ರಾಮನಗರ: ತಾಲ್ಲೂಕಿನ ಪಾದರಹಳ್ಳಿ ಸರ್ಕಾರಿ ಮಾದರಿ ಶಾಲೆಯನ್ನು ಕೆಪಿಎಸ್ ಮ್ಯಾಗ್ನೆಟ್ ಶಾಲೆಯಾಗಿ ಮೇಲ್ದರ್ಜೆಗೇರಿಸಿ ಸುತ್ತಮುತ್ತಲಿನ ಶಾಲೆಗಳನ್ನು ವಿಲೀನಗೊಳಿಸಲಾಗುತ್ತಿದೆ ಎಂದು ಪಕ್ಕದ ಹರಿಸಂದ್ರ ಮತ್ತು ಮದರ್ ಸಾಬರದೊಡ್ಡಿಯಲ್ಲಿ ಎಐಡಿಎಸ್ಒ (ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ) ನೇತೃತ್ವದಲ್ಲಿ ಸ್ಥಳೀಯರು ಸೋಮವಾರ ಪ್ರತಿಭಟನೆ ನಡೆಸಿದರು.

ಎರಡೂ ಶಾಲೆಗಳ ಆವರಣದಲ್ಲಿ ಬೆಳಿಗ್ಗೆ ವಿದ್ಯಾರ್ಥಿಗಳ ಪೋಷಕರು ಹಾಗೂ ಸ್ಥಳೀಯರ ಜೊತೆ ಸಭೆ ನಡೆಸಿದ ಸಂಘಟನೆ ಪದಾಧಿಕಾರಿಗಳು ನಂತರ, ಸಾಂಕೇತಿಕವಾಗಿ ಪ್ರತಿಭಟಿಸಿದರು. ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮದರ್ ಸಾಬರದೊಡ್ಡಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಂಘಟನೆಯ ಬೆಂಗಳೂರು ದಕ್ಷಿಣ ಜಿಲ್ಲಾ ಸಂಚಾಲಕ ರೋಹಿತ್, ‘ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಿಂದಾಗಿ ಸುತ್ತಲಿನ ಗ್ರಾಮಗಳ ಸರ್ಕಾರಿ ಶಾಲೆಗಳಿಗೆ ಬೀಗ ಬೀಳಲಿದೆ. ಇದೊಂದು ವಿಫಲ ಯೋಜನೆ ಎಂಬುದಕ್ಕೆ ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು ಕೆಪಿಎಸ್ ಶಾಲೆಯೇ ಸಾಕ್ಷಿ’ ಎಂದರು.

‘ಯೋಜನೆಯ ಮುಂದುವರಿದ ಭಾಗವಾಗಿ ಪಾದರಹಳ್ಳಿಯಲ್ಲಿರುವ ಮಾದರಿ ಶಾಲೆಯಯನ್ನು ಕೆಪಿಎಸ್ ಆಗಿ ಮೇಲ್ದರ್ಜೆಗೇರಿಸಲಾಗಿದೆ. ಈ ಶಾಲೆಯೊಂದಿಗೆ ಸುತ್ತಲಿನ ಹರೀಸಂದ್ರ, ಮದರ್ ಸಾಬರದೊಡ್ಡಿ, ತಿಮ್ಮೇಗೌಡನದೊಡ್ಡಿ, ಚಿಕ್ಕೇಗೌಡನದೊಡ್ಡಿ, ಕೆಂಪೇಗೌಡನದೊಡ್ಡಿ, ಹಳ್ಳಿಮಾಳ ಸೇರಿದಂತೆ ವಿವಿಧ ಶಾಲೆಗಳನ್ನು ಮುಚ್ಚಲು ಸರ್ಕಾರ ಸಂಚು ರೂಪಿಸಿದೆ. ಶಾಲೆಗಳನ್ನು ಉಳಿಸಲು ನಾವು ಬೃಹತ್ ಹೋರಾಟ ಕಟ್ಟಬೇಕಿದೆ’ ಎಂದು ಹೇಳಿದರು.

ಹರೀಸಂದ್ರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಅಪೂರ್ವ ಸಿ.ಎಂ, ‘ಕೆಪಿಎಸ್ ಮ್ಯಾಗ್ನೆಟ್ ವಿರುದ್ಧ ಜನಾಕ್ರೋಶಕ್ಕೆ ಹೆದರಿರುವ ಸರ್ಕಾರ, ಈಗ ಕೇವಲ ಯೋಜನೆಯ ಹೆಸರನ್ನು ಬದಲಿಸಿ ಶಾಲೆಗಳ ವಿಲೀನ ಪ್ರಕ್ರಿಯೆ ಮುಂದುವರಿಸುತ್ತಿದೆ. ಇದು ಬಡವರ ಮಕ್ಕಳ ಶಿಕ್ಷಣವನ್ನು ಕಸಿದುಕೊಳ್ಳುವ ತಂತ್ರವಾಗಿದೆ’ ಎಂದರು ದೂರಿದರು.

‘1919-20ರಲ್ಲಿ ಸ್ಥಾಪನೆಯಾದ ಹರೀಸಂದ್ರ ಸರ್ಕಾರಿ ಶಾಲೆ ಸುಮಾರು 107 ವರ್ಷಗಳ ಇತಿಹಾಸ ಹೊಂದಿದೆ. ಶಾಲೆಯ ದಾಖಲಾತಿ ಸಂಖ್ಯೆ 120 ದಾಟುತ್ತಿದ್ದರೂ ಇದನ್ನು ವಿಲೀನಗೊಳಿಸಲು ಹೊರಟಿರುವುದು ಖಂಡನೀಯ. ಶಾಲೆ ಉಳಿಸಲು ಹಳೆಯ ವಿದ್ಯಾರ್ಥಿಗಳು ತಮ್ಮ ಸ್ವಂತ ಹಣದಿಂದ ಕೊಠಡಿಗಳನ್ನು ನಿರ್ಮಿಸಲು ಮುಂದಾಗಿದ್ದಾರೆ’ ಎಂದರು.

‘ಪಾದರಹಳ್ಳಿ ಮಾದರಿ ಶಾಲೆಯು ಎಲ್.ಕೆ.ಜಿ.ಯಿಂದ ದ್ವಿತೀಯ ಪಿಯುಸಿವರೆಗೆ ಶಿಕ್ಷಣ ನೀಡುವ ಭರವಸೆ ನೀಡುತ್ತಿದ್ದರೂ, ಇದು ವಾಸ್ತವದಲ್ಲಿ ಹಳ್ಳಿಮಟ್ಟದ ಶಾಲೆಗಳ ಅಸ್ತಿತ್ವಕ್ಕೆ ಮಾರಕವಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಈ ನೀತಿಗೆ ವಿರೋಧ ವ್ಯಕ್ತವಾಗುತ್ತಿದೆ’ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಮದರ್ ಸಾಬರದೊಡ್ಡಿಯ ಕಿಶನ್ ಗೌಡ, ಕೃಷ್ಣ, ಲೋಕೇಶ್, ಮಂಜುಳ, ಕುಮಾರ್, ಮಮತಾ, ಹನುಮಂತ, ಹರಿಸಂದ್ರ ಗ್ರಾಮಸ್ಥರಾದ ಶಿವಕುಮಾರ್, ಉಮೇಶ್, ಮಧು, ಸಂತೋಷ್, ಜಯಂತಿ, ಶಶಿಕಲಾ, ಸಂಜು, ಭಾರತಿ ಹಾಗೂ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-14-854085144

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.