ಬುಧವಾರ, ನವೆಂಬರ್ 20, 2019
22 °C
ಇತಿಹಾಸ ಪುನರ್‌ ರಚನೆಯಲ್ಲಿ ದಾಖಲೆಗಳ ಪಾತ್ರ, ಸಂಸ್ಕೃತಿ, ಸಾಹಿತ್ಯ, ಆಧಾರಗಳ ವೈಶಿಷ್ಟ್ಯಗಳು’ ಕುರಿತು ಚರ್ಚೆ

ನಾಳೆಯಿಂದ ರಾಜ್ಯ ಮಟ್ಟದ ವಿಚಾರಸಂಕಿರಣ

Published:
Updated:

ಕುದೂರು(ಮಾಗಡಿ): ಗ್ರಾಮದ ನೀಲಮ್ಮ ಕೆ.ಎ. ಸತ್ಯನಾರಾಯಣಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ರಾಜ್ಯ ಪತ್ರಾಗಾರ ಇಲಾಖೆ ಮತ್ತು ಕಾಲೇಜಿನ ಕನ್ನಡ ಹಾಗೂ ಇತಿಹಾಸ ವಿಭಾಗದ ಸಹಯೋಗದಲ್ಲಿ ಸೆ.16 ಮತ್ತು 17 ರಂದು ‘ಜಿಲ್ಲೆಯ ಇತಿಹಾಸ ಪುನರ್‌ ರಚನೆಯಲ್ಲಿ ದಾಖಲೆಗಳ ಪಾತ್ರ ಮತ್ತು ಸಂಸ್ಕೃತಿ, ಸಾಹಿತ್ಯ, ಆಧಾರಗಳ ವೈಶಿಷ್ಟ್ಯಗಳು’ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ನಡೆಯಲಿದೆ ಎಂದು ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ದೇವರಾಜು.ಜಿ. ತಿಳಿಸಿದರು.

ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 16ರಂದು ಬೆಳಿಗ್ಗೆ 10.30ಕ್ಕೆ ರಾಜ್ಯ ಪತ್ರಾಗಾರ ಇಲಾಖೆಯ ನಿರ್ದೇಶಕಿ ಡಾ.ಎಸ್‌.ಅಂಬುಜಾಕ್ಷಿ ಉದ್ಘಾಟಿಸಲಿದ್ದಾರೆ. ಹಿರಿಯ ಸಾಹಿತಿ ಪ್ರೊ.ಕೆ.ಬಿ.ಸಿದ್ದಯ್ಯ ಆಶಯ ನುಡಿಗಳನ್ನಾಡಲಿದ್ದಾರೆ. ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕ ಡಾ.ಕೆ.ಆರ್‌.ರಮೇಶ್‌ ಬಾಬು, ಪತ್ರಾಗಾರ ಇಲಾಖೆಯ ಸಹಾಯಕ ನಿರ್ದೇಶಕ ಎಚ್‌.ಎಲ್‌.ಮಂಜುನಾಥ, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಸುರೇಶ್‌.ಜಿ.ಆರ್‌, ಭಾಗವಹಿಸಲಿದ್ದಾರೆ. ಪ್ರೊ.ವಿಜಯ ಕುಮಾರ್‌ ಅಧ್ಯಕ್ಷತೆ ವಹಿಸಲಿದ್ದಾರೆ.

ಬೆಳಿಗ್ಗೆ 11.30ರಿಂದ ‘ಜಿಲ್ಲೆಯ ಇತಿಹಾಸದ ಸ್ವರೂಪ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ಗೋಷ್ಠಿ’ ಸಾಹಿತಿ ಗಂ.ದಯಾನಂದ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಮಧ್ಯಾಹ್ನ 1.30ರಿಂದ ಡಾ.ಬೈರಮಂಗಲ ರಾಮೇಗೌಡ ಅಧ್ಯಕ್ಷತೆಯಲ್ಲಿ ಎರಡನೇ ಗೋಷ್ಠಿ ನಡೆಯಲಿದೆ. ಸಂಜೆ ಪ್ರೊ.ಚಲುವರಾಜು.ಸಿ ಅಧ್ಯಕ್ಷತೆಯಲ್ಲಿ ಮೂರನೇ ಗೋಷ್ಠಿ ನಡೆಯಲಿದೆ.

17ರಂದು ಬೆಳಿಗ್ಗೆ 10.30ರಿಂದ ಪ್ರೊ.ಸಿದ್ದಗಂಗಯ್ಯ ಅಧ್ಯಕ್ಷತೆಯಲ್ಲಿ ಗೋಷ್ಠಿ ನೆರವೇರಲಿದೆ. ಕೆಂಪೇಗೌಡರ ಕಾಲದ ಕೋಟೆ ಕೊತ್ತಲಗಳು, ಗುಡಿಗೋಪುರಗಳು, ಕೆಂಪೇಗೌಡ ವಂಶಜರ ಸಾಮಾಜಿಕ ಮತ್ತು ಸಾಂಸ್ಕೃತಿಕ ಕೊಡುಗೆಗಳ ಕುರಿತು ಚರ್ಚೆ ನೆರವೇರಲಿದೆ.

ಬಳಿಕ 11.30ರಿಂದ ಸಹಾಯಕ ಪ್ರಾಧ್ಯಾಪಕ ಡಾ.ಜಿ.ಹುನಮಂತರಾಯ ಪಾಲಸಂದ್ರ ಗೋಷ್ಠಿಯ ಅಧ್ಯಕ್ಷತೆಯಲ್ಲಿ ಇನ್ನೊಂದು ಗೋಷ್ಠಿ ನಡೆಯಲಿದೆ. ಮಧ್ಯಾಹ್ನ 12.15ರಿಂದ ಚಾರಿತ್ರಿಕ ದಾಖಲೆಗಳ ಮಹತ್ವ ಮತ್ತು ಅವುಗಳ ಬಳಕೆಯಲ್ಲಿ ಗಣಕೀಕರಣ ಕುರಿತು ಪ್ರೊ.ಕೃಷ್ಣೇಗೌಡ ಟಿ.ಎಸ್‌.ಅಧ್ಯಕ್ಷತೆಯಲ್ಲಿ ಗೋಷ್ಠಿ ಇದೆ ಎಂದರು.

ಮಧ್ಯಾಹ್ನ 2 ರಿಂದ ಸಮಾರೋಪ ಸಮಾರಂಭ ಪ್ರೊ.ವಿಜಯಕುಮಾರ್‌ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಾಹಿತಿ ಅಂಕನಹಳ್ಳಿ ಪಾರ್ಥ, ಲಕ್ಷ್ಮೀನರಸಿಂಹಯ್ಯ, ಪ್ರೊ.ರವಿಕುಮಾರ್‌.ಬಿ, ಕೃಷ್ಣವೇಣಿ, ಗಂ. ಶಶಿಕುಮಾರ್‌ ಭಾಗವಹಿಸುವರು.

ವಿಚಾರ ಸಂಕಿರಣದಲ್ಲಿ ಭಾಗವಹಿಸುವ ಪ್ರತಿನಿಧಿಗಳಿಗೆ ಅನ್ಯಕಾರ್ಯ ನಿಮಿತ್ತ ರಜಾ ಸೌಲಭ್ಯವಿದೆ. ಅಸಕ್ತರು 94819 86855  ಸಂಪರ್ಕಿಸಬಹುದು ಎಂದರು.

ಪ್ರತಿಕ್ರಿಯಿಸಿ (+)