ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರುಬಳ್ಳಿ: ಸಮವಸ್ತ್ರ ವಿತರಣೆ

Last Updated 13 ಆಗಸ್ಟ್ 2019, 14:22 IST
ಅಕ್ಷರ ಗಾತ್ರ

ಹಾರೋಹಳ್ಳಿ (ಕನಕಪುರ): ‘ಸರ್ಕಾರಿ ಶಾಲಾ ಮಕ್ಕಳಿಗೆ ಅನುಕೂಲವಾಗಲೆಂದು ಉದ್ಯಮಿಗಳಾದ ಕೃಷ್ಣ ಮತ್ತು ಭಾಸ್ಕರ್‌ರಾವ್‌ ಉಚಿತವಾಗಿ ಸಮವಸ್ತ್ರವನ್ನು ಕೊಟ್ಟಿದ್ದಾರೆ’ ಎಂದು ರೋಟರಿ ಪಿಎಚ್‌ಎಫ್‌ನ ಜಿಲ್ಲಾ ಸಂಯೋಜಕ ಏಡಮಡು ಕಾಂತರಾಜು ತಿಳಿಸಿದರು.

ತಾಲ್ಲೂಕಿನ ಹಾರೋಹಳ್ಳಿ ಹೋಬಳಿ ಕುರುಬಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ವಿದ್ಯಾರ್ಥಿಗಳಿಗೆ ಹೊಲಿದಿರುವ ಸಮವಸ್ತ್ರವನ್ನು ವಿತರಣೆ ಮಾಡಿ ಮಾತನಾಡಿದರು.

ಹಾರೋಹಳ್ಳಿ ರೋಟರಿ ಸಂಸ್ಥೆಯು ಮಾಡುತ್ತಿರುವ ಸಾಮಾಜಿಕ ಸೇವೆಯನ್ನು ಗಮನಿಸಿದ ಕೃಷ್ಣ ಮತ್ತು ಭಾಸ್ಕರ್‌ರಾವ್‌ ತಾವು ಏನಾದರೂ ಸಹಾಯ ಮಾಡುವುದಾಗಿ ಹೇಳಿದರು.

‘ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರದ ಅವಶ್ಯಕತೆಯಿರುವುದನ್ನು ಗಮನಿಸಿ ಕುರುಬಳ್ಳಿ ಶಾಲೆಗೆ ಕೊಡುವಂತೆ ಹೇಳಿದೆವು. 1 ರಿಂದ 5ನೇ ತರಗತಿ ವರಗಿನ ಎಲ್ಲ ಮಕ್ಕಳ ಅಳೆತೆಯನ್ನು ಪಡೆದು ಮಕ್ಕಳಿಗೆ ಹೊಂದುವ ರೀತಿಯಲ್ಲಿ ಉತ್ತಮ ಗುಣಮಟ್ಟದ ಸಮವಸ್ತ್ರ ಹೊಲಿಸಿಕೊಟ್ಟಿದ್ದಾರೆ’ ಎಂದು ಅವರ ಸೇವೆಯನ್ನು ಶ್ಲಾಘಿಸಿದರು.

‘ನಾವು ಮಾಡುವ ಕೆಲಸವು ಮತ್ತೊಬ್ಬರಿಗೆ ಸ್ಫೂರ್ತಿಯಾಗಬೇಕು. ಇರುವವರು ಇಲ್ಲದವರಿಗೆ ಕೈಲಾದ ಮಟ್ಟಿಗೆ ಸಹಾಯ ಮಾಡಿ ಅವರಿಗೂ ಶಕ್ತಿ ತುಂಬವ ಕೆಲಸ ಮಾಡಬೇಕಿದೆ’ ಎಂದರು.

ರೋಟರಿ ಪದಾಧಿಕಾರಿಗಳಾದ ಮಹಮ್ಮದ್‌ ಏಜಾಸ್‌, ಆರ್‌.ವಿ.ಹೊನ್ನೇಗೌಡ, ಶಾಲೆಯ ಮುಖ್ಯ ಶಿಕ್ಷಕಿ ಮಮತಾ, ಆಸರೆ ಸಂಸ್ಥೆಯ ಶೋಭಾ ಬೆಳಗುಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT