ಶುಕ್ರವಾರ, ಡಿಸೆಂಬರ್ 6, 2019
21 °C

ಅವೈಜ್ಞಾನಿಕ ಪಿಎಫ್‌ ಕಡಿತ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ಇಲ್ಲಿನ ಚಕ್ರಬಾವಿ ಮೊರಾರ್ಜಿ ವಸತಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 13 ಜನ ಹೊರಗುತ್ತಿಗೆ ನೌಕರರಿಗೆ ಮಾಸಿಕ ವೇತನದಲ್ಲಿ ಅವೈಜ್ಞಾನಿಕವಾಗಿ ಪಿಎಫ್‌ ಕಡಿತಗೊಳಿಸುವುದರ ವಿರುದ್ಧ ಸಿಬ್ಬಂದಿ ಪ್ರತಿಭಟಿಸಿದರು.

ಹೊರಗುತ್ತಿಗೆ ನೌಕರ ರಾಜೇಶ್‌ ಮಾತನಾಡಿ, ‘ಮಾಸಿಕ ₹ 9,380 ವೇತನ ನೀಡಲಾಗುತ್ತಿತ್ತು. ಅದರಲ್ಲಿ ಪಿಎಫ್‌ ಹೆಸರಿನಲ್ಲಿ ಮಾಸಿಕ ₹ 300 ಕಡಿತಗೊಳಿಸುತ್ತಿದ್ದಾರೆ. ಕಡಿತಗೊಳಿಸಿದ ಹಣದ ಬಗ್ಗೆ ಯಾವುದೇ ದಾಖಲೆ ಕೊಡುತ್ತಿಲ್ಲ. ವಸತಿ ಶಾಲೆ ಆದ ಕಾರಣ ಇಡೀ ದಿನ ಇಲ್ಲಿಯೇ ಇರಬೇಕು. ಕನಿಷ್ಠ ಕೂಲಿ ₹ 15 ಸಾವಿರ ನೀಡಬೇಕು. ಗುತ್ತಿಗೆ ಪಡೆದಿರುವ ಕುಣಿಗಲ್‌ನ ಮಾರುತಿ ಎಂಟರ್‌ ಪ್ರೈಸರ್ಸ್‌ ವೇತನ ನೀಡುವಲ್ಲಿ ವಿಳಂಬ ಮಾಡುತ್ತಿದೆ. ನೀಡುತ್ತಿರುವ ಕನಿಷ್ಠ ವೇತನದಲ್ಲೂ ಪಿಎಫ್‌ ಹೆಸರಿನಲ್ಲಿ ಅವೈಜ್ಞಾನಿಕವಾಗಿ ಕಡಿತ ಮಾಡುತ್ತಿದ್ದು, ದಾಖಲೆ ಸಹ ನೀಡದೆ ವಂಚಿಸಲಾಗುತ್ತಿದೆ’ ಎಂದು ಆರೋಪಿಸಿದರು.

ಹೊರಗುತ್ತಿಗೆ ಸಿಬ್ಬಂದಿ ಶಿವಲಿಂಗಮ್ಮ ಮಾತನಾಡಿ, ‘ನಮಗೆ ನೀಡುತ್ತಿರುವ ಕಡಿಮೆ ವೇತನವನ್ನು ಸಮಯಕ್ಕೆ ಸರಿಯಾಗಿ ನೀಡದೆ ಸತಾಯಿಸುತ್ತಿದ್ದಾರೆ. ಪಿಎಫ್‌ ಹೆಸರಿನಲ್ಲಿ ಅಕ್ರಮ ನಡೆದಿರಬಹುದು ಎಂದು ಅನುಮಾನವಾಗುತ್ತಿದೆ’ ಎಂದು ದೂರಿದರು.

ಹೊರಗುತ್ತಿಗೆ ನೌಕರರರಾದ ವಿನಯಕುಮಾರ್‌, ಹನುಮಂತಪ್ಪ, ಗಂಗಮ್ಮ, ಜಯಲಕ್ಷ್ಮಮ್ಮ, ಗೀತಾ, ಶಾರದಮ್ಮ, ಮಂಜಮ್ಮ, ಮಂಜಪ್ಪ, ಪ್ರತಿಭಟನೆ ನಡೆಸಿದರು.

ಪ್ರತಿಕ್ರಿಯಿಸಿ (+)