ಕನಕಪುರ: ದೇಶದ ಆರೋಗ್ಯ ಸುಸ್ಥಿರವಾಗಿರಬೇಕಾದರೆ ಗ್ರಾಮೀಣ ಆರ್ಥಿಕತೆ ಬಲವಾಗಬೇಕು. ಗ್ರಾಮೀಣ ಆರ್ಥಿಕತೆ ಬಲವಾಗಲು ಜಾನುವಾರು ಸಂಖ್ಯೆ ಹೆಚ್ಚಾಗಬೇಕು. ರಾಸಾಯನಿಕ ಮುಕ್ತ ಗ್ರಾಮ, ಜಮೀನುಗಳಾಗಬೇಕು ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಕಿವಿಮಾತು ಹೇಳಿದರು.

ಕೋಡಿಹಳ್ಳಿ ರಂಗಮಂದಿರದಲ್ಲಿ ಮಂಗಳವಾರ ನಡೆದ ‘ಗೊಬ್ಬರ ಸಮತೋಲಿತ ಬಳಕೆ ಮತ್ತು ಸಮಗ್ರ ಮಣ್ಣಿನ ಆರೋಗ್ಯ ನಿರ್ವಹಣೆ’ ಕುರಿತ ಜಾಗೃತಿ, ಸಂವೇದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಅತಿಯಾದ ಬಳಕೆಯಿಂದ ಮಣ್ಣಿನ ಆರೋಗ್ಯ ಹಾಳಾಗುತ್ತಿದೆ. ಇದೇ ಕಾರಣದಿಂದ ಅನೇಕ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ರೈತರ ಪುಸ್ತಕ ಎಂದರೆ ಜಮೀನು. ಗ್ರಂಥಾಲಯ ಎಂದರೆ ಕೃಷಿ ಮತ್ತು ತೋಟಗಾರಿಕೆ ತರಬೇತಿ ಕೇಂದ್ರ. ರೈತರು ಇವೆರಡನ್ನೂ ಬಳಸಿಕೊಂಡು ಕೃಷಿ ಜ್ಞಾನ ಸಂಪಾದಿಸಬೇಕು. ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ರೈತರಿಗೆ ಜೈವಿಕ ಕೃಷಿ ವಿಧಾನ ಮತ್ತು ಮಣ್ಣಿನ ಆರೋಗ್ಯದ ಮಹತ್ವದ ಕುರಿತು ಜಾಗೃತಿ ಮೂಡಿಸಬೇಕು ಎಂದು ಸಲಹೆ ಮಾಡಿದರು.

ಮಣ್ಣಿನ ಆರೋಗ್ಯ ಕಾಪಾಡಿದಾಗ ಮಾತ್ರ ಉತ್ತಮ ಆಹಾರ ಉತ್ಪಾದನೆ ಸಾಧ್ಯ. ರೈತರಿಗೆ ಮಣ್ಣಿನ ಆರೋಗ್ಯದ ಬಗ್ಗೆ ನಿರಂತರ ಜಾಗೃತಿ ಮೂಡಿಸುವ ಕಾರ್ಯಕ್ರಮ ಹೆಚ್ಚಾಗಿ ನಡೆಯಬೇಕು ಎಂದು ಹೇಳಿದರು.

ಐಸಿಎಆರ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆರ್ಟಿಕಲ್ಚರ್ ರಿಸರ್ಚ್ ಬೆಂಗಳೂರು, ಕನಕಪುರ ಆರ್ಗ್ಯಾನಿಕ್ ಪ್ರೊಡ್ಯೂಸರ್ ಕಂಪನಿ ಹಾಗೂ ಕೋಡಿಹಳ್ಳಿ ರೇಷ್ಮೆ ಕೃಷಿ ರೈತರ ಉತ್ಪಾದಕ ಕಂಪನಿ ಜಂಟಿಯಾಗಿ ಈ ಕಾರ್ಯಕ್ರಮ ಆಯೋಜಿಸಿದ್ದವು.

ಬೆಂಗಳೂರು ಐಸಿಎಆರ್-ಐಐಎಚ್ಆರ್ ಹಿರಿಯ ವಿಜ್ಞಾನಿ ಡಿ.ಕಲೈವನನ್ (ಮಣ್ಣು ವಿಜ್ಞಾನ) ಮತ್ತು ಪ್ರಧಾನ ವಿಜ್ಞಾನಿ ಜಿ.ಆರ್.ಸ್ಮಿತಾ ಮಣ್ಣಿನ ಸಂರಕ್ಷಣೆ, ಸಮಗ್ರ ಸಮತೋಲನದ ಬಗ್ಗೆ ರೈತರಿಗೆ ತಿಳಿಸಿಕೊಟ್ಟರು.

ಕನಕಪುರ ಆರ್ಗಾನಿಕ್ ಪ್ರೊಡ್ಯೂಸರ್ ಕಂಪನಿ ನಿರ್ದೇಶಕ ಲಕ್ಷ್ಮಿ ನಾರಾಯಣ, ಸಂಪತ್ ಕುಮಾರ್, ಕೋಡಿಹಳ್ಳಿ ರೇಷ್ಮೆ ಕೃಷಿ ರೈತರ ಉತ್ಪಾದಕ ಕಂಪನಿ ನಿರ್ದೇಶಕ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಜಗನ್ನಾಥ್ ಗೌಡ, ಕನಕಪುರ ಗ್ರಾಮಾಂತರ ಮಂಡಲ ಅಧ್ಯಕ್ಷ ಕೆ.ಪಿ.ಕುಮಾರ್, ಕನಕಪುರ ನಗರ ಮಂಡಲ ಅಧ್ಯಕ್ಷ ಚೂಡಾಮಣಿ ಚಂದ್ರು, ಡಿ.ಕೆ.ಭರತ್ ಕುಮಾರ್ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-18-1913708432

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.