ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸವಿತಾ ಸಮಾಜಕ್ಕೆ ರಾಜಕೀಯ ಸ್ಥಾನಮಾನ ನೀಡಿ’

ಮುಂದುವರೆದ ಸಮಾಜದವರು ಹಿಂದುಳಿದ ಸಮಾಜದವರಿಗೆ ಸಹಾಯಹಸ್ತ ಚಾಚಬೇಕು
Last Updated 12 ಮಾರ್ಚ್ 2019, 14:24 IST
ಅಕ್ಷರ ಗಾತ್ರ

ಮಾಗಡಿ: ‘ಸವಿತಾ ಸಮಾಜಕ್ಕೆ ರಾಜಕೀಯ ಸ್ಥಾನಮಾನ ನೀಡಿ ಸಬಲೀಕರಣಗೊಳಿಸಬೇಕು’ ಎಂದು ಬಿಜೆಪಿ ಮುಖಂಡ ಎ.ಎಚ್‌.ಬಸವರಾಜು ತಿಳಿಸಿದರು.

ರಾಜ್ಯ ಸವಿತಾ ಸಮಾಜ ತಾಲ್ಲೂಕು ಶಾಖೆ ವತಿಯಿಂದ ಸವಿತಾ ಮಹರ್ಷಿ ಮೊದಲನೇ ವರ್ಷದ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

‘ಕ್ಷೌರಿಕ ವೃತ್ತಿ ಪರಮ ಪವಿತ್ರವಾದದ್ದು, ಎಲ್ಲರಿಗೂ ಇದರ ಅಗತ್ಯವಿದೆ. ಹಿಂಜರಿಕೆ ಬಿಟ್ಟು, ಸಂಘಟಿತರಾಗಿ ಮಕ್ಕಳಿಗೆ ಶಿಕ್ಷಣ ನೀಡಿ, ಸವಲತ್ತು ಪಡೆಯಲು ಮುಂದಾಗಬೇಕು. ಸವಿತಾ ಸಮಾಜದ ವ್ಯಕ್ತಿಯೊಬ್ಬರನ್ನು ಪುರಸಭೆಗೆ ನಾಮಕರಣ ಸದಸ್ಯರನ್ನಾಗಿ ನೇಮಕ ಮಾಡಿ, ಸರ್ವರಿಗೆ ಸಮಪಾಲು–ಸರ್ವರಿಗೆ ಸಮಬಾಳು ಎಂಬ ಸಂವಿಧಾನದತ್ತ ಆಶಯವನ್ನು ಈಡೇರಿಸಲು ಶಾಸಕರು ಮುಂದಾಗಬೇಕು. ಸಂಘಟನೆ ಇಲ್ಲದೆ ಸಮುದಾಯಗಳು ಕೊನೆಯಾಗುತ್ತಿವೆ. ಈ ಸಮಾಜದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಬೆಂಬಲ ನೀಡುತ್ತೇನೆ’ ಎಂದು ಅವರು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎಚ್‌.ಎನ್‌.ಅಶೋಕ್‌ ಮಾತನಾಡಿ ‘ಸವಿತಾ ಸಮಾಜದವರಿಂದ ಹುಟ್ಟಿದಾಗ ಮಗುವಿನ ಕೂದಲು ತೆಗೆಸುವುದರ ಜತೆಗೆ ಸಾವು ಬಂದಾಗ ಕೂದಲು ತೆಗೆಸಿ ಮುಕ್ತಿ ದೊರಕಿಸಲಾಗುತ್ತದೆ’ ಎಂದರು.

ಪುರಸಭೆ ಸದಸ್ಯ ಎಂ.ಎನ್‌.ಮಂಜುನಾಥ ಮಾತನಾಡಿ ಕೌಶಲ ಅಭಿವೃದ್ಧಿ ಯೋಜನೆಯಡಿ ಸವಿತಾ ಸಮಾಜದವರಿಗೆ ನಾದಸ್ವರ, ಇತರೆ ಸಂಗೀತ ಪರಿಕರಗಳನ್ನು ಖರೀದಿಸಲು ನೆರವು ಕೊಡಿಸುವುದಾಗಿ ಭರವಸೆ ನೀಡಿದರು.

ಕಾಂಗ್ರೆಸ್‌ ಮುಖಂಡ ತಮ್ಮಣ್ಣ ಗೌಡ ಮಾತನಾಡಿ ‘ಮುಂದುವರೆದ ಸಮಾಜದವರು ಹಿಂದುಳಿದ ಸವಿತಾ ಸಮಾಜದವರಿಗೆ ಸಹಾಯಹಸ್ತ ಚಾಚಿ ಮುಂದೆ ಕರೆದೊಯ್ಯಬೇಕು. ಸಮಾಜದ ಯುವಕರಿಗೆ ಪ್ರೋತ್ಸಾಹ ನೀಡಲಾಗುವುದು’ ಎಂದರು.

ಪ್ರಗತಿಪರ ಹೋರಾಟಗಾರ ಕಲ್ಕೆರೆ ಶಿವಣ್ಣ ಮಾತನಾಡಿ ಅಂಬೇಡ್ಕರ್‌ ಹೇಳಿರುವಂತೆ, ಶಿಕ್ಷಣ, ಸಂಘಟನೆ, ಹೋರಾಟ ಎಂಬ ತತ್ವಗಳನ್ನು ಸವಿತಾ ಸಮಾಜದವರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಜಿಲ್ಲಾ ಸಂಘದ ಅಧ್ಯಕ್ಷ ಶ್ರೀನಿವಾಸ್‌ ಮಾತನಾಡಿ ‘ವೈದ್ಯರು ರೋಗಿಗಳನ್ನು ತಪಾಸಣೆ ಮಾಡಿದ ನಂತರ ಕ್ರಿಮಿನಾಶಕ ಬಳಸಿ ಕೈತೊಳೆಯುತ್ತಾರೆ. ನಾವು ನೂರಾರು ಜನರಿಗೆ ಬರಿ ಕೈಯಿಂದಲೇ ಕ್ಷೌರ ಮಾಡುತ್ತಿದ್ದೇವೆ. ಬ್ಯೂಟಿಪಾರ್ಲರ್‌ ಬಂದ ಮೇಲೆ ಕ್ಷೌರಿಕ ವೃತ್ತಿಗೆ ಹೊಡೆತ ಬಿದ್ದಿದೆ. ಸವಿತಾ ಸಮಾಜದವರು ಸಂಘಟಿತರಾಗಿ ಹೋರಾಟ ಮಾಡಬೇಕಿದೆ’ ಎಂದರು.

ನೆಲಮಂಗಲದ ಗಂಗಮ್ಮ, ಹಿರಿಯರಾದ ಮರಿಯಪ್ಪ, ಜಿಲ್ಲಾ ಸವಿತಾ ಸಮಾಜದ ಉಪಾಧ್ಯಕ್ಷ ಮುನಿಕೃಷ್ಣ, ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಸುರೇಶ್‌, ಬಿಜೆಪಿ ಮುಖಂಡರಾದ ಮಾರಪ್ಪ ದೊಂಬಿದಾಸ, ಶಶಿಧರ್‌, ಧನಂಜಯ, ದಯಾನಂದ್‌, ತಾಲ್ಲೂಕು ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ಜಿ.ಗೋಪಾಲ್‌, ಮಡಿವಾಳ ಮಾಚಿದೇವ ಸಂಘದ ಎಂ.ಟಿ.ಶಿವಣ್ಣ, ಸವಿತಾ ಸಮಾಜದ ಹಿರಿಯರಾದ ಮರಿಯಪ್ಪ, ಎಂ.ಜಿ. ರಂಗನಾಥ್‌, ಕಲ್ಯಾದ ಮೂರ್ತಿ, ಸಿದ್ದರಾಜ್‌, ಚನ್ನರಾಜ್‌, ವೆಂಕಟಾಂಜನಪ್ಪ, ದೊಡ್ಡಣ್ಣ, ಗುಡೇಮಾರನಹಳ್ಳಿ ಚಂದ್ರಪ್ಪ, ಕೇಶವ, ಮಾಡಬಾಳ್‌ ವೆಂಕಟೇಶ್‌, ಶಾಂತರಾಜ್‌, ತಿರುಮಲೆ ಯೋಗೇಶ್‌, ನಾಗರತ್ನ, ಸೌಭಾಗ್ಯ, ಸುಜಾತ, ಸುಕನ್ಯ, ಬಿ.ಆರ್‌.ಪಟ್ಟಯ್ಯ, ಎ.ಪ್ರಕಾಶ್, ಕಲ್ಯಾಗೇಟ್‌ ಆನಂದ್‌, ತಿಪ್ಪಸಂದ್ರ ಕೇಶವಮೂರ್ತಿ, ರಾಮಚಂದ್ರ, ಗಂಗರಾಜು, ಕುದೂರು ಮಂಜುನಾಥ, ಅಣ್ಣಪ್ಪ, ಕೃಷ್ಣಪ್ಪ, ಸವಿತಾ ಸಮಾಜದ ಸಂಘಟನೆ ಬಗ್ಗೆ ಮಾತನಾಡಿದರು.

ನಾದಸ್ವರ ವಿದ್ವಾನ್‌ ನರಸಿಂಹಮೂರ್ತಿ, ಬೈಚಾಪುರ ಜಯರಾಮಯ್ಯ ತಂಡದವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT