ಬುಧವಾರ, ಮಾರ್ಚ್ 29, 2023
32 °C

ತಗ್ಗಿಕುಪ್ಪೆ ಗ್ರಾ.ಪಂ. ಅಧ್ಯಕ್ಷರ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ತಾಲ್ಲೂಕಿನ ತಗ್ಗಿಕುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಶಾ ಮಂಜುನಾಥ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷರಾಗಿದ್ದ ರಂಗಮ್ಮ ಗಂಗಯ್ಯ ಅವರ ಅವಧಿ ಪೂರೈಸಿದ್ದ ಹಿನ್ನೆಲೆಯಲ್ಲಿ ಸೋಮವಾರ ಚುನಾವಣೆ
ನಡೆಯಿತು.

ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಕೃಷ್ಣಮೂರ್ತಿ, ಉಪಾಧ್ಯಕ್ಷ ಎಚ್‌.ಎಂ. ರಂಗನಾಥ್‌, ಸದಸ್ಯರಾದ ಟಿ.ಎಚ್‌. ರಾಮಯ್ಯ, ರಾಮಚಂದ್ರಯ್ಯ, ದೇವರಾಜಮ್ಮ ಎಂ.ಆರ್‌. ಮುಕುಂದ, ಭಾಗ್ಯಮ್ಮ ನರಸಿಂಹಯ್ಯ, ಮಹಂತಯ್ಯ, ಮಂಜುಳಾ ಮಂಜುನಾಥ್‌, ಹುಚ್ಚಮ್ಮ, ರಾಮಕೃಷ್ಣ, ಕೃಷ್ಣ, ಜಯಮ್ಮ ಗಂಗಾಧರ, ಹನುಮಂತರಾಯಪ್ಪ, ನಾಗರತ್ನಮ್ಮ ನರಸಿಂಹಮೂರ್ತಿ, ರುದ್ರಾರಾಧ್ಯ ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.

ಪಿಡಿಒ ನಾಗರಾಜು ಜಿ., ಕಾರ್ಯದರ್ಶಿ ಲಿಂಗಮೂರ್ತಿ, ದ್ವಿತೀಯ ದರ್ಜೆ ಸಹಾಯಕ ರೇವಣಸಿದ್ದಯ್ಯ ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರಸ್ವಾಮಿ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.