ಗುರುವಾರ , ಫೆಬ್ರವರಿ 25, 2021
20 °C
ಅಭ್ಯರ್ಥಿಗಳು, ಬೆಂಬಲಿಗರಲ್ಲಿ ಕುತೂಹಲ; ಜಿಲ್ಲೆಯ ನಾಲ್ಕೂ ತಾಲ್ಲೂಕಲ್ಲಿ ಎಣಿಕೆ ಕಾರ್ಯ

ಗ್ರಾಮ ಸಮರ: ಫಲಿತಾಂಶಕ್ಕೆ ಕ್ಷಣಗಣನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಜಿಲ್ಲೆಯಲ್ಲಿ ಎರಡು ಹಂತಗಳಲ್ಲಿ ನಡೆದಿದ್ದ ಗ್ರಾಮ ಸಮರದ ಮತ ಎಣಿಕೆ ಕಾರ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರಲ್ಲಿ ಕುತೂಹಲ ಗರಿಗೆದರಿದೆ.

ಜಿಲ್ಲೆಯಲ್ಲಿ 118 ಗ್ರಾಮ ಪಂಚಾಯಿತಿಗಳ ಮತ ಎಣಿಕೆ ಕಾರ್ಯವು ಬುಧವಾರ ಬೆಳಿಗ್ಗೆ 8ಕ್ಕೆ ಆರಂಭ ಆಗಲಿದೆ. ನಾಲ್ಕು ತಾಲ್ಲೂಕು ಕೇಂದ್ರಗಳಲ್ಲಿ ಎಣಿಕೆಗೆ ಜಿಲ್ಲಾಡಳಿತವು ಸಿದ್ಧತೆ ಮಾಡಿಕೊಂಡಿದೆ. ಇದಕ್ಕಾಗಿ ಅಗತ್ಯ
ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದ್ದು, ಸುಗಮವಾಗಿ ಎಣಿಕೆ ಕಾರ್ಯವು ನಡೆಯಲಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್‌. ಅರ್ಚನಾ ತಿಳಿಸಿದರು.

ರಾಮನಗರ: ತಾಲ್ಲೂಕಿನಲ್ಲಿ 20 ಗ್ರಾಮ ಪಂಚಾಯಿತಿಗಳ 331 ಸ್ಥಾನಗಳಿಗ ಚುನಾವಣೆ ನಡೆದಿದ್ದು, ಒಟ್ಟು 830 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ ಮತ ಎಣಿಕೆಗಾಗಿ 8 ಎಣಿಕೆ ಕೊಠಡಿ ಹಾಗೂ 56 ಮತ ಎಣಿಕೆ 
ಟೇಬಲ್‌ಗಳನ್ನು ಸಿದ್ಧಪಡಿಸಲಾಗಿದೆ. 62 ಮೇಲ್ವಿಕಚರಕರು ಹಾಗೂ 124 ಎಣಿಕೆ ಸಹಾಯಕರನ್ನು ನೇಮಿಸಲಾಗಿದೆ. ಮತ ಎಣಿಕೆ ಕಾರ್ಯವು ರಾಮನಗರ ಟೌನ್‌ನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದೆ.

ಕನಕಪುರ: ತಾಲ್ಲೂಕಿನಲ್ಲಿ 36 ಗ್ರಾಮ ಪಂಚಾಯಿತಿಗಳ 490 ಸ್ಥಾನಗಳಿಗ ಚುನಾವಣೆ ನಡೆದಿದ್ದು, ಒಟ್ಟು 1157 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಮತ ಎಣಿಕೆಗಾಗಿ 18 ಎಣಿಕೆ ಕೊಠಡಿ ಹಾಗೂ 104 ಮತ ಎಣಿಕೆ
ಟೇಬಲ್‌ಗಳನ್ನು ಸಿದ್ಧಪಡಿಸಲಾಗಿದ್ದು, 114 ಮೇಲ್ವಿಕಚರಕರು ಹಾಗೂ 228 ಎಣಿಕೆ ಸಹಾಯಕರನ್ನು ನೇಮಿಸಲಾಗಿದೆ. ಮತ ಎಣಿಕೆ ಕನಕಪುರ ಟೌನ್‌ನಲ್ಲಿರುವ ರೂರಲ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ.

ಚನ್ನಪಟ್ಟಣ: ತಾಲ್ಲೂಕಿನ 32 ಗ್ರಾಮ ಪಂಚಾಯಿತಿಗಳ 434 ಸ್ಥಾನಗಳಿಗ ಚುನಾವಣೆ ನಡೆದಿದ್ದು, ಒಟ್ಟು 1156 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮತ ಎಣಿಕೆಗಾಗಿ 12 ಎಣಿಕೆ ಕೊಠಡಿ ಹಾಗೂ 84 ಮತ ಎಣಿಕೆ
ಟೇಬಲ್‌ಗಳನ್ನು ಸಿದ್ಧಪಡಿಸಲಾಗಿದ್ದು, 92 ಮೇಲ್ವಿಕಚರಕರು ಹಾಗೂ 184 ಎಣಿಕೆ ಸಹಾಯಕರನ್ನು ನೇಮಿಸಲಾಗಿದೆ. ಮತ ಎಣಿಕೆಯು ಚನ್ನಪಟ್ಟಣ ಟೌನ್‌ನಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ನಡೆಯಲಿದೆ.

ಮಾಗಡಿ: ತಾಲ್ಲೂಕಿನ 30 ಗ್ರಾಮ ಪಂಚಾಯಿತಿಗಳ 405 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಒಟ್ಟು 1123 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಮತ ಎಣಿಕೆಗಾಗಿ 23 ಎಣಿಕೆ ಕೊಠಡಿ ಹಾಗೂ 81 ಮತ ಎಣಿಕೆ
ಟೇಬಲ್‌ಗಳನ್ನು ಸಿದ್ಧಪಡಿಸಲಾಗಿದ್ದು, 81 ಮೇಲ್ವಿಚಾರಕರು ಹಾಗೂ 162 ಎಣಿಕೆ ಸಹಾಯಕರನ್ನು ನೇಮಿಸಲಾಗಿದೆ. ಮತ ಎಣಿಕೆ ಮಾಗಡಿ ತಾಲ್ಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ.

ಅಂಕಿ–ಅಂಶ

118–ಜಿಲ್ಲೆಯಲ್ಲಿ ಚುನಾವಣೆ ನಡೆದ ಗ್ರಾ.ಪಂ.ಗಳು
1160– ಚುನಾವಣೆ ನಡೆದ ಸ್ಥಾನಗಳು
4266–ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳು
61– ಮತ ಎಣಿಕೆಗೆ ಬಳಸುತ್ತಿರುವ ಕೊಠಡಿಗಳು
325– ಮತ ಎಣಿಕೆ ಟೇಬಲ್‌ಗಳು
349– ಮತ ಎಣಿಕೆ ಮೇಲ್ವಿಚಾರಕರು
698–ಎಣಿಕೆ ಸಹಾಯಕರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು