ಶುಕ್ರವಾರ, ಮಾರ್ಚ್ 31, 2023
31 °C

ಪಾದರಹಳ್ಳಿ ಪ್ರೌಢಶಾಲೆಯಲ್ಲಿ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ತಾಲ್ಲೂಕಿನ ಪಾದರಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾನುವಾರ ಕಳ್ಳತನ ನಡೆದಿದ್ದು, ಎರಡು ಕಂಪ್ಯೂಟರ್, ಮಾನಿಟರ್, ಕೀ ಬೋರ್ಡ್ಸ್ ಮತ್ತು ಪಂಪು ಮೋಟಾರ್ ಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ.

ಶಾಲೆಗೆ ಅಳವಡಿಸಿದ್ದ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಿ, ಮುಖ್ಯ ಶಿಕ್ಷಕರ ಕೊಠಡಿ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ಬೀರುವಿನಲ್ಲಿದ್ದ ಕಡತಗಳನ್ನು ಚೆಲ್ಲಿ, ಅಲ್ಲಿದ್ದ ವಿವಿಧ ಕೊಠಡಿಗಳ ಬೀಗದ ಕೀಗಳನ್ನು ತೆಗೆದುಕೊಂಡಿದ್ದಾರೆ. ನಂತರ ಕೊಠಡಿಗಳನ್ನು ತೆಗೆದು ಕಳ್ಳತನ ಮಾಡಿದ್ದಾರೆ. ಈ ಶಾಲೆಯಲ್ಲಿ ಇದು ನಾಲ್ಕನೇ ಬಾರಿಗೆ ಕಳ್ಳತನ ನಡೆದಿದೆ ಎಂದು ಮುಖ್ಯ ಶಿಕ್ಷಕ ಆರ್.ಕೆ. ಬೈರಲಿಂಗಯ್ಯ ತಿಳಿಸಿದರು.

ಗ್ರಾಮೀಣ ಠಾಣೆ ಪೊಲೀಸರು, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.