ರಾಮನಗರ: ರಸ್ತೆಯುಬ್ಬು (ಹಂಪ್ಸ್) ಲೆಕ್ಕಿಸದೆ ಅತಿ ವೇಗವಾಗಿ ಬಂದ ಕಾರು ಚಾಲಕ, ನಿಯಂತ್ರಣ ಕಳೆದುಕೊಂಡು ಮುಂದೆ ಹೋಗುತ್ತಿದ್ದ ಸಿಮೆಂಟ್ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದರಿಂದ ಮೂವರು ಮೃತಪಟ್ಟಿರುವ ಘಟನೆ ಕನಕಪುರ ರಸ್ತೆಯ ಅಗರ ಕ್ರಾಸ್ನಲ್ಲಿ ಭಾನುವಾರ ನಡೆದಿದೆ.

ಕಾರು ಇಂಟೀರಿಯರ್ ಕೆಲಸ ಮಾಡುತ್ತಿದ್ದ ಬೆಂಗಳೂರಿನ ತಿಲಕ್ ನಗರದ ಸೈಫ್ ಪಾಷಾ (23), ಕಾಫಿ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದ ಬಿಟಿಎಂ ಲೇಔಟ್ನ ಯೂಸುಫ್ ಖಾನ್ (22) ಹಾಗೂ ಹಾರ್ಡ್ವೇರ್ ಅಂಗಡಿಯಲ್ಲಿದ್ದ ಟ್ಯಾಂಕ್ ಗಾರ್ಡನ್ನ ಅಜರ್ ಪಾಷಾ (22) ಮೃತರು. ಘಟನೆಯಲ್ಲಿ ಇನ್ನೆರಡು ಕಾರುಗಳಿಗೆ ಹಾನಿಯಾಗಿದೆ.

ಸೈಫ್, ಯೂಸುಫ್, ಅಜರ್ ಸೇರಿದಂತೆ ಒಟ್ಟು 6 ಸ್ನೇಹಿತರು ರಾತ್ರಿ 1.30ರ ಸುಮಾರಿಗೆ ಹಾರೋಹಳ್ಳಿ ಕಡೆಗೆ ಅತಿ ವೇಗವಾಗಿ ಹೋಗುತ್ತಿದ್ದರು. ತನ್ನ ಅಣ್ಣನ ಕಾರು ಚಲಾಯಿಸುತ್ತಿದ್ದ ಸೈಫ್ ಅಗರ ಕ್ರಾಸ್ ಬಳಿ ಹಂಪ್ಸ್ ಗಮನಿಸದೆ ಮುಂದಕ್ಕೆ ಕಾರು ಚಲಾಯಿಸಿ, ನಿಯಂತ್ರಣ ಕಳೆದುಕೊಂಡಿದ್ದಾರೆ. ಇದರಿಂದಾಗಿ ಕಾರು ಹಾರಿ ಮುಂದೆ ಹೋಗುತ್ತಿದ್ದ ಸಿಮೆಂಟ್ ಲಾರಿಗೆ ಹಿಂದಿನಿಂದ ಅಪ್ಪಳಿಸಿದೆ ಎಂದು ಕಗ್ಗಲೀಪುರ ಠಾಣೆ ಪೊಲೀಸರು ತಿಳಿಸಿದರು.

ಅಪ್ಪಳಿಸಿದ ತೀವ್ರತೆಗೆ ಕಾರಿನಲ್ಲಿದ್ದ ಮೂವರ ಪೈಕಿ ಸೈಫ್ ಸ್ಥಳದಲ್ಲೇ ಮೃತಪಟ್ಟಿದ್ದು, ಉಳಿದಿಬ್ಬರು ಗಂಭೀರವಾಗಿ ಗಾಯಗೊಂಡು ಕಾರಿನೊಳಗೆ ಸಿಲುಕಿದ್ದರು. ಘಟನೆ ಸಂದರ್ಭದಲ್ಲಿ ಕಾರಿನ ಹಿಂದಿದ್ದ ಸ್ನೇಹಿತರ ಕಾರು ಸಹ ರಸ್ತೆಯುಬ್ಬು ಗಮನಿಸದೆ ನಿಯಂತ್ರಣ ಕಳೆದುಕೊಂಡು, ಪಕ್ಕದಲ್ಲಿ ಹೋಗುತ್ತಿದ್ದ ಮತ್ತೊಂದು ಕ್ಯಾಬ್ಗೆ ಗುದ್ದಿದೆ ಎಂದು ಪೊಲೀಸರು ಹೇಳಿದರು.

ಇದರಿಂದಾಗಿ ಕ್ಯಾಬ್ ಸೇರಿದಂತೆ ಎರಡಕ್ಕೂ ಹಾನಿಯಾಗಿದ್ದು, ಒಂದು ಕಾರಿನಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೂಡಲೇ ಕ್ಯಾಬ್ ಚಾಲಕ ಹಾಗೂ ಇತರರು ಗಂಭೀರವಾಗಿ ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ನಸುಕಿನಲ್ಲಿ ಕೊನೆಯುಸಿರೆಳೆದರು. ಡಿಕ್ಕಿಯ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬದವರಿಗೆ ಶವಗಳನ್ನು ಹಸ್ತಾಂತರಿಸಲಾಯಿತು ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.