ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ಪರಮಪವಿತ್ರವಾದುದು: ಬೆಸ್ತರ ಸಂಘದ ಯುವಮುಖಂಡ ಚಂದ್ರಕಾಂತ

Last Updated 26 ಜನವರಿ 2020, 13:59 IST
ಅಕ್ಷರ ಗಾತ್ರ

ಮಾಗಡಿ: ದೇಶದ ಕಾನೂನು ಕಟ್ಟಲೆಗಳನ್ನು ಒಳಗೊಂಡಿರುವ ಲಿಖಿತ ದಾಖಲೆಯೇ ಸಂವಿಧಾನ ಎಂಬುದನ್ನು ದೇಶವಾಸಿಗಳೆಲ್ಲರೂ ತಿಳಿದುಕೊಳ್ಳಬೇಕು ಎಂದು ಜಿಲ್ಲಾ ಬೆಸ್ತರ ಸಂಘದ ಯುವಮುಖಂಡ ಚಂದ್ರಕಾಂತ ತಿಳಿಸಿದರು.

ಪಟ್ಟಣದ ಗಂಗಾಧರೇಶ್ವರ ಪ್ರೌಢಶಾಲೆಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಸಂವಿಧಾನ ಪರಮಪವಿತ್ರವಾದುದು. ದೇಶವಿದೇಶಗಳ ಸಂವಿಧಾನಗಳನ್ನು ಕಷ್ಟಪಟ್ಟು ಅಧ್ಯಯನ ಮಾಡಿ ಭಾರತದ ಬಹುತ್ವಕ್ಕೆ ಸರಿಹೊಂದುವ ಸಂವಿಧಾನ ರಚಿಸಿರುವ ಬಿ.ಆರ್.ಅಂಬೇಡ್ಕರ್ ಮತ್ತು ತಂಡದವರ ಶ್ರಮವನ್ನು ಸಾರ್ಥಕಗೊಳಿಸಬೇಕಾದರೆ ಯುವಕರು ಸಂವಿಧಾನವನ್ನು ಓದಬೇಕು. ಸಂವಿಧಾನವನ್ನು ಓದಿಕೊಳ್ಳುವುದರಿಂದ ಗೊಂದಲಗಳನ್ನು ನಿವಾರಿಸಬಹುದು ಎಂದರು.

ಮುಖ್ಯಶಿಕ್ಷಕ ಚನ್ನೇಗೌಡ ಮಾತನಾಡಿ ಧಾರ್ಮಿಕ ಪುಣ್ಯಗ್ರಂಥಗಳ ನಿತ್ಯ ಪಠಣದ ಜತೆಗೆ ಸಂವಿಧಾನವನ್ನು ಅಧ್ಯಯನ ಮಾಡಬೇಕು. ವಿಶ್ವ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ. ಸೈನಿಕ, ರೈತ, ಕಾರ್ಮಿಕರ ಕಲ್ಯಾಣಕ್ಕೆ ಬೇಕಾದ ಸಕಲ ಅಂಶಗಳು ಸಂವಿಧಾನದಲ್ಲಿವೆ ಎಂದು ತಿಳಿಸಿದರು.

ದೇಶವಾಸಿಗಳೆಲ್ಲರೂ ಕಷ್ಟಪಟ್ಟು ದುಡಿದು, ತೆರಿಗೆ ಕಟ್ಟಬೇಕು. ದೇಶದ ಪ್ರಗತಿಗೆ ಸೂಚಕವಾಗಿರುವ ಶಾಂತಿಸಂದೇಶಗಳನ್ನು ಮನವರಿಕೆ ಮಾಡಿಕೊಂಡು ಶಾಂತಿಯುತ ಬಲಿಷ್ಠಭಾರತ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.

ಶಿಕ್ಷಕರಾದ ಪಿ.ಟಿ.ರಂಗಯ್ಯ, ಕುಮಾರ್ಕಾಗಿಮಡು, ಕಿರಣ್‌ ಕುಮಾರ್‌, ರಜನಿ,ಆರ್, ಪೂರ್ಣಿಮಾ, ಚಿಕ್ಕರಂಗಯ್ಯ, ಸಿದ್ದಪ್ಪ, ಪತ್ರಕರ್ತ ಪಣಕನಕಲ್ಲು ನಾಗರಾಜು, ವಿದ್ಯಾರ್ಥಿಗಳಾದ ವನುಜ, ಸುಪ್ರಿಯ, ಪ್ರಮೀಳಾ, ವಾಣಿಶ್ರೀ, ಹಿತಾಶ್ರೀ,ಹೇಮ, ಹರೀಶ್, ಶ್ರೀನಿವಾಸ್, ಮನೋಜ್, ನವೀನ್, ಮೋಹಿತ್‌ ಗಣರಾಜ್ಯೋತ್ಸವದ ಬಗ್ಗೆ ಮಾತನಾಡಿದರು. ವಿದ್ಯಾರ್ಥಿನಿಯರು ದೇಶಭಕ್ತಿ ಗೀತೆಗಳನ್ನು ಹಾಡಿದರು. ಶಾಲೆಯ ವಿದ್ಯಾರ್ಥಿಗಳೆಲ್ಲರಿಗೂ ಚಂದ್ರಕಾಂತ್ ಸಿಹಿ ನೀಡಿದರು. ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT