ಚನ್ನಪಟ್ಟಣ: ರೋಟರಿ ಕ್ಲಬ್ ಸಾಮಾಜಿಕ ಸಬಲೀಕರಣದ ಕಡೆ ಹೆಚ್ಚಿನ ಗಮನ ಹರಿಸಬೇಕು. ಆ ಮೂಲಕ ಮಾದರಿ ಸಂಸ್ಥೆಯಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂದು ರೋಟರಿ ಜಿಲ್ಲಾ ಗವರ್ನರ್ ಬಿ.ಆರ್.ಶ್ರೀಧರ್ ಕಿವಿಮಾತು ಹೇಳಿದರು.

ನಗರದ ರೋಟರಿ ಬಾಲಭವನದಲ್ಲಿ ಚನ್ನಪಟ್ಟಣ ರೋಟರಿ ಕ್ಲಬ್ (3191) ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಗವರ್ನರ್ ಭೇಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಜನಹಿತ ಚಿಂತನೆಯೇ ರೋಟರಿ ಸಂಸ್ಥೆ ಮೂಲ ಮಂತ್ರವಾಗಬೇಕು. ಜನಸೇವೆ ಮೂಲಕ ಆತ್ಮತೃಪ್ತಿ ಹೊಂದಬೇಕು‘ ಎಂದು ತಿಳಿಸಿದರು.

ರೋಟರಿ ಸಂಸ್ಥೆಯ ವಿದ್ಯಾರ್ಥಿಗಳು ಮಹಿಳೆಯರು ಮತ್ತು ಅಶಕ್ತರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ. ಇಂತಹ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಬರುತ್ತಿರುವ ರೋಟರಿ ಕ್ಲಬ್ ಕಾರ್ಯ ಪ್ರಶಂಸನೀಯ ಎಂದು ಶ್ಲಾಘಿಸಿದರು.

ಚನ್ನಪಟ್ಟಣ ರೋಟರಿ ಸಂಸ್ಥೆ ಅಧ್ಯಕ್ಷ ಟಿ.ಪ್ರಸನ್ನ ಕುಮಾರ್ ಮಾತನಾಡಿ, ‘ಶುದ್ಧ ಕುಡಿಯುವ ನೀರು, ಪೋಲಿಯೊ ಜಾಗೃತಿ, ರಸ್ತೆ ಸುರಕ್ಷತೆ, ಕಾನೂನು ಅರಿವು, ಉಚಿತ ಆರೋಗ್ಯ ಶಿಬಿರ, ಮಾತೃಭಾಷೆ ಕಾಳಜಿ, ಮಹನೀಯರ ಜಯಂತಿ ಆಚರಣೆ, ಸ್ವಚ್ಛತೆ, ಪರಿಸರ ಕಾಳಜಿ, ಆರೋಗ್ಯ ಜಾಗೃತಿ ಬಗ್ಗೆ ಮಾಹಿತಿ’ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಸಂಸ್ಥೆ ವತಿಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ವಿನಯ್ ಕುಮಾರ್ ವರದಿ ಮಂಡಿಸಿದರು. ಬಿ.ಗೋಪಾಲ್, ವಲಯ ಮುಖ್ಯಸ್ಥ ಡಿ.ಪುಟ್ಟಸ್ವಾಮಯ್ಯ, ಜಿಲ್ಲಾ ಸಹಪಾಲಕ ಕೆ.ಗವಿರಾಜು, ವಲಯ ಕಾರ್ಯದರ್ಶಿ ಚಂದ್ರೇಗೌಡ ಸೇರಿದಂತೆ ಇತರರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-14-957942563

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.