ಭಾನುವಾರ, ಜೂನ್ 26, 2022
29 °C

ಕನಕಪುರ: ಜಿಂಕೆ ನುಂಗಿದ್ದ ಹೆಬ್ಬಾವು ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ಜಿಂಕೆ ನುಂಗಿದ್ದ ಹೆಬ್ಬಾವನ್ನು ಉರುಗ ಪ್ರೇಮಿ ಸ್ನೇಕ್‌ ನವೀನ್‌ ಹಿಡಿದು ಅರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟಿರುವುದು ತಾಲ್ಲೂಕಿನ ಸಾತನೂರು ಹೋಬಳಿ ಸೋಲಿಗೇರಿಯಲ್ಲಿ ಸೋಮವಾರ ನಡೆದಿದೆ.

ಸೋಲಿಗೇರಿ ಗ್ರಾಮದಲ್ಲಿ ಸುಮಾರು 35 ಕೆ.ಜಿ ತೂಕದ ಚಿಂಕೆಯನ್ನು ಭೇಟಿಯಾಡಿ ನುಂಗುವ 11 ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡಿದೆ. ತಕ್ಷಣವೇ ಅವರು ಹಾವು ಹಿಡಿಯುವ ಮಳಗಾಳ್‌ ಸ್ನೇಕ್‌ ನವೀನ್‌ ಅವರಿಗೆ ಕರೆ ಮಾಡಿದ್ದಾರೆ.

ಕೂಡಲೇ, ಸ್ನೇಹಿತನ ಜತೆಯಲ್ಲಿ ಹೊರಟ ನವೀನ್‌ ಕಾರ್ಯಪ್ರವೃತ್ತರಾಗಿ ಜಿಂಕೆಯನ್ನು ನುಂಗಿ ಜಮೀನಿನಲ್ಲಿದ್ದ ಹೆಬ್ಬಾವನ್ನು ಹಿಡಿದು ಮುತ್ತತ್ತಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. 

ಹರಿಹರ ರವೀಂದ್ರೇಗೌಡ (ಪಪ್ಪಿ), ನಿತಿನ್‌ ಮತ್ತು ಸೋಲಿಗೇರಿ ಗ್ರಾಮಸ್ಥರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು