ಇಬ್ಬರು ಯುವಕರು ನೀರುಪಾಲು?

ಶುಕ್ರವಾರ, ಏಪ್ರಿಲ್ 26, 2019
35 °C

ಇಬ್ಬರು ಯುವಕರು ನೀರುಪಾಲು?

Published:
Updated:

ರಾಮನಗರ: ಕುಂಬಳಗೂಡು ಪೊಲೀಸ್‌ ಠಾಣೆ ವ್ಯಾಪ್ತಿಯ ಹೊಸಕೆರೆಯಲ್ಲಿ ಮುಳುಗಿ ಇಬ್ಬರು ಯುವಕರು ನೀರುಪಾಲಾದ ಶಂಕೆ ವ್ಯಕ್ತವಾಗಿದೆ.

ಸುಮಾರು 26-27 ವಯಸ್ಸಿನ ಇಬ್ಬರು ಯುವಕರು ಭಾನುವಾರ ನೀರಿಗೆ ಇಳಿದಿದ್ದು, ನಾಪತ್ತೆಯಾಗಿದ್ದಾರೆ. ಈ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದು ಎಂದು ಹೇಳಲಾಗಿದೆ. ನಾಪತ್ತೆಯಾದ ಯುವಕರ ಬಗ್ಗೆ ಹೆಚ್ಚಿನ ವಿವರ ಲಭ್ಯವಾಗಿಲ್ಲ.

ವಿಷಯ ತಿಳಿಯುತ್ತಲೇ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕೆರೆಯಲ್ಲಿ ಶವಗಳಿಗಾಗಿ ಶೋಧ ಕಾರ್ಯ ನಡೆಸಿದರು. ಆದರೆ ರಾತ್ರಿಯವರೆಗೂ ಯಾವುದೇ ದೇಹಗಳು ಪತ್ತೆಯಾಗಲಿಲ್ಲ. ಕತ್ತಲೆಯ ಕಾರಣ ಶೋಧ ಕಾರ್ಯಾಚರಣೆಯು ಸ್ಥಗಿತಗೊಂಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !