ಗುರುವಾರ , ಮೇ 13, 2021
18 °C

ಸ್ನೇಹಿತರ ಗಲಾಟೆ ಸಾವಿನಲ್ಲಿ ಅಂತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಡದಿ: ಹುಡುಗಿ ವಿಚಾರವಾಗಿ ನಡೆದ ಜಗಳ ಸ್ನೇಹಿತನ ಕೊಲೆಯೊಂದಿಗೆ ಅಂತ್ಯಗೊಂಡ ಘಟನೆ ಪಟ್ಟಣದಲ್ಲಿ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬೆಂಗಳೂರಿನ ಶ್ರೀನಗರದ ಭರತ್‌ ಕುಮಾರ್(22) ಕೊಲೆಯಾದವರು. ಕೊಲೆ ಮಾಡಿದ ಆರೋಪಿ ಕುಮಾರ್‌(20)ನನ್ನು ಬಂಧಿಸಲಾಗಿದೆ. 

ಭರತ್ ಕುಮಾರ್, ಪ್ರದೀಪ್, ಖುಷಿ, ಕುಮಾರ್ ಸೇರಿದಂತೆ ಸ್ನೇಹಿತರು ಪಾಂಡವಪುರ ಸಮೀಪ ಉಕ್ಕಡ ಮಾರಮ್ಮ ದೇವಸ್ಥಾನಕ್ಕೆ ಹೋಗಿದ್ದರು. ಅಲ್ಲಿಂದ ಬೆಂಗಳೂರಿಗೆ ವಾಪಸ್‌ ಬರುವಾಗ ಬಿಡದಿ ಸಮೀಪ ಕೆಂಚನಗುಪ್ಪೆ ಗೇಟ್ ಬಳಿ ಇರುವ ಎಸ್ಎ‌ಲ್‌ಎನ್ ಲಾಡ್ಜ್‌ನಲ್ಲಿ ಬೆಳಗಿನ ಜಾವ ಉಳಿದುಕೊಳ್ಳಲು ಹೋಗಿದ್ದಾರೆ. ಈ ವೇಳೆ ತಮ್ಮ ಜೊತೆಯಲ್ಲಿದ್ದ ಸ್ನೇಹಿತೆಯ ವಿಚಾರವಾಗಿ ಪ್ರದೀಪ್ ಕುಮಾರ್‌ ಮತ್ತು ಭರತ್‌ ಕುಮಾರ್‌ ನಡುವೆ ವಾಗ್ವಾದ ನಡೆದಿದೆ. ಆ ವೇಳೆ ಕುಮಾರ್ ಎಂಬಾತ ಭರತ್‌ಗೆ ಚಾಕುವಿನಿಂದ ಚುಚ್ಚಿದ್ದಾನೆ. ಸ್ನೇಹಿತರು ಭರತ್‌ನನ್ನು ರಾಮನಗರ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಭರತ್‌ನ ಶವವನ್ನು ಬೆಂಗಳೂರು–ಮೈಸೂರು ಹೆದ್ದಾರಿಯ ಮಾಯಗಾನಹಳ್ಳಿ ಸಮೀಪದ ರಸ್ತೆ ಪಕ್ಕದಲ್ಲಿ ಎಸೆದು ಹೋಗಿದ್ದಾರೆ. ವಿಚಾರಣೆ ವೇಳೆ ಕೊಲೆ ಮಾಡಿರುವುದು ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಡದಿ ಪೊಲೀಸ್‌ ಠಾಣೆಯಲ್ಲಿ ‍ಪ್ರಕರಣ ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು