ಭಾನುವಾರ, ಜೂಲೈ 5, 2020
23 °C

‘ಪ್ರಚಾರ ಬಯಸದೇ ಸೇವೆ ಮಾಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ‘ಭಾಷಣ ಮತ್ತು ಪ್ರಚಾರ ಬಯಸುವ ಬದಲು ದಿನಗೂಲಿ ಕಾರ್ಮಿಕರಿಗೆ ಆಹಾರ ಸಾಮಗ್ರಿ ನೀಡಿ ಹಸಿವು ನೀಗಿಸಲು ಜನಪ್ರತಿನಿಧಿಗಳು ಮುಂದಾಗಬೇಕು’ ಎಂದು ದಲಿತ ಹಕ್ಕುಗಳ ಒಕ್ಕೂಟ ಕರ್ನಾಟಕ ಜಿಲ್ಲಾ ಸಂಚಾಲಕಿ ಎಸ್‌.ಜಿ.ವನಜಾ ಹೇಳಿದರು. 

ಚಂದೂರಾಯನ ಹಳ್ಳಿ ದಲಿತ ಕಾಲೊನಿಯಲ್ಲಿ ‘ಹಸಿವು ಮುಕ್ತ ಭಾರತ ಘೋಷಣೆ’ಯಡಿ ಸಾಂಕೇತಿಕ ಪ್ರತಿಭಟನೆ ನಡೆಸಿ ಅವರು ಮಾತನಾಡಿದರು.

‘ಲಾಕ್‌ಡೌನ್ ಜಾರಿಗೊಳಿಸುವ ಮುನ್ನ ಕಾರ್ಮಿಕರು ತಮ್ಮ ಊರುಗಳಿಗೆ ತೆರಳು ಅವಕಾಶ ನೀಡಬೇಕಿತ್ತು. ಅವೈಜ್ಞಾನಿಕವಾಗಿ ಲಾಕ್‌ಡೌನ್‌ ಜಾರಿಗೊಳಿಸಿದ್ದರಿಂದ ಲಕ್ಷಾಂತರ ಕಾರ್ಮಿಕರು ಹಸಿವಿನಿಂದ ನರಳಿದ್ದಾರೆ. ಬರಿಗಾಲಿನಲ್ಲಿ ಕಿ.ಮೀಗಟ್ಟಲೆ ಪ್ರಯಾಣಿಸಿದ್ದಾರೆ. ಅವರ ಹಸಿವು ನೀಗಿಸಲು ಸೂಕ್ತ ಯೋಜನೆ ಜಾರಿಗೊಳಿಸಿಲ್ಲ. ಸರ್ಕಾರ ಕೂಲಿಕಾರ್ಮಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.