ಗುರುವಾರ , ಮೇ 13, 2021
22 °C

ಮುಷ್ಕರದ ನಡುವೆಯೂ ಬಸ್ ಸಂಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರವು 9ನೇ ದಿನವಾದ ಗುರುವಾರವೂ ಮುಂದುವರಿಯಿತು. ಈ ನಡುವೆ ಅಲ್ಲಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚಾರ ಕೈಗೊಂಡವು.

ರಾಮನಗರ ಡಿಪೊ ವ್ಯಾಪ್ತಿಯಲ್ಲಿ 55 ಕೆಎಸ್‌ಆರ್‌ಟಿಸಿ ಬಸ್‌ಗಳು ಓಡಾಟ ನಡೆಸಿದವು. ಕನಕಪುರ ಡಿಪೊದಿಂದ 12, ಆನೇಕಲ್‌ ಡಿಪೊದಿಂದ 17, ಚನ್ನಪಟ್ಟಣದಿಂದ 4, ಹಾರೋಹಳ್ಳಿಯಿಂದ 6, ರಾಮನಗರದಿಂದ 9 ಹಾಗೂ ಮಾಗಡಿಯಿಂದ 7 ಬಸ್‌ಗಳು ಸಂಚಾರ ಕೈಗೊಂಡವು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಯುಗಾದಿ ಹೊಸತೊಡಕು ಮುಗಿದು ಜನರು ಉದ್ಯೋಗ ಮತ್ತಿತರ ಕಾರಣಗಳಿಗೆ ಪರ ಊರುಗಳತ್ತ ಹೊರಟಿದ್ದು. ಬೆಳಗ್ಗೆ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು. ಹೀಗಾಗಿ ಖಾಸಗಿ ವಾಹನಗಳೂ ಹೆಚ್ಚು ಓಡಾಟ ನಡೆಸಿದವು. ಆದರೆ, ಮಧ್ಯಾಹ್ನದ ನಂತರ ಪ್ರಯಾಣಿಕರು ಹೆಚ್ಚು ಇರಲಿಲ್ಲ.

ತಪಾಸಣೆ: ಕನಕಪುರ ಮಾರ್ಗಮಧ್ಯದಲ್ಲಿನ ಕೆಲವು ಬಸ್‌ಗಳನ್ನು ಕಗ್ಗಲೀಪುರ ಭಾಗದ ಪೊಲೀಸರು ತಪಾಸಣೆಗೆ ಒಳಪಡಿಸಿದರು. 18–20 ಬಸ್‌ಗಳನ್ನು ತಪಾಸಣೆ ಮಾಡಿದ್ದು, ಕೆಲವು ಬಸ್‌ಗಳಿಗೆ ಮಾತ್ರ ದಂಡ ವಿಧಿಸಲಾಗಿದೆ. ಇನ್ನೂ ಕೆಲವು ಬಸ್‌ಗಳನ್ನು ಪೊಲೀಸರು ಹಣ ಪಡೆದು ಹಾಗೆಯೇ ಬಿಟ್ಟಿದ್ದಾರೆ ಎಂದು ಬಸ್‌ ಮಾಲೀಕರು ದೂರಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು