ರಾಮನಗರ: ನಗರದ ವಿಶೇಷ ಮಕ್ಕಳಿಗೆ ನಗರಸಭೆ ವತಿಯಿಂದ ಬುಧವಾರ ಅಂಚೆ ಇಲಾಖೆಯ ₹40 ಸಾವಿರ ಮೊತ್ತದ ಬಾಂಡ್ಗಳನ್ನು ವಿತರಿಸಲಾಯಿತು. ನಗರಸಭೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಅವರು ವಿತರಣೆ ಮಾಡಿದರು.

ಬಳಿಕ ಮಾತನಾಡಿದ ಅವರು, ‘2025-26ನೇ ಬಜೆಟ್ನಲ್ಲಿ ಅಂಗವಿಕಲ ಮಕ್ಕಳ ಅಭ್ಯುಧಯಕ್ಕಾಗಿ ₹6.50 ಲಕ್ಷ ಅನುದಾನ ಮೀಸಲಿಟ್ಟಿದ್ದೇವು. ಅದಕ್ಕೆ 16 ಮಕ್ಕಳ ಪೋಷಕರು ಅರ್ಜಿ ಸಲ್ಲಿಸಿದ್ದರು. ಅವರಿಗೆ ತಲಾ ₹40,600 ಮೊತ್ತದ ಅಂಚೆ ಇಲಾಖೆಯ ಬಾಂಡ್ಗಳನ್ನು ನೀಡುತ್ತಿದೇವೆ. 10 ವರ್ಷಗಳ ಅವಧಿಯ ಬಾಂಡ್ ಮೆಚ್ಯುರಿಯಾದಾಗ ಫಲಾನುಭವಿಗಳಿಗೆ ₹81,200 ಸಿಗಲಿದೆ’ ಎಂದರು.

‘ವಿಶೇಷ ಮಕ್ಕಳು ದೇವರಿಗೆ ಸಮ. ಅವ ಆರೋಗ್ಯ, ಶಿಕ್ಷಣ, ಪೋಷಣೆಗೆ ನೆರವಾಗುವುದು ಪುಣ್ಯದ ಕೆಲಸ. ಒಂದು ವಿಶೇಷ ಮಗುವನ್ನು ಸಾಕುವುದು ಅಷ್ಟು ಸುಲಭವಲ್ಲ. ಈ ವಿಷಯದಲ್ಲಿ ಅವರನ್ನು ಹೆತ್ತ ತಂದೆ–ತಾಯಿಯ ಶ್ರಮ ಶ್ಲಾಘನೀಯ. ಅವರ ಸೇವೆಗೆ ಬೆಲೆ ಕಟ್ಟಲಾಗದು. ಅಂತರಿಗೆ ನೆರವಾಗಲೆಂದು ನಗರಸಭೆ ಬಾಂಡ್ಗಳನ್ನು ವಿತರಿಸುತ್ತಿದೆ’ ಎಂದು ತಿಳಿಸಿದರು.

ಪೌರಾಯುಕ್ತ ಡಾ. ಜಯಣ್ಣ, ಉಪಾಧ್ಯಕ್ಷೆ ಗಿರಿಜಮ್ಮ, ಸದಸ್ಯ ಮುತ್ತುರಾಜು ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.