ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ ತಾಲ್ಲೂಕಿನ ಪ್ರಥಮ ವೈದ್ಯ ತಿಮ್ಮಯ್ಯ ಇನ್ನಿಲ್ಲ

Last Updated 16 ಸೆಪ್ಟೆಂಬರ್ 2019, 14:35 IST
ಅಕ್ಷರ ಗಾತ್ರ

ರಾಮನಗರ: ತಾಲ್ಲೂಕಿನ ಪ್ರಪ್ರಥಮ ಖಾಸಗಿ ವೈದ್ಯ ಹಾಗೂ ಸಮಾಜ ಸೇವಕ ಡಾ. ಎಲ್.ಎಲ್. ತಿಮ್ಮಯ್ಯ (92) ಸೋಮವಾರ ಸಂಜೆ ನಿಧನರಾದರು.

ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರು ಜಯದೇವ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದರು. ಅವರಿಗೆ ಪತ್ನಿ ಸರಸ್ವತಮ್ಮ, ಪುತ್ರ, ನಾಲ್ವರು ಪುತ್ರಿಯರು ಇದ್ದಾರೆ. ಅಂತ್ಯಕ್ರಿಯೆ ಮಂಗಳವಾರ ಶಾನುಬೋಗನಹಳ್ಳಿಯಲ್ಲಿ ನಡೆಯಲಿದೆ.

ರೈತ ಕುಟುಂಬದ ಹಿನ್ನೆಲೆಯವರಾದ ಡಾ.ಎಸ್.ಎಲ್ ತಿಮ್ಮಯ್ಯ, ಎಂ.ಬಿ.ಬಿ.ಎಸ್ ಮುಗಿಸಿದ ನಂತರ ರಾಮನಗರದಲ್ಲೇ ವೈದ್ಯ ವೃತ್ತಿಯನ್ನು ಆರಂಭಿಸಿದರು. ಎಂ.ಬಿ.ಬಿ.ಎಸ್ ವ್ಯಾಸಂಗ ಪಡೆದ ತಾಲ್ಲೂಕಿನ ಪ್ರಪ್ರಥಮ ವೈದ್ಯರು ಎಂಬ ಹೆಗ್ಗಳಿಕೆ ಇವರಿಗಿದೆ. ಐದು ದಶಕಗಳ ಕಾಲ ವೈದ್ಯರಾಗಿ ಸೇವೆ ಸಲ್ಲಿಸಿದ ಅವರು ರೋಗಿಗಳಿಂದ ಪಡೆಯುತ್ತಿದ್ದದ್ದು ₨5, 10 ಮಾತ್ರ. ನಗರ, ಗ್ರಾಮೀಣ ಎನ್ನದೇ ಇವರ ಬಳಿ ಚಕಿತ್ಸೆ ಪಡೆದು ಕೊಂಡ ನಾಗರಿಕರ ಸಂಖ್ಯೆ ಅಸಂಖ್ಯ.

ವೈದ್ಯರಾಗಿ, ಸಮಾಜ ಸೇವಕರಾಗಿ ಜನಮಾನಸದಲ್ಲಿ ಸ್ಥಾನ ಪಡೆದಿದ್ದ ತಿಮ್ಮಯ್ಯ ಕನ್ನಡ ಪರ ಹೋರಾಟಗಳಲ್ಲಿ ಭಾಗಿಯಾಗುತ್ತಿದ್ದರು. ಸಾಹಿತ್ಯ ಮತ್ತು ಸಂಸ್ಕೃತಿ ಸಮಿತಿ, ಕನ್ನಡ ಸಾಹಿತ್ಯ ಪರಿಷತ್ತು, ರೋಟರಿ ಕ್ಲಬ್ ಸೇರಿದಂತೆ ವಿವಿಧ ಸಂಘಸಂಸ್ಥೆಗಳಲ್ಲಿ ಸಕ್ರಿಯವಾಗಿದ್ದರು. ನಗರ ವ್ಯಾಪ್ತಿಯಲ್ಲಿ ಮೂಲ ಸೌಕರ್ಯ ವೃದ್ದಿಯ ವಿಚಾರದಲ್ಲೂ ಸಮಾನ ಮನಸ್ಕರ ಜತೆ ಹೋರಾಟದ ಹಾದಿ ತುಳಿದಿದ್ದರು.

ಶ್ರೀ ರಾಮದೇವರ ಬೆಟ್ಟದ ಅಭಿವೃದ್ದಿಗೆ ತೊಡಗಿಸಿಕೊಂಡಿದ್ದರು. ಬಡವರು, ದಲಿತರು, ಅಲ್ಪಸಂಖ್ಯಾತರ ಬಗ್ಗೆ ಅವರ ಮನ ಮಿಡಿಯುತ್ತಿತ್ತು. ಕೊಡುಗೈ ದಾನಿಯಾಗಿದ್ದರು. ಎಸ್.ಎಲ್.ತಿಮ್ಮಯ್ಯ ಅವರ ಸೇವೆಯನ್ನು ಗುರುತಿಸಿ ಅಭಿನಂದನಾ ಗ್ರಂಥವನ್ನು ಹೊರತರಲಾಗಿದೆ.

ಪತ್ರಿಕೆ ಪ್ರಿಯ: ತಿಮ್ಮಯ್ಯ ಅವರು ಯಾವುದೇ ಕಾರ್ಯಕ್ರಮಗಳಿಗೆ ಹೋದರೂ 'ಡೆಕ್ಕನ್ ಹೆರಾಲ್ಡ್' ಪತ್ರಿಕೆಯನ್ನು ಜತೆಗೆ ತೆಗೆದುಕೊಂಡು ಹೋಗುತ್ತಿದ್ದರು. ಬಿಡುವಿನ ವೇಳೆಯಲ್ಲಿ ಓದುತ್ತಿದ್ದರು. ಇಳಿ ವಯಸ್ಸಿನಲ್ಲಿಯೂ ಅವರು ಪತ್ರಿಕೆ ಓದುವುದು ಹಲವರ ಗಮನವನ್ನು ಸೆಳೆದಿತ್ತು’ ಎಂದು ಅವರ ಒಡನಾಡಿಗಳು ಸ್ಮರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT