ರಾಮನಗರ: ಅರಣ್ಯದಂಚಿನಲ್ಲಿ ವಾಸಿಸುತ್ತಿರುವ 13 ಬುಡಕಟ್ಟು ಜನಾಂಗಗಳಿಗೆ ರಾಜ್ಯ ಸಿವಿಲ್ ಸೇವೆಗಳ ‘ಎ’ಯಿಂದ ‘ಡಿ’ ವೃಂದದ ಹುದ್ದೆಗಳಿಗೆ ಅವಕಾಶ ಕಲ್ಪಿಸಿ, ನೇರ ನೇಮಕಾತಿ ಮಾಡಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮೂಲ ಆದಿವಾಸಿಗಳ ವೇದಿಕೆ ಒತ್ತಾಯಿಸಿದೆ.

ಈ ಕುರಿತು ವೇದಿಕೆ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಇರುಳಿಗ, ಅಡವಿ ಫೌಂಡೇಷನ್ ಅಧ್ಯಕ್ಷ ಶ್ರೀನಿವಾಸ್ ವಿ., ಮುಖಂಡರಾದ ವೀರಭದ್ರ ಆರ್., ಚಕ್ಕೆರೆ ಸಿದ್ದರಾಜು ಹಾಗೂ ಯೋಗೆಶ್ ಅವರನ್ನು ಒಳಗೊಂಡ ನಿಯೋಗವು ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಅವರನ್ನು ಇತ್ತೀಚೆಗೆ ಭೇಟಿ ಮಾಡಿ ಮನವಿ ಸಲ್ಲಿಸಿತು.

ಮನವಿಯಲ್ಲೇನಿದೆ?: ರಾಜ್ಯ ಸರ್ಕಾರದ 2025–26ನೇ ಸಾಲಿನ ಬಜೆಟ್ನ ಕಂಡಿಕೆ–199ರಲ್ಲಿ ಅರಣ್ಯ ಮತ್ತು ಅರಣ್ಯದಂಚಿನಲ್ಲಿ ವಾಸಿಸುತ್ತಿರುವ 13 ಬುಡಕಟ್ಟು ಜನಾಂಗಗಳಾದ ಕಾಡು ಕುರುಬ, ಬೆಟ್ಟ ಕುರುಬ, ಜೇನುಕುರುಬ, ಇರುಳಿಗ, ಸೋಲಿಗ, ಕೊರಗ, ಹಸಲರು, ಗೌಡಲು, ಪಣಿಯನ್, ಯರವ, ಸಿದ್ಧಿ, ಕುಡಿಯ ಹಾಗೂ ಮಲೆ ಕುಡಿಯ ಬುಡಕಟ್ಟುಗಳಿಗೆ ರಾಜ್ಯ ಸಿವಿಲ್ ಸೇವೆಗಳಲ್ಲಿ ಪ್ರಾತಿನಿಧ್ಯ ನೀಡುವ ಸಲುವಾಗಿ ವಿಶೇಷ ನೇರ ನೇಮಕಾತಿ ಮಾಡಲು ಮುಂದಾಗಿರುವುದು ಮಹತ್ವದ ನಿರ್ಧಾರ.

ಎಸ್ಟಿ ಪಟ್ಟಿಯಲ್ಲಿರುವ ಈ ಬುಡಕಟ್ಟುಗಳು ಜನಾಂಗಗಳು ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳಾದರೂ ಇಂದಿಗೂ ಒಂದೇ ಒಂದು ಸರ್ಕಾರಿ ಕೆಲಸ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ನಿರ್ಧಾರದಿಂದ ದಿಕ್ಕು-ದೆಸೆ ಇಲ್ಲದೆ ಅಳಿವಿನಂಚಿನಲ್ಲಿರುವ ಆದಿವಾಸಿಗಳಿಗೆ ಮರು ಜೀವ ಬಂದಂತಾಗಿದೆ. ಆದರೆ ಈ ಕಾರ್ಯ ಕೇವಲ ‘ಸಿ’ ಮತ್ತು ‘ಡಿ’ ವೃಂದಗಳಿಗೆ ಮಾತ್ರ ಅನ್ವಯ ಮಾಡಿರುವುದು ಬೇಸರದ ಸಂಗತಿ.

ಆಧುನಿಕ ಕಾಲದಲ್ಲೂ ಆದಿವಾಸಿಗಳು ಮನೆಗಳಿಲ್ಲದೆ ಸಿಕ್ಕ ಸಿಕ್ಕಲ್ಲಿ ಹುಲ್ಲಿನ ಜೋಪಡಿಗಳನ್ನು ಹಾಕಿಕೊಂಡು, ಹಳ್ಳ ಕೊಳ್ಳದ ನೀರುಗಳನ್ನು ಕುಡಿದು ಬದುಕುತ್ತಿದ್ದಾರೆ. ಹಾಡಿ, ಗದ್ದೆ, ಪೋಡು, ಕಾಲೊನಿ ಹಾಗೂ ದೊಡ್ಡಿಗಳಲ್ಲಿ ಸರ್ಕಾರದ ದಾಖಲಾತಿಗಳಾದ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಓಟ್ ಕಾರ್ಡ್, ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಇಂದಿಗೂ ಸಮರ್ಪಕವಾಗಿ ಪಡೆಯಲು ಸಾಧ್ಯವಾಗಿಲ್ಲ.

ಸರ್ಕಾರ ತನ್ನ ಆಯವ್ಯಯದಲ್ಲಿ ಘೋಷಿಸಿರುವಂತೆ 13 ಜನಾಂಗಗಳಿಗೆ ‘ಎ’ಯಿಂದ ‘ಡಿ’ ವೃಂದದ ನೇಮಕಾತಿಯಲ್ಲೂ ರಾಜ್ಯ ಸರ್ಕಾರಿ ಸಿವಿಲ್ ಸೇವೆಗಳಿಗೆ ವಿಶೇಷ ನೇರ ನೇಮಕಾತಿ ಮಾಡಬೇಕು. ಆ ಮೂಲಕ ಅಳಿವಿನಂಚಿನಲ್ಲಿರುವ ಸಮುದಾಯಗಳಿಗೆ ಪ್ರಾನಿನಿಧ್ಯ ಕಲ್ಪಿಸಿ, ಅವರ ಅಭಿವೃದ್ಧಿಗೆ ಸಹಾಯ ಮಾಡಬೇಕು ಎಂದು ನಿಯೋಗವು ಮನವಿಯಲ್ಲಿ ಒತ್ತಾಯಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-14-11683397

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.