ರಾಮನಗರ: ‘ಸಂಪ್ರದಾಯದ ಹೆಸರಿನಲ್ಲಿ ಪುರುಷ ಪ್ರಧಾನ ಸಮಾಜವು ಮಹಿಳೆಯರನ್ನು ಶೋಷಿತ್ತಲೇ ಬಂದಿದೆ. ಸ್ವಾತಂತ್ರ್ಯ ನಂತರದ ಸರ್ಕಾರಗಳು ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡಿದ್ದರ ಫಲವಾಗಿ, ಇಂದು ಮಹಿಳೆಯರು ಸಹ ಮುಖ್ಯವಾಹಿನಿಗೆ ಬರುತ್ತಿದ್ದಾರೆ. ಲಿಂಗಬೇಧವಿಲ್ಲದ ಸಮಾಜ ನಿರ್ಮಾಣಕ್ಕೆ ಮಹಿಳೆಯರು ಮತ್ತಷ್ಟು ಸಬಲರಾಗಬೇಕು. ಅದಕ್ಕೆ ಸಂಘ–ಸಂಸ್ಥೆಗಳು ಸೇರಿದಂತೆ ಎಲ್ಲರೂ ಕೈ ಜೋಡಿಸಬೇಕು’ ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಹೇಳಿದರು.

ರೋಟರಿ ಸಿಲ್ಕ್ ಸಿಟಿಯು ನಗರದ ಎಂ.ಜಿ. ರಸ್ತೆಯ ಕನ್ನಿಕಾ ಮಹಲ್ನಲ್ಲಿ ಶುಕ್ರವಾರ ಮಹಿಳೆಯರಿಗಾಗಿ ಹಮ್ಮಿಕೊಂಡಿದ್ದ ಉಚಿತ ತರಬೇತಿ ಕಾರ್ಯಾಗಾರ ಹಾಗೂ ಹೊಲಿಗೆ ಯಂತ್ರಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರೋಟರಿ ಸಂಸ್ಥೆ ಮಹಿಳೆಯರಿಗೆ ತರಬೇತಿ ಜೊತೆಗೆ ಉಚಿತವಾಗಿ ಹೊಲಿಗೆಯಂತ್ರ ಹಾಗೂ ಅಗತ್ಯ ಸಲಕರಣೆ ವಿತರಿಸಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗಿರುವುದು ಶ್ಲಾಘನೀಯ’ ಎಂದರು.

‘ಸಮಾಜದಲ್ಲಿ ಪುರುಷ್ಟನಷ್ಟೇ ಮಹಿಳೆಗೂ ಸಮಾನ ಹಕ್ಕಿದೆ. ಗಂಡು ಮತ್ತು ಹೆಣ್ಣು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಮಹಿಳೆ ಸಬಲವಾದರೆ ಇಡೀ ಕುಟುಂಬ ಸಬಲೀಕರಣವಾದಂತೆ. ಶಾಸನಸಭೆಯಲ್ಲಿ ಮಹಿಳೆಯರಿಗೆ ಸಮಾನ ಪ್ರಾತಿನಿಧ್ಯ ಸಿಗಬೇಕು. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾಯ್ದೆ ಜಾರಿಗೆ ತರಬೇಕು’ ಎಂದು ಒತ್ತಾಯಿಸಿದರು.

ಗಣೇಶ್ ಜ್ಯೂವೆಲರ್ಸ್ ಮಾಲೀಕ ಲಕ್ಷ್ಮಣ್ ಮಾತನಾಡಿ, ‘ಸಮಾಜ ಸೇವೆ ಕುರಿತು ರೋಟರಿ ಸಂಸ್ಥೆಯು ನನ್ನಲ್ಲಿ ಉತ್ಸಾಹ ತುಂಬಿತು. ಅದರಿಂದ ಉತ್ತೇಜಿತನಾಗಿ ಮಹಿಳೆಯರಿಗೆ ಅನುಕೂಲವಾಗಲಿ ಎಂದು ಹೊಲಿಗೆ ಯಂತ್ರಗಳನ್ನು ಕೊಡುಗೆಯಾಗಿ ನೀಡಿದ್ದೇನೆ. ಮಹಿಳೆಯರು ಇದರ ಸದ್ಭಳಕೆ ಮಾಡಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ಶ್ರೀಧರ್ ಕೆ.ಎನ್, ‘ಸಂಸ್ಥೆಯು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ಉಚಿತ ಆರೋಗ್ಯ ತಪಾಸಣೆ ಶಿಬಿರ, ಕೌಶಲ ತರಬೇತಿ, ಶಿಕ್ಷಣ ಪರಿಕರ ವಿತರಣೆ ಸೇರಿದಂತೆ ಹಲವು ಶಿಬಿರಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಅದರಂತೆ ಉಚಿತವಾಗಿ ಹೊಲಿಗೆ ತರಬೇತಿ ಶಿಬಿರ ಹಮ್ಮಿಕೊಂಡು ಯಂತ್ರಗಳನ್ನು ಸಹ ವಿತರಿಸಲಾಗಿದೆ’ ಎಂದರು.

ಮಹಿಳೆಯರಿಗೆ 142 ಹೊಲಿಗೆಯಂತ್ರ, 101 ಬ್ಯೂಟಿ ಪಾರ್ಲರ್ ಕಿಟ್ ಹಾಗೂ ಸೀರೆ ಕುಚ್ಚು ಹಾಕುವ 30 ಸಲಕರಣೆಗಳನ್ನು ವಿತರಿಸಲಾಯಿತು. ನಗರಸಭೆ ಉಪಾಧ್ಯಕ್ಷೆ ಆಯೇಶಾ ಬಾನು, ರೋಟರಿ ಸಂಸ್ಥೆಯ ಆನಂದ ರಾಮಚಂದ್ರನ್, ರಾಘವೇಂದ್ರ ಇನಾಂದಾರ್, ಡಾ. ಅನುಪಮ ಆರ್. ಸವದಿ, ಎನ್. ರವಿಕುಮಾರ್, ಮಲ್ಲೇಶ್, ಎಸ್. ರಾಮಲಿಂಗಯ್ಯ, ಅರುಣ್ಕುಮಾರ್, ಎಸ್.ಆರ್. ನಾಗರಾಜು ಹಾಗೂ ಇತರರು ಇದ್ದರು.

ತಂತ್ರಜ್ಞಾನ ಅಳವಡಿಸಿಕೊಳ್ಳಲು ಸಲಹೆ ‘ರೋಟರಿ ಸಿಲ್ಕ್ ಸಿಟಿಯು ಉತ್ತಮ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಗಮನ ಸೆಳೆದಿದೆ. ಆರೋಗ್ಯ ಶಿಕ್ಷಣ ಕೌಶಲಾಭಿವೃದ್ಧಿ ಕಾರ್ಯಕ್ರಮಗಳ ಜೊತೆಗೆ ಮಹಿಳೆಯರು ಹಾಗೂ ಅಶಕ್ತರಿಗೆ ನೆರವಾಗುತ್ತಾ ಬಂದಿದೆ. ಕಡಿಮೆ ಅವಧಿಯಲ್ಲಿ ಹೊಲಿಗೆ ತರಬೇತಿ ಪೂರೈಸಿರುವ ಮಹಿಳೆಯರು ಮುಂದಿನವರಿಗೆ ಮಾದರಿಯಾಗಿದ್ದಾರೆ. ಹೊಲಿಗೆ ಕೆಲಸದಲ್ಲಿ ಆಧುನಿಕತೆ ಜೊತೆಗೆ ಪೂರಕ ಕೌಶಲ ಕಲಿತುಕೊಂಡರೆ ಹೆಚ್ಚು ಲಾಭ ಗಳಿಸಬಹುದು’ ಎಂದು ಜಿಲ್ಲಾ ರೋಟರಿ ಸಂಸ್ಥೆ ಪಾಲಕ ಸತೀಶ್ ಮಾಧವನ್ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.