ರಾಮನಗರ: ನಗರದ ಕೆಂಪೇಗೌಡ ವೃತ್ತದಲ್ಲಿರುವ ಪಟೇಲ್ ಆಂಗ್ಲ ಶಾಲೆ ಮತ್ತು ನೇಗಿಲಯೋಗಿ ಮಹಿಳಾ ಘಟಕದಿಂದ ಶಾಲೆಯ ಪ್ರೌಢಶಾಲಾ ಹೆಣ್ಣು ಮಕ್ಕಳಿಗೆ ಎಚ್ಪಿವಿ (ಹ್ಯೂಮನ್ ಪ್ಯಾಪಿಲೋಮ್ ವೈರಸ್ ) ಲಸಿಕೆ ಜಾಗೃತಿ ಅಭಿಯಾನ ಜರುಗಿತು.

ಈ ವೇಳೆ ಮಾತನಾಡಿದ ವೈದ್ಯೆ ಡಾ. ಆಯೇಶಾ, ‘ಎಚ್ಪಿವಿ ಲೈಂಗಿಕ ಚಟುವಟಿಕೆ ಸೇರಿದಂತೆ ಚರ್ಮದಿಂದ ಚರ್ಮದ ಮೂಲಕ ಹರಡುತ್ತದೆ. ಸೋಂಕು ದೀರ್ಘಕಾಲ ಉಳಿದರೆ ಅದು ಗರ್ಭಕಂಠದ ಕ್ಯಾನ್ಸರ್, ಗಂಟಲಿನ ಕ್ಯಾನ್ಸರ್ ಸೇರಿದಂತೆ ಇತರ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು’ ಎಂದು ತಿಳಿಸಿದರು.

‘ಕ್ಯಾನ್ಸರ್ಗಳಿಗೆ ಕಾರಣವಾಗುವ ಅಂಶಗಳಿಂದ ಎಚ್ಪಿವಿ ಲಸಿಕೆಯು ಶೇ 90ಕ್ಕಿಂತ ಹೆಚ್ಚು ರಕ್ಷಣೆ ನೀಡುತ್ತದೆ. ವೈದ್ಯರ ಜೊತೆಗೆ ಆರೋಗ್ಯ ಸಂಸ್ಥೆಗಳು 9ರಿಂದ 12 ವರ್ಷದೊಳಗಿನ ಹುಡುಗರು ಮತ್ತು ಹುಡುಗಿಯರಿಗೆ ಆದರ್ಶವಾಗಿ ಎಚ್ಪಿವಿ ಲಸಿಕೆ ಶಿಫಾರಸು ಮಾಡುತ್ತವೆ. ಈ ವಯಸ್ಸಿನಲ್ಲಿ ದೇಹ ಲಸಿಕೆಗೆ ಬಲವಾಗಿ ಪ್ರತಿಕ್ರಿಯಿಸುತ್ತದೆ. ಆದ್ದರಿಂದ ಭಾರತದಲ್ಲಿ 16 ವರ್ಷದೊಳಗಿನವರು ಲಸಿಕೆ ಕಡ್ಡಾಯ ಮಾಡಲಾಗಿದೆ’ ಎಂದರು.

ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಪಟೇಲ್ ರಾಜು ಮಾತನಾಡಿ, ‘ಶಾಲಾ ಮಕ್ಕಳಿಗೆ ಈಗಿನಿಂದ ಆರೋಗ್ಯದ ಕುರಿತು ತಿಳಿವಳಿಕೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಆ ನಿಟ್ಟಿನಲ್ಲಿ ಶಾಲೆಯಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದರು.

ರಾಮನಗರ ನೇಗಿಲಯೋಗಿ ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಎಸ್. ಎಚ್., ಕಾರ್ಯದರ್ಶಿ ಸಾಕಮ್ಮ, ಖಜಾಂಚಿ ಜಗದಾಂಬ, ಸಹ ಕಾರ್ಯದರ್ಶಿ ಶಶಿಕಲಾ ಕೆ.ಎಸ್ ಹಾಗೂ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-14-945821207

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.