ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪುರ: ಪಟ್ಟಣ ಪಂಚಾಯಿತಿ ಕಟ್ಟಡದಲ್ಲಿ ತಾಲ್ಲೂಕು ಕಚೇರಿ ಪ್ರಾರಂಭ

Last Updated 4 ಫೆಬ್ರುವರಿ 2023, 5:40 IST
ಅಕ್ಷರ ಗಾತ್ರ

ಕನಕಪುರ: ನೂತನ ತಾಲ್ಲೂಕು ಹಾರೋಹಳ್ಳಿಯ ನೂತನ ಹಾಗೂ ಪ್ರಥಮ ತಹಶೀಲ್ದಾರ್‌ ಆಗಿ ವಿಜಯಣ್ಣ ಅವರನ್ನು ಸರ್ಕಾರ ನಿಯೋಜಿಸಿದೆ.

ನೂತನ ತಹಶೀಲ್ದಾರ್‌ ಹಾರೋಹಳ್ಳಿಗೆ ಶುಕ್ರವಾರ ಭೇಟಿ ನೀಡಿ ಹಾರೋಹಳ್ಳಿಯ ಸ್ಥಿತಿಗತಿ ಬಗ್ಗೆ ಮತ್ತು ತಾಲ್ಲೂಕು ಕಚೇರಿ ಬಗ್ಗೆ ಪರಿಶಿಲಿಸಿದರು.

ಕನಕಪುರ ತಾಲ್ಲೂಕಿಗೆ ಸೇರಿರುವ ಹಾರೋಹಳ್ಳಿ ಮತ್ತು ಮರಳವಾಡಿ ಹೋಬಳಿಗಳು ಪ್ರತ್ಯೇಕಗೊಂಡು 4 ವರ್ಷಗಳ ಹಿಂದೆ ಹೊಸ ತಾಲ್ಲೂಕಾಗಿ ಘೋಷಣೆಯಾಗಿತ್ತು. ಆದರೆ 4 ವರ್ಷ ಕಳೆದರು ನೂತನ ತಾಲ್ಲೂಕು ರಚನೆ ಆಗಿರಲಿಲ್ಲ.

ತಾಲ್ಲೂಕು ರಚನೆಗಾಗಿ ಹಾರೋಹಳ್ಳಿಯ ಜನತೆ ನಿರಂತರ ಪ್ರತಿಭಟನೆ ಮಾಡಿ ಸರ್ಕಾರದ ಮೇಲೆ ಒತ್ತಡ ತಂದಿದ್ದರು. ಅದರ ಫಲವಾಗಿ ಹಾರೋಹಳ್ಳಿ ತಾಲ್ಲೂಕಿಗೆ ಕಂದಾಯ ಇಲಾಖೆಗೆ ಗ್ರೇಡ್‌-1 ತಹಶೀಲ್ದಾರ್‌ ಸೇರಿದಂತೆ 12 ಅಧಿಕಾರಿಗಳನ್ನು ಸರ್ಕಾರ ಮಂಜೂರು ಮಾಡಿತ್ತು.

ಅದರಲ್ಲಿ ಗ್ರೇಡ್‌-1 ತಹಶೀಲ್ದಾರ್‌ ಆಗಿ ಮಳವಳ್ಳಿಯಲ್ಲಿ ತಹಶೀಲ್ದಾರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದ ವಿಜಯಣ್ಣ ಅವರನ್ನು ಹಾರೋಹಳ್ಳಿ ನೂತನ ತಾಲ್ಲೂಕಿನ ಪ್ರಥಮ ತಹಶೀಲ್ದಾರ್‌ ಆಗಿ ವರ್ಗಾವಣೆ ಮಾಡಿದೆ.

ಪಟ್ಟಣ ಪಂಚಾಯಿತಿಯ ಕೆಳ ಮಹಡಿಯಲ್ಲಿ ತಾಲ್ಲೂಕು ಕಚೇರಿ ಪ್ರಾರಂಭಿಸಲು ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ. ಅದಕ್ಕಾಗಿ ಶುಕ್ರವಾರ ಪಟ್ಟಣ ಪಂಚಾಯಿತಿಯ ಕೆಳ ಮಹಡಿಯಲ್ಲಿದ್ದ ಎಲ್ಲಾ ವಸ್ತುಗಳನ್ನು ಸ್ಥಳಾಂತರಿಸಿ ತಾಲ್ಲೂಕು ಕಚೇರಿ ಪ್ರಾರಂಭಕ್ಕೆ ಸಿದ್ಧತೆ ನಡೆಯುತ್ತಿದೆ.

ತಾಲ್ಲೂಕು ಕಚೇರಿ ವಿಷಯವಾಗಿ ಇದ್ದ ಹಲವು ಗೊಂದಲಗಳು ಶುಕ್ರವಾರ ಕೊನೆಯಾಗಿವೆ. ರಾಮನಗರ ಉಪ ವಿಭಾಗಾಧಿಕಾರಿ ಮಂಜುನಾಥ್‌ ಅವರು ಕರಿಕಲ್‌ದೊಡ್ಡಿ ಬಳಿ ತಾತ್ಕಾಲಿಕ ಹಾಗೂ ಶಾಶ್ವತವಾಗಿ ತಾಲ್ಲೂಕು ಕಚೇರಿ ಮಾಡಬೇಕೆಂದು ಜಿಲ್ಲಾಡಳಿತಕ್ಕೆ ಶಿಫಾರಸು ಮಾಡಿದ್ದರು.

ಅದನ್ನು ವಿರೋಧಿಸಿ ಹಾರೋಹಳ್ಳಿಯ ಮುಖಂಡರು, ನಾಗರೀಕರು ಪಕ್ಷಾತೀತವಾಗಿ ಎ.ಸಿ ಅವರ ನಡೆ ಮತ್ತು ತೀರ್ಮಾನವನ್ನು ವಿರೋಧಿಸಿ ನಗರದ ಕೇಂದ್ರ ಸ್ಥಾನದಲ್ಲೇ ತಾಲ್ಲೂಕು ಕಚೇರಿ ಮತ್ತು ವಿವಿಧ ಕಚೇರಿ ಮಾಡಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು.

ಹಾರೋಹಳ್ಳಿ ಪಟ್ಟಣದಲ್ಲಿಯೇ ಈಗ ತಾಲ್ಲೂಕು ಕಚೇರಿ ಸೇರಿದಂತೆ ಎಲ್ಲ ತಾಲ್ಲೂಕು ಮಟ್ಟದ ಕಚೇರಿಗಳು ಪ್ರಾರಂಭವಾಗಲಿವೆ. ಜನತೆಯ ಹಿತದೃಷ್ಟಿಯಿಂದ ಜಿಲ್ಲಾಡಳಿತ ಈ ತೀರ್ಮಾನ ಕೈಗೊಂಡಿದೆ. ಹಾರೋಹಳ್ಳಿ ಪಟ್ಟಣ ಪಂಚಾಯತಿಯಲ್ಲೇ ತಾಲ್ಲೂಕು ಕಚೇರಿಯನ್ನು ಪ್ರಾರಂಭ ಮಾಡಲಾಗುವುದು ಎಂದು ನೂತನ ತಹಶೀಲ್ದಾರ್ ವಿಜಿಯಣ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT