ಚನ್ನಪಟ್ಟಣ: ತಾಲ್ಲೂಕಿನ ಮೋಳೆದೊಡ್ಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಗುರುವಾರ ರಾತ್ರಿ ಮಕ್ಕಳು ಪ್ರದರ್ಶಿಸಿದ ಕೃಷ್ಣ ಸಂಧಾನ ಪೌರಾಣಿಕ ನಾಟಕ ಮುದ ನೀಡಿತು.
ರಂಗ ನಿರ್ದೇಶಕ ಕೃಷ್ಣರಾಜು ನಿರ್ದೇಶನದಲ್ಲಿ ನಡೆದ ನಾಟಕ ಗ್ರಾಮಸ್ಥರ ಪ್ರಶಂಸೆಗೆ ಪಾತ್ರವಾಯಿತು. ಸುತ್ತಮುತ್ತಲ ಗ್ರಾಮಗಳ ನೂರಾರು ಗ್ರಾಮಸ್ಥರು ನಾಟಕ ವೀಕ್ಷಿಸಿದರು.
ಕಳೆದ ಎರಡು ತಿಂಗಳಿನಿಂದ ಪ್ರತಿ ಶನಿವಾರ ಮತ್ತು ಭಾನುವಾರ ಮಕ್ಕಳನ್ನು ಶಾಲೆಯಲ್ಲಿ ಹಿಡಿದಿಟ್ಟುಕೊಂಡು ಶಿಕ್ಷಕರು ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿಸಿದ್ದರು.
ವಿದ್ಯಾರ್ಥಿಗಳಾದ ತಿರುಮಲ, ಲೋಹಿತ್, ಅಮೂಲ್ಯ, ಪ್ರೀತಮ್, ಶಮಿಕಾ, ಸೂರ್ಯ, ಶ್ರೀಕಾಂತ್, ಹಿಮ ಗೋಪಾಲ್, ತನುಶ್ರೀ, ಪ್ರಶಾಂತ್, ಪ್ರೇರಣ, ವೈಷ್ಣವಿ, ಸುಶ್ಮಿತಾ, ಚೆಲುವ, ದೀಪಕ್, ಹರ್ಷ, ಮಾನಸ, ಹೇಮಂತ್, ಸಂಜಯ್, ಪೃಥ್ವಿ, ಇತರರು ಪಾತ್ರಧಾರಿಗಳಾಗಿ ಪ್ರಶಂಸೆ ಗಳಿಸಿದರು.
ನಾಟಕಕ್ಕೂ ಮೊದಲು ಮಕ್ಕಳಿಂದ ಸಾಂಸ್ಕೃತಿಕ ಕಲರವ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳು ಜನಪದೀಯ ಹಾಗೂ ಸಿನಿಮಾ ಗೀತೆಗಳಿಗೆ ನೃತ್ಯ ಪ್ರದರ್ಶನ ಮಾಡಿದರು.
ನೀಲಸಂದ್ರ ಗ್ರಾ.ಪಂ. ಅಧ್ಯಕ್ಷ ಬಿಳಿಯಪ್ಪ ನಾಟಕಕ್ಕೆ ಚಾಲನೆ ನೀಡಿದರು. ಎಸ್‌ಡಿಎಂಸಿ ಅಧ್ಯಕ್ಷ ರವಿ, ಅಶ್ವಥ್, ಮುನಿರಾಜು, ಬೊಮ್ಮರಾಜು, ಶ್ರೀನಿವಾಸ, ತುಳಸಿರಾಮ್, ಮೋಹನ್ ಕುಮಾರ್ ಭಾಗವಹಿಸಿದ್ದರು.
ಮುಖ್ಯ ಶಿಕ್ಷಕಿ ಮಂಗಳಮ್ಮ, ಸಹ ಶಿಕ್ಷಕಿಯರಾದ ತಾರಾಶ್ರೀ, ಭಾನುಲತಾ, ಗೀತಾ, ಪುಷ್ಪ, ಸುಶೀಲ, ಮಂಜುಳಾ, ನಾಗರತ್ನ, ಸುಧಾರಾಣಿ, ನಜ್ಮಬಾನು ನಾಟಕ ಯಶಸ್ಸಿಗೆ ಶ್ರಮಿಸಿದರು.