ಶಾಲೆ ದುರಸ್ತಿಗೆ ರೋಟರಿ ಒತ್ತು

ಮಾಗಡಿ: ಶಿಥಿಲವಾಗಿರುವ ಚಕ್ರಬಾವಿ ಗ್ರಾಮದ ಸರ್ಕಾರಿ ಶಾಲೆಯ ದುರಸ್ತಿಗೆ ಕ್ರಮವಹಿಸಲಾಗುವುದು ಎಂದು ರೋಟರಿ ಬೆಂಗಳೂರು ಸೌತ್ ಅಧ್ಯಕ್ಷ ರವಿಪ್ರಸಾದ್ ಭರವಸೆ ನೀಡಿದರು.
ಶಾಲೆಗೆ ಶನಿವಾರ ಭೇಟಿ ನೀಡಿ ಶಾಲೆಯ ದುಃಸ್ಥಿತಿ ವೀಕ್ಷಿಸಿದ ನಂತರ ಅವರು ಮಾತನಾಡಿದರು.
‘ರೋಟರಿ ಸಂಸ್ಥೆ ಆರಂಭವಾಗಿ 25 ವರ್ಷ ಕಳೆದಿವೆ. ರೋಟರಿ ಮಾಜಿ ಅಧ್ಯಕ್ಷ ಬಸವರಾಜು ಅವರ ಮನವಿ ಮೇರೆಗೆ ಈ ಶಾಲೆಗೆ ಭೇಟಿ ನೀಡಿದ್ದೇನೆ’ ಎಂದರು.
ಶಾಲೆಯು 100 ವರ್ಷ ಪೂರೈಸಿದೆ. ಆದರೆ, ಮೂಲ ಸವಲತ್ತುಗಳಿಂದ ವಂಚಿತವಾಗಿದ್ದು, ಕುಸಿದು ಬೀಳುವ ಹಂತದಲ್ಲಿದೆ. ರೋಟರಿ ಬೆಂಗಳೂರು ಸೌತ್‌ನಿಂದ ಚಕ್ರಬಾವಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಂದು ಆಮ್ಲಜನಕ ಯಂತ್ರ ನೀಡುತ್ತೇವೆ ಎಂದು ತಿಳಿಸಿದರು.
ರೋಟೆರಿಯನ್ ಅರ್ಜುನ್, ಆನಂದ್ ರಾಮಚಂದ್ರ, ರವಿ ಚಕ್ರವರ್ತಿ, ಎಪಿಎಂಸಿ ಅಧ್ಯಕ್ಷ ಸಿ.ಎಂ. ಮಾರೇಗೌಡ, ಗ್ರಾಮಸ್ಥ ಸಿ.ಎನ್. ದೀಪಕ್, ಮುಖ್ಯಶಿಕ್ಷಕ, ಸಹ ಶಿಕ್ಷಕರು ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.