ರಾಮನಗರ: ‘ಮೈಸೂರು ಸಂಸ್ಥಾನದ ಕೀರ್ತಿ ಬೆಳಗಿದ್ದ ಮೈಸೂರು ಹುಲಿ ಖ್ಯಾತಿಯ ಟಿಪ್ಪು ಸುಲ್ತಾನ್ ಅವರನ್ನು ಪಟ್ಟಭದ್ರರು ತಮ್ಮ ಹಿತಾಸಕ್ತಿಗಾಗಿ ಖಳನಾಯಕನನ್ನಾಗಿ ಬಿಂಬಿಸುತ್ತಾ ಬಂದಿದ್ದಾರೆ. ಅವರು ಹೇಳುವ ಕಪೋಲಕಲ್ಪಿತ ಕಥೆಗಳನ್ನು ನಂಬುವುದು ಈ ನಾಡಿನ ವಿವೇಕ ಪರಂಪರೆ ಮತ್ತು ಚರಿತ್ರೆಗೆ ಮಾಡುವ ಅವಮಾನ’ ಎಂದು ಸಾಹಿತಿ ಡಾ. ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯಪಟ್ಟರು.

ನಮ್ಮವರು ಬಳಗವು ನಗರದ ರಾಮ್ ಕಮಲ್ ಪಾರ್ಟಿ ಹಾಲ್ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಕರಾವಳಿಯ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್’ ಪುಸ್ತಕ ಬಿಡುಗಡೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪಟ್ಟಭದ್ರರ ಇಂತಹ ನಡೆಗಳು ನೈಜ ಚರಿತ್ರೆ ಮತ್ತು ವಾಸ್ತವದತ್ತ ಜನರ ಗಮನ ಸೆಳೆಯುವಂತೆ ಮಾಡಿರುವುದು ಉತ್ತಮ ಬೆಳವಣಿಗೆ. ಅದೇ ಕಾರಣಕ್ಕೆ ಟಿಪ್ಪು ಕುರಿತು ಹಲವು ಸಂಶೋಧನಾ ಕೃತಿಗಳು ಬಂದವು. ಆ ಪೈಕಿ ಕರಾವಳಿಯಲ್ಲಿ ಟಿಪ್ಪು ಕುರಿತ ತಪ್ಪು ಗ್ರಹಿಕೆಗೆ ನವೀನ್ ಅವರ ಈ ಪುಸಕ್ತ ಮದ್ದಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಇದೇ ಪಟ್ಟಭದ್ರರು ಹಿಂದೆ ಸಂವಿಧಾನ ಬದಲಾವಣೆ ಕುರಿತು ಮಾತನಾಡಿದಾಗ ದೇಶದಲ್ಲಿ ಸಂವಿಧಾನ ಪ್ರಜ್ಞೆ ಮೊಳಗಿತು. ಅದುವರೆಗೆ ಚರ್ಚೆಯ ವಸ್ತುವೇ ಆಗಿಲ್ಲದ್ದ ಸಂವಿಧಾನ ಕುರಿತು ಎಲ್ಲರೂ ಮಾತನಾಡತೊಡಗಿದರು. ಕಡೆಗೆ ಶಾಲೆಗಳಲ್ಲಿ ಸಂವಿಧಾನದ ಪೀಠಿಕೆ ಓದುವಷ್ಟರ ಮಟ್ಟಿಗೆ ಜಾಗೃತಿ ಮೂಡಿತು’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ಪ್ರಾಂಶುಪಾಲ ಅನ್ಸರ್ ಉಲ್ ಹಕ್, ‘ಟಿಪ್ಪು ಸೇರಿದಂತೆ ಮಹಾನ್ ವ್ಯಕ್ತಿಗಳ ಕುರಿತು ನಮ್ಮಲ್ಲಿರುವ ತಪ್ಪು ತಿಳಿವಳಿಕೆ ತೊಡೆದು ಹಾಕಬೇಕು. ಇಲ್ಲದಿದ್ದರೆ ಒಳ್ಳೆಯಯವರ ಬಗ್ಗೆಯೂ ತಪ್ಪಾಗಿ ಮಾತಾಡುವವರ ಸಂಖ್ಯೆ ಹೆಚ್ಚಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಲೇಖಕ ಕೊತ್ತಿಪುರ ಜಿ. ಶಿವಣ್ಣ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನವೀನ್ ಸೂರಿಂಜೆ ಹಾಗೂ ಕಾವ್ಯ ದಂಪತಿಯನ್ನು ಸನ್ಮಾನಿಸಲಾಯಿತು. ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಶಿವಕುಮಾರಸ್ವಾಮಿ, ಮುಸ್ಲಿಂ ಪದವೀಧರರ ವೇದಿಕೆಯ ಕಾರ್ಯದರ್ಶಿ ನಯಾಜ್ ಅಹಮದ್, ನಮ್ಮವರು ಬಳಗದ ಪದ್ಮರೇಖಾ, ನಗರಸಭೆ ಸದಸ್ಯ ಸಮದ್, ನಮ್ಮವರು ಬಳಗದ ಡಾ. ಅಂಕನಹಳ್ಳಿ ಪಾರ್ಥ, ಡಾ. ಕೃಷ್ಣ ಹಾಗೂ ಇತರರು ಇದ್ದರು. ಬಳಗದ ಆರ್. ನಾಗರಾಜು ಸ್ವಾಗತ ಮತ್ತು ನಿರೂಪಣೆ ಮಾಡಿದರು. ಬ್ಯಾಡರಹಳ್ಳಿ ಶಿವಕುಮಾರ್ ಸೌಹಾರ್ದ ಹಾಡುಗಳನ್ನು ಹಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-14-1463576075

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.