ಹಲಗೂರು:ಸಮೀಪದ ವಿ.ಬಸಾಪುರ ಗ್ರಾಮದಲ್ಲಿರುವ ಬಸವೇಶ್ವರಸ್ವಾಮಿ ದೇವಸ್ಥಾನದಲ್ಲಿ ಬಸವೇಶ್ವರಸ್ವಾಮಿ ದೇವರ ಬಸಪ್ಪನವರ ಮುದ್ರಾಧಾರಣೆ ಕಾರ್ಯಕ್ರಮ ಎರಡು ದಿನಗಳ ಕಾಲ ಭಕ್ತಿ ಪೂರ್ವಕವಾಗಿ ನಡೆಯಿತು.

ಮೇ 13 ರಂದು ಬುಧವಾರ ಸಂಜೆ ಗೋಧೋಳಿ ಲಗ್ನದಲ್ಲಿ ಅಕ್ರೋಧಕ ಗಣಪತಿ ಪೂಜೆ, ಪುಣ್ಯಹಃ ಪಂಚಗವ್ಯ, ಪ್ರೋಕ್ಷಣೆ ಹಾಗೂ ಗಣಪತಿ ಸಹಿತ ಪರಿವಾರ ದೇವತಾ ಹೋಮ, ಲಘು ಪೂರ್ಣಾಹುತಿ ಮತ್ತು ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಯಿತು.

ಮೇ 14 ರಂದು ಗುರುವಾರ ಬೆಳಿಗ್ಗೆ ಶುಭ ಬ್ರಾಹ್ಮಿ ಮುಹೂರ್ತದಲ್ಲಿ ಪ್ರಧಾನ ಕಳಸ ಸ್ಥಾಪನೆ, ನವಗ್ರಹ, ಮೃತ್ಯುಂಜಯ ಹೋಮ, ಗ್ರಾಮ ದೇವತಾ ಪೂಜೆ ಅಭಿಷೇಕ, ಗಣಪತಿ ಹಾಗೂ ಪರಿವಾರ ದೇವತಾ ಹೋಮ, ಶ್ರೀ ಬಸಪ್ಪನವರಿಗೆ ಮುದ್ರಾಧಾರಣೆ ಮಂತ್ರ ಧೀಕ್ಷಾ ಕಾರ್ಯಕ್ರಮ ನಡೆಯಿತು.

ಪ್ರಧಾನ ಹೋಮ, ಕಲಾ ಹೋಮ, ನೂತನ ಕಲ್ಯಾಣಿಯಿಂದ ಹೊ-ಹೊಂಬಾಳೆ ಸಮೇತ ಶ್ರೀ ಕಾರ್ಕಳಿ ಬಸಪ್ಪ, ಹಲಗೂರು ಶ್ರೀ ಅಘೋರ ಭದ್ರಕಾಳಿ ಬಸಪ್ಪ, ಶ್ರೀ ಬಸವೇಶ್ವರ ಬಸಪ್ಪ ವಿ.ಬಸಾಪುರ ದೇವರುಗಳ ಮೆರವಣಿಗೆ ಮಾಡಲಾಯಿತು. ನಂತರ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಅನ್ನಸಂತರ್ಪಣೆ ನಡೆಯಿತು.

ವಿದ್ವಾನ್ ಪ್ರಸಾದ್ ಅಘೋರ ಹಾಗೂ ಶ್ರೀ ಚಂದ್ರಶೇಖರ್ ಆರಾಧ್ಯ ಅವರ ನೇತೃತ್ವದಲ್ಲಿ ದೇವಾಲಯದಲ್ಲಿ ಪೂಜಾ ಕಾರ್ಯಕ್ರಮಗಳು ನಡೆದವು. ವಿ.ಬಸಾಪುರ, ಎನ್.ಕೋಡಿಹಳ್ಳಿ, ಒದು ಬಸಪ್ಪನದೊಡ್ಡಿ, ಮಾರಗೌಡನಹಳ್ಳಿ, ವಳಗೆರೆದೊಡ್ಡಿ, ಬುಯ್ಯನದೊಡ್ಡಿ ಸೇರಿ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.

ಗ್ರಾಮದ ಹಿರಿಯರಾದ ನಾಗಣ್ಣ, ನಾಗೇಂದ್ರ, ಬಿ.ಆನಂದ, ಚಂದ್ರಹಾಸ, ಕೆ.ನಂಜುಂಡೇಗೌಡ, ನಿಖಿಲ್, ದೇವರಾಜು, ರವೀಂದ್ರ, ಪ್ರಭು, ಸತೀಶ್ ಕುಮಾರ್, ಹನುಮಂತೇಗೌಡ, ನಾಗೇಂದ್ರ, ಕೆಂಪೇಗೌಡ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-40-636881005

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.