ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ | ವಾಹನ ಕಳ್ಳನ ಬಂಧನ: 3 ಬೈಕ್ ಜಪ್ತಿ

Published : 25 ಆಗಸ್ಟ್ 2024, 16:10 IST
Last Updated : 25 ಆಗಸ್ಟ್ 2024, 16:10 IST
ಫಾಲೋ ಮಾಡಿ
Comments

ರಾಮನಗರ: ದ್ವಿಚಕ್ರ ವಾಹನಗಳ ಕಳ್ಳನೊಬ್ಬನನ್ನು ಬಂಧಿಸಿರುವ ಕಗ್ಗಲೀಪುರ ಠಾಣೆ ಪೊಲೀಸರು, ಆತನಿಂದ 2 ಬೈಕ್‌ ಹಾಗೂ ಒಂದು ಸ್ಕೂಟರ್ ವಶಪಡಿಸಿಕೊಂಡಿದ್ದಾರೆ. ಬೆಂಗಳೂರು ದಕ್ಷಿಣ ತಾಲ್ಲೂಕಿನ ಪಟ್ಟರೆಡ್ಡಿಪಾಳ್ಯದ ರಾಹುಲ್ (19) ಬಂಧಿತರ ಆರೋಪಿ.

ಕೂಲಿ ಕೆಲಸ ಮಾಡುವ ರಾಹುಲ್, ಅದರ ಜೊತೆಗೆ ವಾಹನಗಳ ಕಳ್ಳನತವನ್ನು ರೂಢಿ ಮಾಡಿಕೊಂಡಿದ್ದ. ಕಗ್ಗಲಿಪುರ ಠಾಣೆ ವ್ಯಾಪ್ತಿಯ ಎರಡು ಕಡೆ ಇತ್ತೀಚೆಗೆ ನಡೆದಿದ್ದ ಬೈಕ್ ಕಳ್ಳತನ ಪ್ರಕರಣದ ಬೆನ್ನತ್ತಿದ್ದಾಗ ರಾಹುಲ್‌ನನ್ನು ಬಂಧಿಸಲಾಯಿತು. ಆತನ ಬಂಧನದಿಂದಾಗಿ ಕೆಂಗೇರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮತ್ತೊಂದು ದ್ವಿಚಕ್ರ ವಾಹನ ಕಳ್ಳತನ ಪ್ರಕರಣ ಸಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯಿಂದ ₹1.35 ಲಕ್ಷ ಮೌಲ್ಯದ ಪಲ್ಸರ್, ಸ್ಪೆಂಡರ್ ಬೈಕ್ ಹಾಗೂ ಡಿಯೊ ಸ್ಕೂಟರ್ ವಶಪಡಿಸಿಕೊಳ್ಳಲಾಗಿದೆ. ಡಿವೈಎಸ್ಪಿ ದಿನಕರ ಶೆಟ್ಟಿ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ವೆಂಕಟೇಶ್ ಕೆ. ನೇತೃತ್ವದಲ್ಲಿ ಪಿಎಸ್‌ಐ ನವಲೇಶ್, ಕಾನ್‌ಸ್ಟೆಬಲ್‌ಗಳಾದ ನಾಗರಾಜ, ರಾಹುಲ್ ಸಂಕ್ರಟ್ಟಿ ಹಾಗೂ ಇತರ ಸಿಬ್ಬಂದಿ ಬಂಧನ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT