ರಾಮನಗರ: ದೇಶದ ಮಹಿಳೆಯರು ಶಿಕ್ಷಣದಿಂದ ವಂಚಿತರಾಗಿದ್ದ ಕಾಲಘಟ್ಟದಲ್ಲಿ ಅವರಿಗೆ ಶಿಕ್ಷಣ ಕೊಡಲು ಅಕ್ಷರಮಾತೆ ಸಾವಿತ್ರಿಬಾಯಿ ಫುಲೆ ತಮ್ಮ ಬದುಕನ್ನೆ ಸಮರ್ಪಣೆ ಮಾಡಿದರು ಎಂದು ರಾಜ್ಯ ಎಸ್ಡಿಎಂಸಿ ಸಮನ್ವಯ ವೇದಿಕೆ ಅಧ್ಯಕ್ಷ ಉಮೇಶ್ ಜಿ. ಗಂಗವಾಡಿ ಹೇಳಿದರು.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಜನತಾ ಸೇವಾ ಟ್ರಸ್ಟ್ ಭಾನುವಾರ ಏರ್ಪಡಿಸಿದ್ದ ಸರ್ಕಾರಿ ಶಾಲೆ ಉಳಿವಿಗಾಗಿ ಎಸ್ ಡಿಎಂಸಿ ರಾಜ್ಯ ಪದಾಧಿಕಾರಿಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ನೆಲದ ಮಹಿಳೆಯರು ಇಂದು ಶಿಕ್ಷಣ ಪಡೆದು ಸ್ವಾಭಿಮಾನಿಗಳಾಗಿ, ಸ್ವತಂತ್ರರಾಗಿ ಉನ್ನತ ಸ್ಥಾನಮಾನ ಅಲಂಕರಿಸಿರುವುದಕ್ಕೆ ಮಾತೆ ಸಾವಿತ್ರಿಬಾಯಿ ಫುಲೆ ಅವರ ತ್ಯಾಗ ಅವಿಸ್ಮರಣೀಯವಾದುದ್ದು ಎಂದರು.

ಸರ್ಕಾರಿ ಶಾಲೆಗಳು, ಸರ್ಕಾರಿ ಆಸ್ಪತ್ರೆಗಳು ಹಾಗೂ ಸರ್ಕಾರಿ ನ್ಯಾಯಬೆಲೆ ಅಂಗಡಿಗಳು ಕಾಮಧೇನುಗಳ ರೀತಿ ಕಾರ್ಯನಿರ್ವಹಿಸಬೇಕು ಎಂದು ಟ್ರಸ್ಟ್ ಅಧ್ಯಕ್ಷ ಜನತಾ ನಾಗೇಶ್ ಸಲಹೆ ಮಾಡಿದರು.

ಮಹಿಳಾ ದಿನಾಚರಣೆಯ ಪ್ರಯುಕ್ತ ರಾಜ್ಯ ಎಸ್ಡಿಎಂಸಿ ಸಮಿತಿಗಳ ಸಮನ್ವಯ ವೇದಿಕೆ ರಾಜ್ಯ ಖಜಾಂಚಿ ಜ್ಯೋತಿ ಜಯರಾಮ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ರಾಜ್ಯ ಎಸ್ಡಿಎಂಸಿ ಸಮನ್ವಯ ವೇದಿಕೆಯ ಉಪಾಧ್ಯಕ್ಷ ಶಂಭುಗೌಡ, ರಾಜ್ಯ ಸಹ ಕಾರ್ಯದರ್ಶಿ ಕೋಲಾರದ ಶ್ರೀನಿವಾಸುಲು, ಪದಾಧಿಕಾರಿಗಳಾದ ದೇವನಹಳ್ಳಿಯ ಬಿ.ವಿ. ರವಿ, ರಾಮನಗರದ ಮುರಳೀಧರ್, ಕೊಪ್ಪಳ ಜಿಲ್ಲೆಯ ಶಿವಪ್ಪ ದೊಡ್ಡಮನಿ, ಗೌಡಪ್ಪ ಬಲಕುಂದಿ, ನಾಗೇಶ್ ಕುಮಾರ್, ತೇಜಸ್ವಿನಿ ಸುಧೀರ್, ಮೊಹಮ್ಮದ್ ಅಹಮದ್, ಕೋಲಾರದ ಸೈಯದ್ ಜಹಾಂಗೀರ್ ಭಾಗವಹಿಸಿದ್ದರು. ಉಪನ್ಯಾಸಕ ಸಿ.ವಿ.ದೇವರಾಜು ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.