ರಾಮನಗರ: ‘ರಾಮನಗರದಲ್ಲಿ ಶೇ 70ಷ್ಟು ಅನಧಿಕೃತ ಬಡಾವಣೆಗಳೇ ಇವೆ. ಇಂದಿಗೂ ಹಲವು ಬಡಾವಣೆಗಳು ಸರಿಯಾದ ರಸ್ತೆ, ಉದ್ಯಾನ, ಯುಜಿಡಿ ಸೇರಿದಂತೆ ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿವೆ. ಇದೇ ಕಾರಣಕ್ಕೆ ನಗರದ ಶೇ 52ರಷ್ಟು ಭಾಗಕ್ಕೆ ಯುಜಿಡಿ (ಭೂಗತ ಒಳ ಚರಂಡಿ) ಸಂಪರ್ಕವೇ ಇಲ್ಲ’ ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಹೇಳಿದರು.

ನಗರದ ಅರ್ಕಾವತಿ ಬಡಾವಣೆ ಉದ್ಯಾನದಲ್ಲಿ ಶುಕ್ರವಾರ ಸ್ವಾಭಿಮಾನಿ ಸೇವಾ ಸಮಿತಿಗೆ ಉದ್ಯಾನ ನಿರ್ವಹಣೆ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಗರಸಭೆಗೆ ಬಂದಿದ್ದ ₹33 ಕೋಟಿ ಅನುದಾನದಲ್ಲಿ ವಾರ್ಡ್–1 ಮತ್ತು 2ರಲ್ಲಿ ಯುಜಿಡಿಗೆ ಯೋಜನೆ ರೂಪಿಸಲಾಗಿದೆ. ಅನುದಾನ ಆಧರಿಸಿ ಮುಂದೆಯೂ ಹಂತ ಹಂತವಾಗಿ ವಿಸ್ತರಿಸಲಾಗುವುದು’ ಎಂದರು.

‘ನಗರದಲ್ಲಿ ಸುಮಾರು ₹6 ಕೋಟಿ ತೆರಿಗೆ ಸಂಗ್ರಹವಾಗುತ್ತಿತ್ತು. ನಾನು ಅಧ್ಯಕ್ಷನಾದ ಬಳಿಕ ₹10 ಕೋಟಿಗೆ ಏರಿಕೆಯಾಗಿದೆ. ಇದೇ ಮೊತ್ತದಲ್ಲಿ ಅಭಿವೃದ್ಧಿ ಕಾರ್ಯಗಳ ಜೊತೆಗೆ ನಿರ್ವಹಣಾ ಕೆಲಸಗಳನ್ನು ಸಹ ಮಾಡಬೇಕಿದೆ. ಲಭ್ಯ ಸಂಪನ್ಮೂಲಗಳನ್ನು ಬಳಸಿಕೊಂಡೇ ಮಾದರಿ ನಗರ ನಿರ್ಮಾಣಕ್ಕೆ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಿದ್ದೇವೆ’ ಎಂದರು.

‘ಸ್ವಾಭಿಮಾನಿ ಸೇವಾ ಸಮಿತಿಯವರು ಉದ್ಯಾನ ನಿರ್ವಹಣೆಗೆ ಮುಂದೆ ಬಂದಿರುವುದು ಮಾದರಿ ನಡೆ. ಸಾರ್ವಜನಿಕ ಸ್ವತ್ತನ್ನು ರಕ್ಷಿಸಿ ನಿರ್ವಹಿಸುವ ಪ್ರಜ್ಞೆಯು ಜನರಲ್ಲಿ ಬಂದಾಗ ಮಾತ್ರ ಬದಲಾವಣೆ ಸಾಧ್ಯ. ಆ ನಿಟ್ಟಿನಲ್ಲಿ ನಾಗರಿಕರು ನಗರಸಭೆಗೆ ಸಹಕರಿಸಬೇಕು. ಸ್ವಚ್ಛ ರಾಮನಗರ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕು’ ಎಂದು ಮನವಿ ಮಾಡಿದರು.

ಪೌರಾಯುಕ್ತ ಡಾ. ಜಯಣ್ಣ ಮಾತನಾಡಿ, ‘ಉದ್ಯಾನ ನಿರ್ವಹಣೆಗೆ ಸ್ವಯಂ ಪ್ರೇರಣೆಯಿಂದ ಸ್ವಾಭಿಮಾನಿ ಸೇವಾ ಸಮಿತಿ ಮುಂದೆ ಬಂದಿರುವುದು ಶ್ಲಾಘನೀಯ. ನಗರದಲ್ಲಿ ಖಾಸಗಿ ನಿರ್ವಹಣೆಗೆ ವಹಿಸಿರುವ ಎರಡನೇ ಉದ್ಯಾನ ಇದಾಗಿದೆ. ಈಗಾಗಲೇ ಕುವೆಂಪು ಉದ್ಯಾನವನ್ನು ಸ್ಥಳೀಯರಿಗೆ ವಹಿಸಲಾಗಿದೆ. ಇದು ಪ್ರೇರಣದಾಯಕ ಕೆಲಸ’ ಎಂದರು.

ಸಮಿತಿ ಅಧ್ಯಕ್ಷ ಎಸ್. ಗವಿಯಯ್ಯ ಮಾತನಾಡಿ, ‘ನಗರಸಭೆಯು ಸಮಿತಿ ಮೇಲೆ ನಂಬಿಕೆ ಇಟ್ಟು ಉದ್ಯಾನ ನಿರ್ವಹಣೆಯ ಜವಾಬ್ದಾರಿ ಕೊಟ್ಟಿದೆ. ಜನಮನ ಸೆಳೆಯುವಂತೆ ಉದ್ಯಾನವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿ ನಂಬಿಕೆ ಉಳಿಸಿಕೊಳ್ಳುತ್ತೇವೆ’ ಎಂದು ಹೇಳಿದರು.

ನಗರಸಭೆ ಸದಸ್ಯ ಕೆ. ರಮೇಶ್, ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರಸ್ವಾಮಿ, ಮುಖಂಡರಾದ ಆನಂದ್, ಆರ್. ನಾಗರಾಜು, ಚಂದ್ರು ಮಾತನಾಡಿದರು. ಅರ್ಕಾವತಿ ಬಡಾವಣೆಗೆ ಯುಜಿಡಿ ಸೇರಿದಂತೆ ಇತರ ಸೌಲಭ್ಯ ಒದಗಿಸುವಂತೆ ಸ್ಥಳೀಯ ನಿವಾಸಿ ಪದ್ಮಾವತಿ ಅವರು ನಗರಸಭೆ ಅಧ್ಯಕ್ಷರಿಗೆ ಮನವಿ ಮಾಡಿದರು.

ವಾರ್ಡ್–1ರ ಸದಸ್ಯೆ ಜಯಲಕ್ಷ್ಮಮ್ಮ, ಡಾ. ನಯಾಜ್ ಅಹಮದ್, ಚಿಕ್ಕೇನಹಳ್ಳಿ ನಾಗರಾಜ್, ಸಮಿತಿ ಸಂಸ್ಥಾಪಕ ಅಧ್ಯಕ್ಷ ಸಿ. ಸಿದ್ದರಾಜು, ಉಪಾಧ್ಯಕ್ಷ ಪುಟ್ಟಸ್ವಾಮಿ, ಖಜಾಂಚಿ ಶಿವಣ್ಣ, ಸದಸ್ಯರಾದ ಕೆಂಗಲ್ ವಿನಯಕುಮಾರ್, ಬಸವರಾಜು, ಮರಿಸ್ವಾಮಿ, ಆರ್. ನಾಗರಾಜು, ಲಕ್ಷ್ಮಿಕುಮಾರ್, ನಾಗವೀರಯ್ಯ, ಶಿವಲಿಂಗಯ್ಯ, ರಾಮು, ವೆಂಕಟೇಶ್, ಹೋಬಯ್ಯ, ಸುರೇಂದ್ರಕುಮಾರ್, ಜವರಯ್ಯ, ಗಂಗಾಧರ್, ಪುರುಷೋತ್ತಮ್, ಜೈಪ್ರಕಾಶ್, ಮಿಲಿಟರಿ ವೆಂಕಟೇಶ್, ಅಧ್ಯಕ್ಷ ದೊಡ್ಡಿ ಸೂರಿ, ಸಿದ್ದಪ್ಪಾಜಿ, ನಗರಸಭೆ ಅಧಿಕಾರಿಗಳು ಹಾಗೂ ಇತರರು ಇದ್ದರು. ಸುಮಂಗಲಾ ಸಿದ್ದರಾಜು ಪ್ರಾರ್ಥನೆ ಹಾಡಿದರು. ಸಮಿತಿ ಕಾರ್ಯದರ್ಶಿ ಆರ್.ಸಿ. ವಿಜಯಕುಮಾರ್ ನಿರೂಪಣೆ ಮಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-14-2067643598

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.