ಭಾನುವಾರ, ಅಕ್ಟೋಬರ್ 2, 2022
20 °C

ಮಾಗಡಿ: ದನದ ಕೊಟ್ಟಿಗೆ ಗೋಡೆ ಕುಸಿದು ಇಬ್ಬರು ಮಕ್ಕಳು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಮಾಗಡಿ ತಾಲ್ಲೂಕಿನ ಕೂಡ್ಲೂರು ಕ್ರಾಸ್ ಬಳಿ ಭಾನುವಾರ ಮುಂಜಾನೆ ದನದ ಕೊಟ್ಟಿಗೆಯ ಗೋಡೆಯು ಪಕ್ಕದ ಶೆಡ್ ಮೇಲೆ ಕುಸಿದು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.

ಫರ್ವೀನ್ (4) ಹಾಗೂ ಇಷಿಕಾ ( 3) ಮೃತರು. ಮೀನಾ ಬಿತ್ತು‌ ( 30) ಹಾಗೂ ಮೋನಿಷಾ ( 35) ಎಂಬುವರು ಗಾಯಗೊಂಡಿದ್ದಾರೆ. ನೇಪಾಳದ ಮೂಲದ ಈ ಕಾರ್ಮಿಕರ ಕುಟುಂಬವು ಸಮೀಪದ ಹೋಟೆಲ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಶೆಡ್ ನಲ್ಲಿ ವಾಸವಿತ್ತು.

ನಿರಂತರ ಮಳೆಯಿಂದಾಗಿ ಗಂಗರಂಗಮ್ಮ ಎಂಬುವರಿಗೆ ಸೇರಿದ ದನದ ಕೊಟ್ಟಿಗೆಯ ಗೋಡೆಯು ಪಕ್ಕದಲ್ಲೇ ಇದ್ದ ಶೆಡ್ ನ ಮೇಲೆ ಹಠಾತ್ ಕುಸಿಯಿತು. ಇದರಿಂದಾಗಿ ನಿದ್ರೆಯಲ್ಲಿದ್ದ ಮಕ್ಕಳು ಚಿರನಿದ್ರೆಗೆ ಜಾರಿದರು. ಗಾಯಾಳುಗಳಿಗೆ ಮಾಗಡಿ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು