ಶನಿವಾರ, ನವೆಂಬರ್ 23, 2019
23 °C

ಯುವತಿಯರಿಂದ ಮಸಾಜ್‌ಗೆ ಮಾಡಿಸುವುದಾಗಿ ಆಹ್ವಾನಿಸಿ ದರೋಡೆ: 6 ಮಂದಿ ಬಂಧನ

Published:
Updated:
Prajavani

ರಾಮನಗರ: ಯುವತಿಯರಿಂದ ಮಸಾಜ್‌ ಮಾಡುವ ನೆಪದಲ್ಲಿ ಮನೆಗೆ ಆಹ್ವಾನಿಸಿ ಗ್ರಾಹಕರನ್ನು ದೋಚುತ್ತಿದ್ದ ಆರು ಜನರ ತಂಡವೊಂದನ್ನು ಕುಂಬಳಗೂಡು ಪೊಲೀಸರು ಬಂಧಿಸಿದ್ದಾರೆ.

ಚಳ್ಳೇಘಟ್ಟ ನಿವಾಸಿ ಸುದರ್ಶನ್‌ (22), ಉಪ್ಪಾರಪೇಟೆಯ ಚಂದನ್‌ (21), ಬೆಣಚೆಕಲ್ಲು ನಿವಾಸಿ ಚಂದು (29), ನೆಲದೇವನಹಳ್ಳಿಯ ಲಕ್ಷ್ಮಿದೇವಿ (24), ಬೀರೇಶ್ವರ ನಗರದ ಗೀತಾ (28) ಹಾಗೂ ಇಂದಿರಾ ನಗರದ ಪಲ್ಲವಿ (24) ಬಂಧಿತರು. ಆರೋಪಿಗಳಿಂದ ₨30 ಸಾವಿರ ನಗದು, 11 ಮೊಬೈಲ್‌, 1 ಬೈಕ್‌ ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಆನ್‌ಲೈನ್‌ನಲ್ಲಿ ಮಸಾಜ್‌ ಪಾರ್ಲರ್ ಹೆಸರಿನಲ್ಲಿ ಜಾಹೀರಾತು ಹರಿಬಿಟ್ಟು ಗ್ರಾಹಕರನ್ನು ಸೆಳೆಯುತ್ತಿದ್ದರು. ಕೊಮ್ಮಘಟ್ಟದಲ್ಲಿ ಬಿಡಿಎ ಅಪಾರ್ಟ್‌ಮೆಂಟ್‌ ಒಂದನ್ನು ಬಾಡಿಗೆ ಪಡೆದಿದ್ದು, ಅಲ್ಲಿಗೆ ಗ್ರಾಹಕರನ್ನು ಕರೆ ತರುತ್ತಿದ್ದರು. ಬಳಿಕ ಅವರನ್ನು ಕೊಠಡಿಯಲ್ಲಿ ಕೂಡಿ ಹಾಕಿ ಸುಲಿಗೆ ಮಾಡುತ್ತಿದ್ದರು.

ಈ ಬಗ್ಗೆ ಗ್ರಾಹಕರೊಬ್ಬರು ನೀಡಿದ ದೂರು ಆಧರಿಸಿ ಕುಂಬಳಗೂಡು ಎಸ್. ನಾಗರಾಜು, ಸಬ್‌ ಇನ್‌ಸ್ಪೆಕ್ಟರ್‌ ಹನುಮೇಶ್‌ ನೇತೃತ್ವದ ತಂಡವು ವಸತಿ ಗೃಹದ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿತು.

ಪ್ರತಿಕ್ರಿಯಿಸಿ (+)