ರಾಮನಗರ: ನಗರದ ಕನ್ನಿಕಾ ಮಹಲ್ನಲ್ಲಿ ವಾಸವಿ ಭಜನಾ ಮಂಡಳಿ ಹಮ್ಮಿಕೊಂಡಿದ್ದ ಶತಕಂಠ ಗಾಯನ ಕಾರ್ಯಕ್ರಮ ಜರುಗಿತು. ಸಂಗೀತ ಶಿಕ್ಷಕಿ ಶಶಿಕಲಾ ರಾಮಣ್ಣ ಮತ್ತು ಶಾಸ್ತ್ರೀಯ ಸಂಗೀತ ಕಲಾವಿದ ಪ್ರಸನ್ನ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮ ಮನಸೂರೆಗೊಂಡಿತು.

ರಾಮನಗರದ ಜೊತೆಗೆ ಜಿಲ್ಲೆಯ ಮಾಗಡಿ, ಕನಕಪುರ, ಚನ್ನಪಟ್ಟಣ, ಕುದೂರು ಭಾಗದಿಂದ ಬಂದಿದ್ದ ನೂರು ಮಹಿಳೆಯರು ಎರಡು ತಾಸಿಗೂ ಹೆಚ್ಚು ನಿರಂತರವಾಗಿ ಗಾನಸುಧೆ ಹರಿಸಿದರು. ಭಕ್ತಿ ಮತ್ತು ಭಾವಗೀತೆಗಳ ಗಾಯನ ಗಮನ ಸೆಳೆಯಿತು. ನೂರು ಮಹಿಳೆಯರು ಒಂದೇ ಸ್ವರದಲ್ಲಿ ದೇವರನಾಮ ಮತ್ತು ಕೀರ್ತನೆ ಪ್ರಸ್ತುತಪಡಿಸಿದರು.

ಸಂಗೀತಕ್ಕೆ ವಿಶೇಷ ಶಕ್ತಿ ಇದೆ. ಮಾನಸಿಕ ಕ್ಲೇಶಗಳನ್ನು ನಿವಾರಿಸುವ ಜೊತೆಗೆ ಒತ್ತಡ ನಿವಾರಣೆಗೂ ಮದ್ದಾಗಿದೆ. ದೇವರ ನಾಮಸ್ಮರಣೆ, ಕೀರ್ತನೆಗಳನ್ನು ಪಠಿಸುವುದು, ಆಲಿಸುವುದರಿಂದ ಮನಸ್ಸು ಹಗುರವಾಗಲಿದೆ ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಅಭಿಪ್ರಾಯಪಟ್ಟರು.

ಮೈಸೂರಿನ ರಶ್ಮಿ ಆದಿಶ್ ಮತ್ತು ಆರ್ಯವೈಶ್ಯ ಮಾಸಿಕ ಪತ್ರಿಕೆಯ ಸಂಪಾದಕಿ ಮೇಘ ಅವರನ್ನು ಸನ್ಮಾನಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-14-636986408

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.