ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಲಕ್ಷ್ಯದಿಂದಲೇ ‘ಕೆಂಪು ವಲಯ’ಕ್ಕೆ ಜಿಲ್ಲೆ: ಎಚ್‌.ಸಿ.ಬಾಲಕೃಷ್ಣ ಆಕ್ರೋಶ

Last Updated 27 ಏಪ್ರಿಲ್ 2020, 15:59 IST
ಅಕ್ಷರ ಗಾತ್ರ

ಮಾಗಡಿ:‘ಹಸಿರು ವಲಯವಾಗಿದ್ದ ರಾಮನಗರ ಜಿಲ್ಲೆಯನ್ನು ಉಸ್ತುವಾರಿ ಸಚಿವಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಪಾದರಾಯನಪುರದ ಕೋವಿಡ್‌–19 ಸೋಂಕಿತರನ್ನು ಕರೆತಂದು ‘ರೆಡ್‌ ಝೋನ್’‌ ಮಾಡಿದ್ದಾರೆ’ ಎಂದು ಕಾಂಗ್ರೆಸ್‌ ಮುಖಂಡ ಎಚ್‌.ಸಿ.ಬಾಲಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು.

ಹಂಚಿಕುಪ್ಪೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಆಶಾ, ಅಂಗನವಾಡಿ ಮತ್ತು ನರ್ಸ್‌ಗಳಿಗೆ ಆಹಾರದ ಕಿಟ್‌, ಮಾಸ್ಕ್‌, ಸ್ಯಾನಿಟೈಸರ್‌ ‌ ವಿತರಿಸಿ ಅವರು ಮಾತನಾಡಿದರು.

‘ತಮ್ಮ ನಿರ್ಲಕ್ಷ್ಯದಿಂದಲೇ ಸೋಂಕು ಹಬ್ಬಲು ಕಾರಣರಾಗಿರುವ ಸಚಿವ ಅಶ್ವತ್ಥ ನಾರಾಯಣ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದ ಅವರು, ‘ಕೋವಿಡ್‌–19ದಿಂದ ಸಂಕಟದಲ್ಲಿ ಇರುವ ಕಾರ್ಮಿಕರಿಗೆ ನಿತ್ಯ ₹ 1,000 ಸಹಾಯ ಧನ ನೀಡಬೇಕು’ ಎಂದು ಹೇಳಿದರು.

‘ಕೊರೊನಾ ವೈರಸ್‌ ಹರಡುವಿಕೆ ತಡೆಗಟ್ಟಲು ಜೀವನ ಹಂಗು ತೊರೆದು ಶ್ರಮಿಸುತ್ತಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ ಮತ್ತು ಪೊಲೀಸರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಹಾಗೂ ಪತ್ರಕರ್ತರ ಸೇವೆ ಸ್ಮರಣೀಯವಾದುದು’ ಎಂದು ಶ್ಲಾಘಿಸಿದರು.

ಕೊರೊನಾ ಹರಡದಂತೆ ತಡೆಗಟ್ಟಲು ಗ್ರಾಮೀಣ ಜನತೆಯಲ್ಲಿ ಅರಿವು ಮೂಡಿಸಬೇಕು. ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಸಂಸದ ಡಿ.ಕೆ.ಸುರೇಶ್‌ ಮಾರ್ಗದರ್ಶನದಲ್ಲಿ ತಾಲ್ಲೂಕಿನ ಎಲ್ಲಾ ಹೋಬಳಿಗಳಲ್ಲಿ ಪಕ್ಷದ ಕಾರ್ಯಕರ್ತರು ಸಕ್ರಿಯರಾಗಿದ್ದಾರೆ. ಲಾಕ್‌ಡೌನ್‌ನಿಂದ ಸಂಕಟಕ್ಕೆ ಸಿಲುಕಿರುವ ಜನತೆಗೆ ಸವಲತ್ತು ತಲುಪಿಸುತ್ತಿದ್ದೇವೆ.ಮಾಡಬಾಳ್‌ ಹೋಬಳಿಯಲ್ಲಿ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಲಾಕ್‌ಡೌನ್‌ ಆರಂಭವಾಗಿ 10 ದಿನವಾದರೂ ಶಾಸಕ ಎ.ಮಂಜುನಾಥ ಜನರ ಸೇವೆಗೆ ಮುಂದಾಗಿರಲಿಲ್ಲ. ಮಲಗಿರುವವರನ್ನು ಎಚ್ಚರಿಸಿದ್ದು ನಮ್ಮ ತಪ್ಪೇ? ಎಂದು ವ್ಯಂಗ್ಯವಾಡಿದರು.

ತಾಲ್ಲೂಕು ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಧನಂಜಯ ನಾಯ್ಕ್‌ ಮಾತನಾಡಿದರು.

ಹಂಚಿಕುಪ್ಪೆ ಗ್ರಾಮಪಂಚಾಯಿತಿ ಅಧ್ಯಕ್ಷೆ ಮಂಜುಳಾ ಲೋಕೇಶ್, , ಉಪಾಧ್ಯಕ್ಷ ಚಂದ್ರಶೇಖರಯ್ಯ, ಪಿಡಿಒ ಡಿ.ಕೆ. ಸುರೇಶ್‌ ಕುಮಾರ್‌, ತಾ.ಪಂ. ಸದಸ್ಯ ವೆಂಕಟೇಶ್‌, ಪುರಸಭೆ ಸದಸ್ಯ ಎಚ್‌.ಜೆ.ಪುರುಷೋತ್ತಮ್‌, ಕಾಂಗ್ರಸ್‌ ಮುಖಂಡ ವಿಜಯ ಕುಮಾರ್‌, ದೊಡ್ಡಿಲಕ್ಷ್ಮಣ್‌, ಪರಶಿವಮೂರ್ತಿ, ಸಿದ್ದಲಿಂಗ ಪ್ರಸಾದ್‌, ಗೋಪಾಲ್‌, ಜಯಣ್ಣ, ಗಂಗಣ್ಣ ನಾಯಕ, ರಂಗನಾಥ, ಗೊಲ್ಲರಪಾಳ್ಯದ ಜಯರಾಮಯ್ಯ, ಅಂಗನವಾಡಿ ಕಾರ್ಯಕರ್ತೆಯರಾದ ನಾಯಕನಪಾಳ್ಯದ ಸರ್ವಮಂಗಳಾ, ಮಂಚನಬೆಲೆ ಸರಸ್ವತಮ್ಮ, ರೋಜ, ದಬ್ಬಗುಳಿ ಬಿ. ಮಂಜುಳಾ, ಜೋಡುಗಟ್ಟೆ ವಿಶಾಲಮ್ಮ, ಗುಡ್ಡಹಳ್ಳಿ ಗಂಗಮ್ಮ, ಕರ್ಲಮಂಗಲದ ಅನಿತಾ, ಮಾರೇಗೌಡನ ದೊಡ್ಡಿ ಚಂದ್ರಮ್ಮ, ಕಲ್ಯಾಣ ಒಡೆಯರ ಮಠದ ಸುಧಾಮಣಿ, ಹಂಚಿಕುಪ್ಪೆ ಸಭೀನಾ, ವಿ.ಜಿ.ದೊಡ್ಡಿ ಸುಧಾಮಣಿ, ಗಂಗಮ್ಮ, ವಿಶಾಲ, ಸುಧಾಮಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT