ಕನಕಪುರ: ನರೇಗಾ ಯೋಜನೆಯಲ್ಲಿ ಮಹತ್ತರವಾದ ಬದಲಾವಣೆಯಾಗುತ್ತಿದೆ. ಮುಂದಿನ ಆರ್ಥಿಕ ವರ್ಷದಿಂದ ಆಪ್ಲೈನ್ ಕ್ರಿಯಾ ಯೋಜನೆಗೆ ಬದಲಾಗಿ ಆನ್ಲೈನ್ ಕ್ರಿಯಾ ಯೋಜನೆ ಸಲ್ಲಿಸಬೇಕಿದೆ ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಮೋಹನ್ ಬಾಬು ತಿಳಿಸಿದರು.

ಬೂದುಗುಪ್ಪೆ ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಸಾಮಾಜಿಕ ಪರಿಶೋಧನೆ ಸಭೆ ಹಾಗೂ ಮಕ್ಕಳ ಗ್ರಾಮ ಸಭೆಯಲ್ಲಿ ನೋಡಲ್ ಅಧಿಕಾರಿಯಾಗಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನರೇಗಾ ಯೋಜನೆಯಲ್ಲಿ ಕಾಮಗಾರಿ ಮಾಡಬೇಕಾದರೆ ಮೊದಲೇ ಕಾಮಗಾರಿ ಪಟ್ಟಿ ಸಿದ್ಧಪಡಿಸಿ ಕ್ರಿಯಾ ಯೋಜನೆ ತಯಾರಿಸಿ ಆನ್ಲೈನ್ ನಲ್ಲಿ ಸಲ್ಲಿಕೆ ಮಾಡಬೇಕಿದೆ. ಅಂತಹ ಕಾಮಗಾರಿಗಳಿಗೆ ಮಾತ್ರ ಜಿಲ್ಲಾ ಪಂಚಾಯಿತಿಯಿಂದ ಅನುಮೋದನೆ ದೊರೆತು ಕಾಮಗಾರಿ ಮಾಡಬಹುದಾಗಿದೆ.

ಗ್ರಾಮ ಸಭೆಯಲ್ಲಿ ಕಾಮಗಾರಿಗಳ ಪಟ್ಟಿ ಸಲ್ಲಿಸಿ ಕ್ರಿಯಾಯೋಜನೆ ಸಿದ್ಧಪಡಿಸಿ ಆನ್ಲೈನ್ನಲ್ಲಿ ಸಲ್ಲಿಕೆ ಮಾಡದಿದ್ದರೆ ಮಧ್ಯಂತರದಲ್ಲಿ ಯಾವ ಕಾಮಗಾರಿ ಸೇರಿಸಲು ಆಗುವುದಿಲ್ಲ ಎಂದರು.

ಸಾಮಾಜಿಕ ಲೆಕ್ಕಪರಿಶೋಧನಾ ತಾಲ್ಲೂಕು ಸಂಯೋಜಕ ಚೇತನ್ ಪಂಚಾಯಿತಿಯಲ್ಲಿ 23-24ನೇ ಸಾಲಿನಲ್ಲಿ ನಡೆದಿರುವ ಎಲ್ಲ ಕಾಮಗಾರಿಗಳ ಪರಿಶೋಧನಾ ವರದಿ ಸಭೆಯಲ್ಲಿ ಮಂಡಿಸಿದರು.

ಪಂಚಾಯತಿ ಪಿಡಿಒ ರಘು.ಕೆ.ಸಿ ಮಾತನಾಡಿ, ಪಂಚಾಯಿತಿಯಲ್ಲಿ ಈಗಾಗಲೇ ವಾರ್ಡ್ ಸಭೆ ಮಾಡಲಾಗಿದೆ. ನರೇಗಾ ಯೋಜನೆಯಲ್ಲಿ ಕೆಲಸ ಮಾಡಲು ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿ ಪಟ್ಟಿ ಮಾಡಿದ್ದು ಅವುಗಳಿಗೆ ಕ್ರಿಯಾ ಯೋಜನೆ ತಯಾರಿಸಿ ಆನ್ಲೈನ್ನಲ್ಲಿ ಅನುಮೋದನೆ ಪಡೆದು ಕೆಲಸ ಕೊಡಲಾಗುವುದು ಎಂದು ತಿಳಿಸಿದರು.

ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ, ಅರಣ್ಯ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆ ಕಾರ್ಯಕ್ರಮ ಹಾಗೂ ಸವಲತ್ತು ಬಗ್ಗೆ ತಿಳಿಸಿಕೊಟ್ಟರು. ತಾಲ್ಲೂಕು ಪುನರ್ವಸತಿ ಕಾರ್ಯಕರ್ತ ಬಿ.ಎಸ್.ನಟರಾಜು ಅಂಗವಿಕಲರ ಸಮಸ್ಯೆ, ಕುಂದು ಕೊರತೆ ಹಾಗೂ ಹಕ್ಕುಗಳ ಬಗ್ಗೆ ತಿಳಿಸಿಕೊಟ್ಟರು.

ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿಬಾಯಿ, ಉಪಾಧ್ಯಕ್ಷೆ ಪದ್ಮ.ವಿ.ಸಿ, ಸದಸ್ಯರಾದ ಸುಮಂತ್.ಬಿ.ಪಿ, ಶಿವಕುಮಾರ್.ಬಿ.ಕೆ, ನಾಗೇಶ್.ಬಿ.ಕೆ, ಚಂದ್ರಕಲಾ, ಸುಧಾ, ಕಾರ್ಯದರ್ಶಿ ಸಿದ್ದಣ್ಣ, ಕರ ವಸೂಲಿಗಾರ ಸಂಜಯ್ ಕುಮಾರ್.ಟಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.