ರಾಮನಗರ: ಸೊಪ್ಪು ಮತ್ತು ತರಕಾರಿ ಬೆಳೆದಿದ್ದ ಜಾಗದಲ್ಲಿ ಹಸು ಮೇಯಿಸಿದ್ದನ್ನು ಪ್ರಶ್ನಿಸಿದ ಮಹಿಳೆಯನ್ನು ವ್ಯಕ್ತಿಯೊಬ್ಬ ಥಳಿಸಿ ಕೊಲೆ ಮಾಡಿರುವ ಘಟನೆ ನಗರದ ಬಾಲಗೇರಿಯಲ್ಲಿ ನಡೆದಿದೆ.

ತಬಸ್ಸುಮ್ (50) ಮೃತ ಮಹಿಳೆ. ಕೊಲೆ ಮಾಡಿದ ಆರೋಪದ ಮೇಲೆ ಅದೇ ಬಡಾವಣೆಯ ಶ್ರೀನಿವಾಸ್ ಅಲಿಯಾಸ್ ಸೀನ ಎಂಬಾತನನ್ನು ರಾಮನಗರ ಟೌನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮುನ್ನಾ ಎಂಬುವರನ್ನು ಮದುವೆಯಾಗಿದ್ದ ತಬಸ್ಸುಮ್ ಅವರಿಗೆ ಇಬ್ಬರು ಪುತ್ರಿಯರು ಹಾಗೂ ಪುತ್ರನೊಬ್ಬ ಇದ್ದಾನೆ. ಕೆಲ ವರ್ಷಗಳ ಹಿಂದೆ ಮಹಿಳೆಯ ಪತಿ ತೀರಿಕೊಂಡಿದ್ದರಿಂದರು. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ತಬಸ್ಸುಮ್ ಇತ್ತೀಚೆಗೆ ಶಸ್ತ್ರಚಿಕಿತ್ಸೆ ಕೂಡ ಮಾಡಿಸಿಕೊಂಡಿದ್ದರು.

ತಮ್ಮ ಮನೆ ಪಕ್ಕದಲ್ಲಿದ್ದ ಜಾಗದಲ್ಲಿ ತಬಸ್ಸುಮ್ ಅವರು ಸೊಪ್ಪು ಮತ್ತು ತರಕಾರಿ ಬೆಳೆಯುತ್ತಿದ್ದರು. ಅದೇ ಜಾಗಕ್ಕೆ ತಮ್ಮ ಹಸು ಮತ್ತು ಎಮ್ಮೆ ಮೇಯಿಸಲು ಬರುತ್ತಿದ್ದ ಆರೋಪಿ ಸೀನ ದನಗಳನ್ನು ಮೇಯಲು ಬಿಡುತ್ತಿದ್ದ. ಇದೇ ಕಾರಣಕ್ಕೆ ಮಹಿಳೆ ಮತ್ತು ಆತನ ನಡುವೆ ಜಗಳ ನಡೆದಿತ್ತು ಎಂದು ಪೊಲೀಸರು ತಿಳಿಸಿದರು.

ಎರಡ್ಮೂರು ತಿಂಗಳ ಹಿಂದೆಯೂ ಇದೇ ಕಾರಣಕ್ಕಾಗಿ ಇಬ್ಬರ ನಡುವೆ ಜಗಳವಾಗಿತ್ತು. ಊರಿನ ಹಿರಿಯರು ಸೀನನಿಗೆ ಬುದ್ಧಿವಾದ ಹೇಳಿ ₹1 ಸಾವಿರ ದಂಡ ವಿಧಿಸಿದ್ದರು. ಅಂದಿನಿಂದ ಆರೋಪಿ ತಬಸ್ಸುಮ್ ವಿರುದ್ಧ ದ್ವೇಷ ಕಾರುತ್ತಿದ್ದ ಜೂನ್ 1ರಂದು ಸಂಜೆ 6.30ರ ಸುಮಾರಿಗೆ ಸೀನ ಮತ್ತೆ ಹಸುಗಳನ್ನು ಮೇಯಲು ಬಿಟ್ಟಿದ್ದ. ಅದನ್ನು ಪ್ರಶ್ನಿಸಿದ ತಬಸ್ಸುಮ್ ಅವರನ್ನು ಮನಸೋ ಇಚ್ಛೆ ಥಳಿಸಿದ್ದ ಎಂದು ಪೊಲೀಸರು ಹೇಳಿದರು.

ಹಲ್ಲೆಯಿಂದಾಗಿ ತಬಸ್ಸುಮ್ ಆರೋಗ್ಯದಲ್ಲಿ ಏರುಪೇರಾಗಿತ್ತು. ಸಹೋದರಿಗೆ ಕರೆ ಮಾಡಿ ವಿಷಯ ತಿಳಿಸಿ, ಕೂಡಲೇ ಆಟೊ ಹತ್ತಿಕೊಂಡು ಜಿಲ್ಲಾಸ್ಪತ್ರೆಗೆ ಬಂದ ಅವರು ಪ್ರಜ್ಞೆ ತಪ್ಪಿ ಕುಸಿದು ಬಿದ್ದರು. ತಕ್ಷಣ ಆಟೊ ಚಾಲಕ ಆಸ್ಪತ್ರೆ ಸಿಬ್ಬಂದಿ ಮಹಿಳೆಯನ್ನು ತುರ್ತು ವಿಭಾಗಕ್ಕೆ ಎತ್ತಿಕೊಂಡು ಹೋದದರು. ಪರಿಶೀಲನೆ ನಡೆಸಿದ ವೈದ್ಯರು ತಬಸ್ಸುಮ್ ಅವರು ಮೃತಪಟ್ಟಿರುವುದಾಗಿ ಖಚಿತಪಡಿಸಿದರು ಎಂದು ಪೊಲೀಸರು ತಿಳಿಸಿದರು.

ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಘಟನೆಗೆ ಸಂಬಂಧಿಸಿದಂತೆ ಮೃತರ ಸಹೋದರಿ ನೀಡಿದ ದೂರಿನ ಮೇರೆಗೆ ಆರೋಪಿ ಸೀನನ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-14-141336256

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.