‘ಸಂವಿಧಾನಬದ್ಧರನ್ನು ಆಯ್ಕೆ ಮಾಡಿ’

ಮಂಗಳವಾರ, ಏಪ್ರಿಲ್ 23, 2019
31 °C
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶ್ರುತಿ ಪ್ರತಿಪಾದನೆ

‘ಸಂವಿಧಾನಬದ್ಧರನ್ನು ಆಯ್ಕೆ ಮಾಡಿ’

Published:
Updated:
Prajavani

ಮಾಗಡಿ: ‘ಮತದಾನ ಪವಿತ್ರವಾದುದು. ಈ ನಿಟ್ಟಿನಲ್ಲಿ ಮತದಾರರನ್ನು ಉತ್ತೇಜಿಸಿ, ಜಾಗೃತರನ್ನಾಗಿಸಿ, ಯೋಗ್ಯ ಸರ್ಕಾರವನ್ನು ಚುನಾಯಿಸಲು ಪ್ರೇರೇಪಿಸಬೇಕು. ಸಂವಿಧಾನ ಬದ್ಧ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕು’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶ್ರುತಿ.ಡಿ ತಿಳಿಸಿದರು.

ಪುರಸಭೆ ಆವರಣದಲ್ಲಿ ಸ್ವೀಪ್‌ ಸಮಿತಿ, ಪುರಸಭೆ, ಆರೋಗ್ಯ, ಶಿಶು ಅಭಿವೃದ್ದಿ, ಶಿಕ್ಷಣ ಇಲಾಖೆಗಳ ಸಹಯೋಗದಲ್ಲಿ ನಡೆದ ಮತದಾನ ಜಾಗೃತಿ ಶಿಬಿರದಲ್ಲಿ ಅವರು ಮಾತನಾಡಿದರು.

ಜನರಲ್ಲಿ ಮತದಾನದ ಅರಿವು ಮೂಡಿಸುವುದು ಅಗತ್ಯ. ಮತದಾನ ಎಂಬುದು ಪ್ರಜಾಪ್ರಭುತ್ವನು ಉಳಿಸುವ ಮತ್ತು ಗಟ್ಟಿಗೊಳಿಸುವ ಸಾಧನ. ಹಾಗಾಗಿ ಮತದಾನಕ್ಕೂ ಮುನ್ನ ಯೋಚಿಸಿ ಅರ್ಹರನ್ನು ಆಯ್ಕೆ ಮಾಡಬೇಕು ಎಂದರು.

ಆರೋಗ್ಯ ಶಿಕ್ಷಣಾಧಿಕಾರಿ ಆರ್‌.ರಂಗನಾಥ ಮಾತನಾಡಿ ‘ಮತ ತುಪಾಕಿ ಗುಂಡಿಗಿಂತ ಶಕ್ತಿಶಾಲಿಯಾಗಿದೆ. ಅದನ್ನು ಬಳಸುವಾಗ ಯೋಚಿಸಿ, ಯೋಗ್ಯರನ್ನು ಆಯ್ಕೆ ಮಾಡಿ ಎಂದು ಪ್ರಜಾಪ್ರಭುತ್ವದ ಪ್ರತಿಪಾದಕರು ತಿಳಿಸಿದ್ದಾರೆ. ದಯಮಾಡಿ ಮತ ಮಾರಿಕೊಳ್ಳಬೇಡಿ. ವರ್ತಕರು, ಸಿರಿವಂತರು, ಅಧಿಕಾರಿಗಳು ಮತದಾನದ ದಿನ ಪಿಕ್‌ನಿಕ್‌ ಹೋಗದೆ ಮತಗಟ್ಟೆಗೆ ತೆರಳಿ ಮತದಾನ ಮಾಡಿ. ಸಂವಿಧಾನದತ್ತ ಆಶಯ ಉಳಿಸಲು ಮುಂದಾಗಬೇಕು’ ಎಂದರು.

ಪುರಸಭೆ ಮುಖ್ಯಾಧಿಕಾರಿ ಮಹೇಶ್‌ ಮಾತನಾಡಿ ‘ಮತದಾನ ಮಾಡುವುದು ಸಂವಿಧಾನದತ್ತ ಹಕ್ಕಾಗಿದೆ. ಹಕ್ಕನ್ನು ಚಲಾಯಿಸಿ ಅರ್ಹರನ್ನು ಆಯ್ಕೆ ಮಾಡಬೇಕು. ಯೋಚಿಸಿ, ಮತದಾನ ಮಾಡಿ, ಮತದಾನ ಮಾಡಲು ಅರಿವು ಮೂಡಿಸಿ’ ಎಂದರು.

ಅಂಗನವಾಡಿ ಕಾರ್ಯಕರ್ತೆ ಬಿ.ಬಿ.ಮೀನಾ ಮಾತನಾಡಿ ‘ನಮ್ಮದು ಜಾತ್ಯತೀತ ರಾಷ್ಟ್ರ. ಸಮಗ್ರ ರಾಷ್ಟ್ರೀಯ ಸಮಾಜವನ್ನು ಪ್ರತಿನಿಧಿಸುವ, ಸಮಾನತೆಗೆ ಒತ್ತುಕೊಟ್ಟು, ಸರ್ವರಿಗೆ ಸಮಬಾಳು, ಸರ್ವರಿಗೆ ಸಮಪಾಲು ಎಂಬ ತತ್ವದಲ್ಲಿ ನಡೆಯುವವರನ್ನು ಆಯ್ಕೆ ಮಾಡಬೇಕು. ಹಣ, ಹೆಂಡಕ್ಕೆ ಮತದಾರ ತನ್ನ ಸಾರ್ವಭೌಮ ಅಧಿಕಾರವನ್ನು ಮಾರಿಕೊಳ್ಳದಂತೆ ಮತದಾನದ ಬಗ್ಗೆ ಜಾಗೃತಿ ಮೂಡಿಸಬೇಕಿದೆ’ ಎಂದರು.

ಶಿಶುಅಭಿವೃದ್ಧಿ ಅಧಿಕಾರಿ ಭಾರತೀದೇವಿ, ಹಿರಿಯ ಮಹಿಳಾ ಆರೋಗ್ಯ ಶಿಕ್ಷಕಿ ಮಂಜುಳ, ನರೇಗಾ ಅಧಿಕಾರಿ ನವೀನ್‌, ಅಂಗನವಾಡಿ ಕಾರ್ಯಕರ್ತೆಯರಾದ ಯಶೋಧ, ಗಂಗಮ್ಮ, ನಾಗರತ್ನಮ್ಮ, ಶಾಂತಮ್ಮ, ಕೆಂಪಮ್ಮ, ನಗಿನಾ ಭಾನು, ಹಾಜಿರಾ, ಶೋಭಾ, ಪುಷ್ಪ, ಲಕ್ಕಮ್ಮ, ಶಭಿನಾತಾಜ್‌, ಲತಾ, ಪಾರ್ವತಮ್ಮ, ಪ್ರೇಮಕುಮಾರಿ, ಮುತ್ತುರಾಜಮ್ಮ ಮತದಾನದ ಬಗ್ಗೆ ಮಾತನಾಡಿದರು. ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !