ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್ ಠಾಣೆಯಲ್ಲಿ ಹಬೆ ವ್ಯವಸ್ಥೆ!

Last Updated 4 ಮೇ 2021, 5:01 IST
ಅಕ್ಷರ ಗಾತ್ರ

ರಾಮನಗರ: ಕೊರೊನಾ ಸೈನಿಕರಾಗಿ ಸೇವೆ ಸಲ್ಲಿಸುತ್ತಿರುವ ಪೊಲೀಸರ ಆರೋಗ್ಯ ಕಾಪಾಡಲು ಇಲಾಖೆ ಮುಂದಾಗಿದ್ದು, ಜಿಲ್ಲೆಯ 23 ಠಾಣೆಗಳಲ್ಲಿ ಹಬೆ ವ್ಯವಸ್ಥೆ ಅಳವಡಿಕೆ ಮಾಡಲಾಗುತ್ತಿದೆ.

ಮೊದಲ ಹಂತವಾಗಿ ಮಾಗಡಿ ಸರ್ಕಲ್‌ ವ್ಯಾಪ್ತಿಯ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಈ ಹಬೆ ಯಂತ್ರವನ್ನು ಅಳವಡಿಕೆ ಮಾಡಲಾಗಿದೆ. ಗ್ಯಾಸ್ ಸ್ಟೌ ಮೂಲಕ ಕುಕ್ಕರ್‌ನಲ್ಲಿ ನೀರನ್ನು ಕಾಯಿಸಿ, ಅದರಿಂದ ಹೊರಹೊಮ್ಮುವ ಆವಿಯನ್ನು ಪೈಪ್‌ಗಳ ಮೂಲಕ ಹರಿಸಲಾಗುತ್ತಿದೆ. ಈ ಹಬೆ ತೆಗೆದುಕೊಂಡಲ್ಲಿ ಬಾಯಿ–ಮೂಗು ಸ್ವಚ್ಛ ಆಗಲಿದ್ದು, ವೈರಾಣು ಬಾಧೆಯನ್ನು ಕೊಂಚಮಟ್ಟಿಗೆ ನಿಯಂತ್ರಿಸಬಹುದಾಗಿದೆ.

ಠಾಣೆಗೆ ಬರುವ ಹಾಗೂ ಠಾಣೆಯಿಂದ ಹೊರಹೋಗುವ ಸಿಬ್ಬಂದಿ ಈ ಹಬೆ ವ್ಯವಸ್ಥೆಯನ್ನು ಬಳಸಲಿದ್ದಾರೆ. ಜೊತೆಗೆ ಠಾಣೆಗೆ ಬರುವ ಸಾರ್ವಜನಿಕರೂ ಇದರ ಬಳಕೆ ಮಾಡಬಹುದಾಗಿದೆ. ಸದ್ಯ ಎಲ್ಲ ಠಾಣೆಗಳಲ್ಲಿ ಇದನ್ನು ಅಳವಡಿಸುತ್ತಿದ್ದು, ಇನ್ನು ಮೂರ್ನಾಲ್ಕು ದಿನದಲ್ಲಿ ಇದು ಸಾರ್ವಜನಿಕರ ಬಳಕೆಗೆ ಮುಕ್ತ ಆಗಲಿದೆ.

ಭೇಟಿ: ತಾವರೆಕೆರೆಯಲ್ಲಿ ನಿರ್ಮಾಣವಾಗಿರುವ ಹಬೆ ಯಂತ್ರವನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗಿರೀಶ್‌ ಸೋಮವಾರ ಠಾಣೆಗೆ ಭೇಟಿ ನೀಡಿ ವೀಕ್ಷಿಸಿದರು. ಠಾಣಾಧಿಕಾರಿಗಳು ನಡೆಸುತ್ತಿರುವ ಪ್ರಯತ್ನಕ್ಕೆ ಮೆಚ್ಚುಗೆ
ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT