ಭಾನುವಾರ, ಸೆಪ್ಟೆಂಬರ್ 22, 2019
23 °C

ಸಾವನದುರ್ಗದ ಪ್ರವಾಸಿ ಮಂದಿರ ದುರಸ್ತಿಗೆ ಮನವಿ

Published:
Updated:
Prajavani

ಸಾವನದುರ್ಗ (ಮಾಗಡಿ): ಇಲ್ಲಿನ ಪ್ರಸಿದ್ಧ ಗಿರಿಧಾಮ ಸಾವನದುರ್ಗದ ಪ್ರವಾಸಿ ಮಂದಿರ ದುರಸ್ತಿ ಆಗಬೇಕಿದೆ. ಜಾತ್ರೆಗೆ ಬರುವ ಭಕ್ತರ ಅನುಕೂಲಕ್ಕಾಗಿ ಪ್ರವಾಸಿ ಮಂದಿರದ ಬಾಗಿಲು ತೆಗೆದು ಅನುಕೂಲ ಮಾಡಿಕೊಡಬೇಕು ಎಂದು ಭಕ್ತಮಂಡಳಿಯ ದೊಡ್ಡಿ ಜಗದೀಶ್‌ ಮನವಿ ಮಾಡಿದರು.

ಪುರಾಣ ಪ್ರಸಿದ್ಧ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯಕ್ಕೆ ರಜಾ ದಿನಗಳಲ್ಲಿ ದೂರದಿಂದ ಭಕ್ತರು ಆಗಮಿಸುತ್ತಿದ್ದಾರೆ. ಲೋಕೋಪಯೋಗಿ ಇಲಾಖೆಗೆ ಸೇರಿರುವ ಪ್ರವಾಸಿ ಮಂದಿರ ದುರಸ್ತಿ ಕಾಣದೆ ಬೀಗ ಹಾಕಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಭಕ್ತರಿಗೆ ಅನನೂಕೂಲವಾಗಿದೆ ಎಂದರು.

ಪ್ರವಾಸಿ ಮಂದಿರಕ್ಕೆ ಬೀಗ ಹಾಕಿರುವುದರಿಂದ ಭಕ್ತರು ಬಯಲಿನಲ್ಲಿ ಊಟ ಮಾಡಬೇಕಿದೆ ಎಂದು ಕಲ್ಯಾಣ ಒಡೆಯರ ಮಠದ ರವಿಕುಮಾರ್‌, ರಾಜಶೇಖರ್‌ ತಿಳಿಸಿದರು.

Post Comments (+)