ರಾಮನಗರ: ಹೊಸ ವರ್ಷ ಯುಗಾದಿ ಹಾಗೂ ರಂಜಾನ್ ಹಬ್ಬದ ಸಾಮಗ್ರಿಗಳನ್ನು ಜನರು ಬುಧವಾರ ಖರೀದಿಸಿದರು. ಬೆಲೆ ಏರಿಕೆಯ ಬಿಸಿ ಹಬ್ಬರ ಖರೀದಿಯ ಸಡಗರ, ಸಂಭ್ರಮಕ್ಕೆ ಅಡ್ಡಿಯಾಗಲಿಲ್ಲ.

ಮಾರುಕಟ್ಟೆಯಲ್ಲಿ ದಿನಸಿ ಪದಾರ್ಥ, ಹಣ್ಣು, ತರಕಾರಿ, ಹೂವು, ಪೂಜಾ ಸಾಮಗ್ರಿಗಳು ಮಾಮೂಲಿಗಿಂತ ತುಸು ದುಬಾರಿಯಾಗಿದ್ದವು. ಜನತೆ ಅಗತ್ಯ ವಸ್ತುಗಳ ಖರೀದಿಯಲ್ಲಿ ಉತ್ಸಾಹದಿಂದಲೇ ತೊಡಗಿಕೊಂಡಿದ್ದರು.

ಕಳೆದ ಒಂದು ವಾರದಿಂದಲೂ ಭರ್ಜರಿ ವ್ಯಾಪಾರ ನಡೆಯುತ್ತಿದ್ದು ಹಬ್ಬದ ಮುನ್ನಾದಿನ ಹೆಚ್ಚಿನ ಅಂಗಡಿಗಳು ತುಂಬಿ ಹೋಗಿದ್ದವು. ಕಡಲೆಬೇಳೆ, ತೊಗರಿ ಬೇಳೆ, ಮೈದಾ, ಬೆಲ್ಲಾ ಸೇರಿದಂತೆ ದಿನಸಿ ಪದಾರ್ಥಗಳನ್ನು ಅಂಗಡಿಗಳ ಮುಂದೆ ಪೆಂಡಾಲ್ ಹಾಕಿ ಮಾರಾಟ ಮಾಡುತ್ತಿದ್ದ ದೃಶ್ಯ ಕಂಡುಬಂತು.

ರಾಮನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಯುಗಾದಿ ಹಬ್ಬದ ಖರೀದಿ ಜೋರಾಗಿ ಸಾಗಿತ್ತು. ತರಕಾರಿ, ತೆಂಗಿನಕಾಯಿ, ಮಾವಿನ ಸೊಪ್ಪು, ಹೂವು ಸೇರಿದಂತೆ ಅಗತ್ಯ ವಸ್ತುಗಳ ಖರೀದಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.