದಾರೆ.

ರೇವಣಸಿದ್ದೇಶ್ವರ ಬೆಟ್ಟದ ಧಾರ್ಮಿಕ ದತ್ತಿ ಇಲಾಖೆ ದೇವಾಲಯದ ಆಡಳಿತ ಕಚೇರಿ ಎದುರು ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.

ಮಧ್ಯಾಹ್ನ 12.45ಕ್ಕೆ ರಥೋತ್ಸವ ನಿಗದಿಯಾಗಿದ್ದರೂ 25 ನಿಮಿಷ ತಡವಾಗಿ ಶಾಸಕ ಇಕ್ಬಾಲ್ ಹುಸೇನ್ ಬಂದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಆ ಮೂಲಕ ಕಟ್ಟುಪಾಡು ಮೀರಲಾಯಿತು ಎಂದು ವಿಎಸ್ಎಸ್ಎನ್ ಅಧ್ಯಕ್ಷ ನಂದೀಶ್ಗೌಡ ಸ್ವಾಮಿ ದೂರಿದರು.

‘ನಾನು ಬರುವವರೆಗೆ ರಥೋತ್ಸವಕ್ಕೆ ಚಾಲನೆ ನೀಡಬಾರದು ಎಂದು ಅಧಿಕಾರಿಗಳಿಗೆ ಹಾಗೂ ದೇವಾಲಯ ವ್ಯವಸ್ಥಾಪನಾ ಸಮಿತಿಯವರಿಗೆ ಶಾಸಕರೇ ಹುಕುಂ ಹೊರಡಿಸಿದ್ದರು ಎನ್ನಲಾಗಿದೆ. ರಥ ಎಳೆಯುವಾಗ ಕಲ್ಲಿನ ಚಕ್ರವೊಂದಕ್ಕೆ ಹಾನಿಯಾಯಿತು. ರಥಕ್ಕೆ ಹಾಕಿದ್ದ ಹೂಮಾಲೆಗಳು ಕಳಚಿ ಬಿದ್ದವು. ಜೊತೆಗೆ ರಥ ಮುನ್ನಡೆಸುತ್ತಿದ್ದ ವ್ಯಕ್ತಿಯ ಕಾಲು ಚಕ್ರಕ್ಕೆ ಸಿಲುಕಿ ಮುರಿದಿದೆ. ಈ ಎಲ್ಲಾ ಅವಘಡಗಳಿಗೆ ಕಾರಣರಾದವರ ವಿರುದ್ದ ಕ್ರಮ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸಿದರು.

ಶಾಸಕರು ನಿಗದಿತ ಸಮಯಕ್ಕೆ ಬಂದು ರಥೋತ್ಸವಕ್ಕೆ ಚಾಲನೆ ನೀಡಬೇಕಿತ್ತು. ನಂತರ ಪೂಜೆ ಸಲ್ಲಿಸಬಹುದಿತ್ತು. ಸಂಸದ ಡಾ. ಸಿ.ಎನ್. ಮಂಜುನಾಥ್ ಬಂದು ದೇವರಿಗೆ ಪೂಜೆ ಸಲ್ಲಿಸಿ ಹೋದರು. ಆದರೆ ಶಾಸಕರು, ತಾವು ಬರುವವರೆಗೆ ರಥೋತ್ಸವಕ್ಕೆ ಚಾಲನೆ ನೀಡಬೇಡಿ ಎಂದು ಹೇಳಿ ವಿಳಂಬ ಮಾಡಿದ್ದಾರೆ. ಇದರಿಂದ ಭಕ್ತರ ಭಾವನೆಗೆ ನೋವಾಗಿದ್ದು, ದೇವರಿಗೆ ಅಪಚಾರವಾಗಿದೆ ಎಂದು ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಪ್ಪ ಆರೋಪಿಸಿದರು.

ರಥೋತ್ಸವ ವಿಳಂಬಕ್ಕೆ ಕಾರಣವಾಗಿರುವ ಅಧಿಕಾರಿಗಳು ಹಾಗೂ ದೇವಾಲಯ ವ್ಯವಸ್ಥಾಪನಾ ಸಮಿತಿವಿರುದ್ಧ ಮುಜರಾಯಿ ಇಲಾಖೆ ಕ್ರಮ ಜರುಗಿಸಬೇಕು. ಇದಕ್ಕೆ ಕಾರಣವಾಗಿರುವ ಶಾಸಕ ಹುಸೇನ್ ಅವರು ದೇವರ ಮುಂದೆ ತಪ್ಪೊಪ್ಪಿಗೆ ಸೇವೆ ಮಾಡಬೇಕು. ಹಾನಿಯಾಗಿರುವ ರಥವನ್ನು ಸರಿಪಡಿಸಿ ಕೊಡಬೇಕು ಎಂದು ತಮ್ಮಣ್ಣ ಒತ್ತಾಯಿಸಿದರು.

ನಿಗದಿತ ಮೂಹೂರ್ತದಲ್ಲಿ ರಥೋತ್ಸವ ನಡೆಯದ ಕಾರಣ ಅವಘಡ ಸಂಭವಿಸಿದೆ. ಚಪ್ಪಲಿ ಮತ್ತು ಶೂ ಕಾಲಿನಲ್ಲಿ ಪೂಜೆ ಮಾಡಿರುವುದು ತಪ್ಪು. ರಥ ನಡೆಸುತ್ತಿದ್ದ ವ್ಯಕ್ತಿ ಗಾಯಗೊಂಡರೂ ಸೌಜನ್ಯಕ್ಕಾದರೂ ಶಾಸಕರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿಲ್ಲ ಎಂದು ಶಿವಲಿಂಗಯ್ಯ ಬೇಸರ ವ್ಯಕ್ತಪಡಿಸಿದರು.

ಎ.ಸಿ. ಕೆಂಪಯ್ಯ, ಗೋಪಾಲ ನಾಯ್ಕ, ಗುನ್ನೂರು ದೇವರಾಜು, ಸಂಜಯ್, ನವೀನ್, ಪ್ರಶಾಂತ್, ಯೋಗೇಶ್, ವಿನೋದ್, ಆನಂದ್, ಚಂದ್ರಣ್ಣ, ರಾಜಣ್ಣ, ರಾಜು ಹಾಗೂ ಸತೀಶ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.