ರಾಮನಗರ: ರಾಮ ಜನ್ಮದಿನದ ಅಂಗವಾಗಿ ಶುಕ್ರವಾರ ನಗರದ ವಿವಿಧೆಡೆ ರಾಮನವಮಿ ಭಕ್ತಿ–ಭಾವದಿಂದ ಜರುಗಿತು. ನಗರದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಲಂಕಾರ, ಅಭಿಷೇಕ ಮತ್ತಿತರ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ದೇವಸ್ಥಾನಗಳಿಗೆ ಭಕ್ತರು ಬೆಳಿಗ್ಗೆಯಿಂದಲೇ ಕುಟುಂಬ ಸಮೇತ ಭೇಟಿ ನೀಡಿ ಸರದಿಯಲ್ಲಿ ಸಾಗಿ ದೇವರ ದರ್ಶನ ಪಡೆದರು.

ನಗರದ ಛತ್ರದ ಬೀದಿಯಲ್ಲಿರುವ ಶ್ರೀರಾಮ ದೇವಾಲಯ, ಆಗ್ರಹಾರದ ಆಂಜನೇಯಸ್ವಾಮಿ ದೇವಾಲಯ, ರಾಮದೇವರ ಬೆಟ್ಟದ ಶ್ರೀಪಟ್ಟಾಭಿ ಸೀತರಾಮ ದೇವಾಲಯದಲ್ಲಿ ವಿಶೇಷ ಪೂಜೆ ಜರುಗಿತು. ಭಕ್ತರು ರಾಮದೇವರ ಬೆಟ್ಟಕ್ಕೆ ತೆರಳಿ ದೇವರ ಮೂರ್ತಿಗೆ ಪೂಜೆ ಸಲ್ಲಿಸಿದರು. ವಿಶೇಷ ಪೂಜೆ ಮಾಡಿಸಿ ತೀರ್ಥ ಮತ್ತು ಪ್ರಸಾದ ಸ್ವೀಕರಿಸಿದರು.

ರಾಮ ಭಕ್ತರು ರಾಮನಾಮ ಸಂಕೀರ್ತನೆ, ಭಜನೆ, ವಿಷ್ಣು ಸಹಸ್ರನಾಮದ ಪಠಣ, ಪಾರಾಯಣ ನಡೆಸುವ ಮೂಲಕ ಭಕ್ತಿ ಮೆರೆದರು. ರಾಮಭಕ್ತರು ಕೆಲವು ದೇವಸ್ಥಾನಗಳ ಮುಂದೆ ಹಾಗೂ ರಸ್ತೆಯ ಪ್ರಮುಖ ಸ್ಥಳಗಳಲ್ಲಿ ಶಾಮಿಯಾನ ಹಾಕಿ ಸಾರ್ವಜನಿಕರಿಗೆ ಪಾನಕ, ಕೋಸಂಬರಿ, ಮಜ್ಜಿಗೆ ವಿತರಿಸುತ್ತಿದ್ದ ದೃಶ್ಯ ಕಂಡುಬಂತು.

ನಗರದ ರೋಟರಿ ವೃತ್ತದಲ್ಲಿ ರಾಮವಿಜಯ ಯುವಶಕ್ತಿ ಬಳಗದಿಂದ ವಿಶೇಷವಾಗಿ ರಾಮನವಮಿ ಸಂಭ್ರಮ ಆಚರಿಸಲಾಯಿತು. ರಾಮದೇವರ ಫೋಟೊಗೆ ಪೂಜೆ ಸಲ್ಲಿಸಿ ಭಕ್ತರಿಗೆ ಮಜ್ಜಿಗೆ, ಪಾನಕ ಮತ್ತು ಕೊಸಂಬರಿ ವಿತರಿಸಲಾಯಿತು. ಬಳಗದ ಪ್ರಶಾಂತ್, ಪ್ರಸಾದ್, ರಘುರಾಮ್, ಮಹೇಂದ್ರ, ರಾಮಮೂರ್ತಿ, ರಾಘವೇಂದ್ರ, ಸುಹಸ್, ಮನು, ಚೇತನ್, ರಘು, ದಿನೇಶ್, ಮಹೇಶ್, ವಿನೋದ್, ಗಿರೀಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.