ಭಾನುವಾರ, ನವೆಂಬರ್ 17, 2019
28 °C

ಡಿಕೆ ಶಿವಕುಮಾರ್ ಇ.ಡಿ ಬಂಧನ ವಿಸ್ತರಣೆ; ನಗರದಲ್ಲಿ ಬಿಗಿ ಭದ್ರತೆ

Published:
Updated:
Prajavani

ಕನಕಪುರ: ಶಾಸಕ ಡಿ.ಕೆ.ಶಿವಕುಮಾರ್‌ ಅವರ ಇ.ಡಿ ಬಂಧನದ ವಿಸ್ತರಣೆ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು.

ಇ.ಡಿ ವಶಕ್ಕೆ ಪಡೆದ ದಿನದಂದು ಕನಕಪುರ ನಗರ ಸೇರಿದಂತೆ ತಾಲ್ಲೂಕಿನಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿ ಮೂರು ಬಸ್‌ಗಳಿಗೆ ಬೆಂಕಿ ಹಚ್ಚಲಾಗಿತ್ತು. ಎರಡು ಬಸ್‌ಗಳಿಗೆ ಕಲ್ಲು ತೂರಿ ಜಖಂ ಗೊಳಿಸಲಾಗಿತ್ತು. ಬೈಕ್‌ಗಳನ್ನು ಸುಡಲಾಗಿತ್ತು. ಈ ಹಿನ್ನೆಲೆಯಲ್ಲಿ ಅಹಿತಕರ ಘಟನೆ ನಡೆಯದಂತೆ ‍ಪೊಲೀಸರು ಹೈಆರ್ಲಟ್‌ ಘೋಷಿಸಿದ್ದರು.

ಐಪಿಎಸ್‌ ಅಧಿಕಾರಿ ಎಎಸ್‌ಪಿ ರಾಮರಾಜನ್‌, ಐವರು ಡಿಎಸ್‌ಪಿ, 10ಮಂದಿ ಸಿಪಿಐ, 21 ಎಸ್‌ಐ, 49 ಎಎಸ್‌ಐ ಸೇರಿದಂತೆ 600 ಪೊಲೀಸ್‌ ಸಿಬ್ಬಂದಿ, 3 ಕೆಎಸ್‌ಆರ್‌ಪಿ, 6ಡಿಆರ್‌ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

 

ಪ್ರತಿಕ್ರಿಯಿಸಿ (+)