ರಾಮನಗರ: ‘ಸಮಾಜ ಕಾರ್ಯಕರ್ತರು ಸಮಾಜದ ಸಮಸ್ಯೆಗಳಿಗೆ ಮೊದಲು ಕಿವಿಯಾಗಬೇಕು. ಸಾರ್ವಜನಿಕವಾಗಿ ಉಪಯುಕ್ತ ಎನಿಸುವ ಸಮಸ್ಯೆಗಳನ್ನು ಬಗೆಹರಿಸುವತ್ತ ಗಮನ ಹರಿಸಬೇಕು’ ಎಂದು ಸಾಹಿತಿ ಡಾ. ಬಂಜಗೆರೆ ಜಯಪ್ರಕಾಶ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ತಾಲ್ಲೂಕಿನ ಮುದ್ದುಶ್ರೀ ದಿಬ್ಬದಲ್ಲಿ ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಸಹಯೋಗದಲ್ಲಿ ಮೈಸೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗ ಹಮ್ಮಿಕೊಂಡಿದ್ದ ಸಹಭಾಗಿತ್ವ ಸಮಾಜಕಾರ್ಯ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸಮಾಜದ ಎಲ್ಲಾ ಅಂಗಗಳನ್ನೂ ನೋಡುವ ಅವಕಾಶ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳಿಗೆ ಮಾತ್ರ ಲಭಿಸುತ್ತದೆ. ಸಮಾಜದ ಎಲ್ಲಾ ಕ್ಷೇತ್ರಗಳೂ ತಮ್ಮ ಕರ್ತವ್ಯಗಳಲ್ಲಿ ಲೋಪವೆಸಗುತ್ತಿರುವ ಈ ದಿನಗಳಲ್ಲಿ ವ್ಯವಸ್ಥೆಯನ್ನು ಸರಿಪಡಿಸುವವರಿಗಿಂತ ದೂರುವವರೇ ಹೆಚ್ಚು. ವ್ಯವಸ್ಥೆಯನ್ನು ದೂರುವವರಿಗಿಂತ ಸರಿಪಡಿಸುವ ಮನೋಭಾವ ಹೊಂದಿರುವವರ ಸಂಖ್ಯೆ ಹೆಚ್ಚಬೇಕು’ ಎಂದರು.

‘ಮಹಾತ್ಮ ಜ್ಯೋತಿಬಾಪುಲೆ ಮತ್ತು ಸಾವಿತ್ರಿ ಬಾಯಿ ಪುಲೆ ಸಾಮಾನ್ಯ ಜನರಿಗೆ ಶಿಕ್ಷಣ ಕೊಡಿಸುವಲ್ಲಿ ತಮ್ಮ ನಿಷ್ಠೆಯನ್ನು ಮೆರೆದರೇ ಹೊರತು, ಅವರಿಗೆ ಬಂದ ಅಡ್ಡಿ ಆತಂಕಗಳ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಈ ಆದರ್ಶಗಳು ನಮಗೆ ದಾರಿದೀಪವಾಗಬೇಕು. ಅಂದಿನ ಕಾಲಘಟ್ಟದಲ್ಲಿ ಅನುಭವಿಸಿರುವ ಮತ್ತು ಪಡೆದಿರುವ ಅನುಭವಗಳು ಇಂದಿನ ತಲೆಮಾರಿನಲ್ಲಿ ಇಲ್ಲ’ ಎಂದು ಹೇಳಿದರು.

ಇಫ್ರೊ ಜಾನಪದ ಮಹಾವಿದ್ಯಾಲಯದ ನಿರ್ದೇಶಕ ಡಾ. ಎಂ. ಬೈರೇಗೌಡ ಮಾತನಾಡಿ, ‘ಸಮಾಜ ಕಾರ್ಯವೆಂದರೆ ಅದೊಂದು ಯಜ್ಞ. ಹಲವು ಸಮುದಾಯಗಳಿಗೆ ನಿಮ್ಮ ಸೇವೆಯ ಅವಕಾಶ ದೊರೆಯುತ್ತದೆ. ಅಂತಹ ಸದಾವಕಾಶದಿಂದ ವಂಚಿತರಾಗದೆ ಯಾವುದೇ ಫಲಾಪೇಕ್ಷೆ ಇಲ್ಲದೆ ನಡೆದುಕೊಳ್ಳಬೇಕಾದ್ದು ಕರ್ತವ್ಯವಾಗಬೇಕು’ ಎಂದರು.

ಶಿಬಿರಾರ್ಥಿಗಳಿಗೆ ಹಮ್ಮಿಕೊಂಡಿದ್ದ ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶಿಬಿರದ ನಿರ್ದೇಶಕ ಪ್ರೊ. ಆರ್. ಶಿವಪ್ಪ, ಶಿಬಿರ ಸಂಚಾಲಕ ಮುಖೇಶ್, ಪವನ್ಕುಮಾರ್ ಎಂ., ಪ್ರೊ. ಜ್ಯೋತಿ ಎಚ್.ಪಿ, ಪ್ರೊ. ಚಂದ್ರಮೌಳಿ ವೇದಿಕೆಯಲ್ಲಿದ್ದರು. ಶಿಬಿರಾರ್ಥಿ ನೇತ್ರ ಮತ್ತು ತಂಡ ಪ್ರಾರ್ಥಿಸಿದರು. ಮಧುಪಲ್ಲವಿ ಸ್ವಾಗತ ಕೋರಿದರು. ಗಿರಿಧರ್
ಗೌತಮ್ ವಂದಿಸಿದರು. ಮಧುಕುಮಾರ್ ಸಿ. ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.