ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾನ್ಯರಂತೆ ಬದುಕುವ ಇಂಗಿತ; ಸೋಲೂರು ಗದ್ದುಗೆ ಮಠದ ಕಿರಿಯ ಸ್ವಾಮೀಜಿ ನಾಪತ್ತೆ

Last Updated 14 ಆಗಸ್ಟ್ 2022, 20:30 IST
ಅಕ್ಷರ ಗಾತ್ರ

ರಾಮನಗರ: ಮಾಗಡಿ ತಾಲ್ಲೂಕಿನ ಸೋಲೂರು ಗದ್ದುಗೆ ಮಠದ ಶಿವ ಮಹಾಂತ ಸ್ವಾಮೀಜಿ ನಾಪತ್ತೆ ಆಗಿದ್ದಾರೆ.

ಸ್ವಾಮೀಜಿ ಸಹಿವುಳ್ಳ ಪತ್ರವೊಂದು ದೊರೆತಿದ್ದು, ಸನ್ಯಾಸ ಜೀವನ ತ್ಯಜಿಸಿ ಸಾಮಾನ್ಯರಂತೆ ಬದುಕುವ ಇಂಗಿತ ವ್ಯಕ್ತಪಡಿಸಿದ್ದಾರೆ.

‘ಒಮ್ಮೆ ಕಾವಿ ಬಟ್ಟೆ ಬಿಚ್ಚಿದ ಮೇಲೆ ಮತ್ತೆ ಎಂದಿಗೂ ಅದನ್ನು ತೊಡಲಾರೆ. ಹಾಗೇನಾದರೂ ನನ್ನನ್ನು ಹುಡುಕುವ ಪ್ರಯತ್ನ ಮಾಡಿದರೆ ನನ್ನ ಹೆಣ ನೋಡುತ್ತೀರಿ. ನನ್ನನ್ನು ಬದುಕಲು ಬಿಡಿ ಎಂದು ಅಂಗಲಾಚಿ ಬೇಡಿಕೊಳ್ಳುತ್ತೇನೆ’ ಎಂದು ಪತ್ರದಲ್ಲಿ ವಿನಂತಿಸಿದ್ದಾರೆ.

ಮಾಗಡಿ ತಾಲ್ಲೂಕಿನ ವೀರಾಪುರದವರಾದ ಹರೀಶ್ ಎರಡು ವರ್ಷದ ಹಿಂದೆ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದರು. ನಂತರದಲ್ಲಿ ಸೋಲೂರು ಗದ್ದುಗೆ ಮಠದ ಕಿರಿಯ ಸ್ವಾಮೀಜಿ ಆಗಿ ಪಟ್ಟಾಧಿಕಾರ ಸ್ವೀಕರಿಸಿದ್ದರು. ಮಠದಿಂದ ಯಾವುದೇ ದೂರು ದಾಖಲಾಗಿಲ್ಲ.

ದಾವಣಗೆರೆಯಲ್ಲಿ ಪತ್ತೆ?: ಸ್ವಾಮೀಜಿ ನಾಪತ್ತೆ ಸುದ್ದಿಯಾದ ಬೆನ್ನಲ್ಲೇ ದಾವಣಗೆರೆಯಲ್ಲಿ ಅವರು ಪತ್ತೆ ಆಗಿರುವುದಾಗಿ ಸುದ್ದಿ ಹಬ್ಬಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT