ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ದೇವರ ಜಾತ್ರಾ ಮಹೋತ್ಸವ

Last Updated 21 ಮೇ 2019, 14:07 IST
ಅಕ್ಷರ ಗಾತ್ರ

ಮಾಗಡಿ: ಪರಿಸರದ ಪಶು –ಪ್ರಾಣಿಗಳೇ ರೈತಾಪಿ ಜನರ ದೈವತ್ವ ಎಂದು ಗ್ರಾಮದ ಮುಖಂಡ ದೇವೇಂದ್ರಕುಮಾರ್‌ ತಿಳಿಸಿದರು.

ವಿರುಪಾಪುರದಲ್ಲಿ ನಡೆದ ಮಂದೆಮ್ಮ, ಹೊನ್ನಾಪುರದಮ್ಮ, ಮಾರಮ್ಮ, ಜರಗದಮ್ಮ ದೇವರ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಲಾವಿದೆ ಟಿ.ಜಿ.ಭವ್ಯ ಮಾತನಾಡಿ, ಜನಪದರದ್ದು ನಿರ್ಭಯ ಭಕ್ತಿ, ಕೋಳೂರು ಕೊಡಗೂಸು, ಬೇಡರ ಕಣ್ಣಪ್ಪ ಅವರಂತಹ ಮುಗ್ಧರು ಶುದ್ಧ ಭಕ್ತಿ ಪ್ರತೀಕ ಎಂದು ಅಭಿಪ್ರಾಯಪಟ್ಟರು.

‌ಗ್ರಾಮದ ಮುಖಂಡರಾದ ರಾಜಣ್ಣ, ಮಂಜಯ್ಯ, ಗೋವಿಂದಯ್ಯ, ಜಯಣ್ಣ, ಮೂಕಣ್ಣ, ಪೂಜಾರಪ್ಪ ಮಾತನಾಡಿದರು.
ಗ್ರಾಮದ ಮಹಿಳೆಯರಿಂದ ಹೂವು – ಹೊಂಬಾಳೆ ಹಸಿತಂಬಿಟ್ಟಿನ ಆರತಿ ಮೆರವಣಿಗೆ ನಡೆಯಿತು. ಮಂಗಳವಾರ ಬೆಳಿಗ್ಗೆ ಅಗ್ನಿಕುಂಡ ನಡೆಯಿತು. ಮೇ22 ರಂದು ಮಧ್ಯಾಹ್ನ ಸಾಮೂಹಿಕ ಭೋಜನೆ ಏರ್ಪಡಿಸಲಾಗಿದೆ. ಮೇ 23ರಂದು ಸಂಜೆ ‘ಗಂಗೆ– ಗೌರಿ’ ಪೌರಾಣಿಕ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT